ETV Bharat / state

ಮಳೆ ನೀರು ಮಿಶ್ರಿತ ಪೆಟ್ರೋಲ್​​ ಹಾಕಿ ಎಡವಟ್ಟು..ವಾಹನ ಸವಾರರ ಪರದಾಟ

ತೀವ್ರ ಮಳೆಯಿಂದಾಗಿ ನಗರದ ಪೆಟ್ರೋಲ್ ಬಂಕ್​​​​ನಲ್ಲಿ ನೀರು ಮಿಶ್ರಿತ ಪೆಟ್ರೋಲ್​ ವಾಹನಗಳಿಗೆ ಹಾಕಿರುವುದು ಬೆಳಕಿಗೆ ಬಂದಿದೆ. ಇದರಿಂದಾಗಿ 6 ಬೈಕ್​ಗಳು ಕೆಟ್ಟು ನಿಂತರೆ, ಹಲವು ಪ್ರಯಾಣಿಕರು ಪರದಾಡಬೇಕಾಯಿತು.

Rain water mixed petrol puts in for bikes in Hospete
ಮಳೆ ನೀರು ಮಿಶ್ರಿತ ಪೆಟ್ರೋಲ್​​ ಹಾಕಿ ಎಡವಟ್ಟು
author img

By

Published : Oct 6, 2020, 2:54 PM IST

Updated : Oct 6, 2020, 3:43 PM IST

ಹೊಸಪೇಟೆ (ಬಳ್ಳಾರಿ): ನಗರದ ಡ್ಯಾಂ ರಸ್ತೆಯ ಎಸ್.ಆರ್.ಗುಜ್ಜಲ್‌ ಪೆಟ್ರೋಲ್ ಬಂಕ್​ನಲ್ಲಿ ಮಳೆನೀರು ಮಿಶ್ರಿತಗೊಂಡ ಪೆಟ್ರೋಲ್ ಹಾಕಿದ ಪರಿಣಾಮ 6 ಬೈಕ್​ಗಳ ಇಂಜಿನ್​ ಸೀಜ್​ ಆಗಿರುವ ಘಟನೆ ನಡೆದಿದೆ.

ಬೈಕ್ ಸವಾರರು ಪೆಟ್ರೋಲ್ ಹಾಕಿಸಿಕೊಂಡು ಮುಂದೆ ಹೋಗುತ್ತಿದ್ದಂತೆ ಬೈಕ್​ ಆಫ್​ ಆಗಿದ್ದು, ಪರೀಕ್ಷಿಸಿದ ಬಳಿಕ ಪೆಟ್ರೋಲ್​​ನಲ್ಲಿ ನೀರು ಬೆರೆತಿರುವುದು ಬೆಳಕಿಗೆ ಬಂದಿದೆ. ಅಲ್ಲದೆ ಹಲವರು ತಮ್ಮ ವಾಹನ ಸ್ಟಾರ್ಟ್ ಆಗದೆ ಪರದಾಡಿದ್ದಾರೆ. ಈ ವಿಷಯ ತಿಳಿದು ವಾಹನ ಸವಾರರು ಪೆಟ್ರೋಲ್ ಬಂಕ್ ಮಾಲಿಕರ ವಿರುದ್ಧ ಆಕ್ರೋಶ ಹೊರಹಾಕಿ ಬೈಕ್​ ಸರಿಪಡಿಸಿಕೊಡುವಂತೆ ಆಗ್ರಹಿಸಿದ್ದರು.

ಮಳೆ ನೀರು ಮಿಶ್ರಿತ ಪೆಟ್ರೋಲ್​​ ಹಾಕಿದ ಸಿಬ್ಬಂದಿ

ಈ ಕುರಿತು ಮಾತನಾಡಿದ ಬಂಕ್ ಮಾಲಿಕ ಶಿವರಾಮಪ್ಪ ಗುಜ್ಜಲ್​​​, ಮಳೆ ನೀರು ಮಿಶ್ರಣವಾಗಿರುವುದರಿಂದ ಈ ರೀತಿಯ ಅವಘಡ ಸಂಭವಿಸಿದೆ. ಸಿಬ್ಬಂದಿಗೆ ಈ ಬಗ್ಗೆ ತಿಳಿದಿಲ್ಲ. ಕೆಟ್ಟುಹೋದ ಎಲ್ಲಾ ಬೈಕ್​ಗಳನ್ನು ರಿಪೇರಿ ಮಾಡಿಸಿ ಕೊಡಲಾಗುವುದು ಎಂದರು.

Last Updated : Oct 6, 2020, 3:43 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.