ಹೊಸಪೇಟೆ: ಹೊಸಪೇಟೆ-ಕೊಟ್ಟೂರು-ಹರಿಹರ ಮಾರ್ಗವಾಗಿ ಪ್ಯಾಸೆಂಜರ್ ರೈಲು ಸಂಚಾರ ಮಾಡುತ್ತಿದೆ. ಆದರೆ ಈ ರೈಲಿನ ಸಂಚಾರದ ವೇಳಾಪಟ್ಟಿಯಿಂದ ಈ ಭಾಗದ ಪ್ರಯಾಣಿಕರಿಗೆ ಪ್ರಯೋಜನವಾಗಿಲ್ಲ. ಆದ್ದರಿಂದ ವೇಳಾಪಟ್ಟಿಯನ್ನು ಬದಲಾಯಿಸಿ ಎಂದು ರೈಲ್ವೆ ಅಭಿವೃದ್ದಿ ಕ್ರಿಯಾ ಸಮಿತಿಗೆ ಮನವಿ ಸಲ್ಲಿಸಲಾಯಿತು.
ವಿಜಯನಗರ ರೈಲ್ವೇ ಅಭಿವೃದ್ದಿ ಕ್ರಿಯಾ ಸಮಿತಿಯು ನೈಋತ್ಯ ರೈಲ್ವೇ ವಲಯದ ವಿಭಾಗಿಯ ವ್ಯವಸ್ಥಾಪಕ ಅರವಿಂದ ಮಲಕ್ಕೇಡ್ ಅವರಿಗೆ ಸೋಮವಾರ ಮನವಿ ಪ್ರತ್ರವನ್ನು ಸಲ್ಲಿಸಿ ಪ್ರಯಾಣಿಕರ ತೊಂದರೆಗಳನ್ನು ಅಧಿಕಾರಿಯ ಜೊತೆ ಚರ್ಚಿಸಿದರು.
ನಂತರ ಈ ಬಗ್ಗೆ ರೈಲ್ವೇ ಅಭಿವೃದ್ದಿ ಕ್ರಿಯಾ ಸಮಿತಿಯ ಅಧ್ಯಕ್ಷ ವೈ.ಯ ಮುನೇಶ ಮಾತನಾಡಿ, ಪ್ರತಿದಿನ ಬೆಳಿಗ್ಗೆ 7 ಗಂಟೆಗೆ ಹರಿಹರದಿಂದ ನಿರ್ಗಮಿಸಿ ಮಧ್ಯಾಹ್ನ 12:30ಕ್ಕೆ ಹೊಸಪೇಟೆಗೆ ಆಗಮಿಸುತ್ತದೆ. 130 ಕಿ.ಮೀ. ಅಂತರವನ್ನು ಕ್ರಮಿಸಲು 6 ಗಂಟೆಗಳ ವಿಳಂಬವಾಗುತ್ತದೆ ಅದಕ್ಕಾಗಿ ಸಂಚಾರದ ವೇಳೆಯನ್ನು ಬದಲಾವಣೆ ಮಾಡಿ ಎಂದರು.
ಕಳೆದ ಎರಡು ದಶಕಗಳ ಹೋರಾಟದ ಫಲವಾಗಿ ಸೆಪ್ಟೆಂಬರ್ 2009ರಲ್ಲಿ ಪ್ರಾರಂಭ ಮಾಡುತ್ತದೆ. ಈ ರೈಲು ತಡವಾಗಿ ಹೋಗುವುದರಿಂದ ಪ್ರಯಾಣಿಕರು ಸಂಚರಿಸಲು ಇಚ್ಚಿಸುವುದಿಲ್ಲ. ಆದುದರಿಂದ ಈ ರೈಲಿನ ವೇಳಾಪಟ್ಟಿಯನ್ನು ಬದಲಾಯಿಸಿ ಪ್ರತಿದಿನ ಬೆಳಿಗ್ಗೆ 7 ಗಂಟೆಗೆ ಹೊಸಪೇಟೆ ಮತ್ತು ಹರಿಹರದಿಂದ ಏಕ ಕಾಲಕ್ಕೆ ರೈಲ್ವೇ ಸಂಚಾರಕ್ಕೆ ಕ್ರಮ ಕೈಗೊಂಡರೆ ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಹರಪನಹಳ್ಳಿ ಭಾಗದ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ. ಮತ್ತು ರೈಲ್ವೆ ಇಲಾಖೆಗೆ ಹೆಚ್ಚಿನ ಆದಾಯ ಬರುತ್ತದೆ ಎಂದರು.
ಅದೇ ರೀತಿಯಾಗಿ ವಿಜಾಪುರ, ಹೊಸಪೇಟೆ, ಯಶವಂತಪುರ ವೇಳಾಪಟ್ಟಿಯನ್ನು ಪರಿಷ್ಕರಿಸುವ ಅಗತ್ಯವಿದೆ. ಈ ರೈಲು ಪ್ರತಿದಿನ ಮಧ್ಯರಾತ್ರಿ 12:30 ಕ್ಕೆ ಹೊಸಪೇಟೆಗೆ ಆಗಮಿಸುವುದರಿಂದ ಸುರಕ್ಷತವಲ್ಲದ ಕಾರಣಕ್ಕಾಗಿ ಪ್ರಯಾಣಿಕರು ಈ ರೈಲಿನಲ್ಲಿ ಸಂಚರಿಸುವುದಿಲ್ಲ. ಇದರಿಂದ ಇಲಾಖೆಗೂ ಆದಾಯ ನಷ್ಟವಾಗುತ್ತಿದೆ. ಆದುದರಿಂದ ಈ ರೈಲು ಪ್ರತಿದಿನ ರಾತ್ರಿ 10 ಗಂಟೆಗೆ ಹೊಸಪೇಟೆಗೆ ಆಗಮಿಸಿ ಕೊಟ್ಟೂರು ಮಾರ್ಗವಾಗಿ ಬೆಳಿಗ್ಗೆ 8 ಗಂಟೆಗೆ ಒಳಗಾಗಿ ಯಶವಂತಪುರ ನಿಲ್ದಾಣಕ್ಕೆ ತಲುಪುವುಂತೆ ರೈಲ್ವೆ ವೇಳಾಪಟ್ಟಿಯನ್ನು ಪರಿಷ್ಕರಿಸಬೇಕೆಂದು ಆಗ್ರಹಿಸಿದರು.