ಸಂವಿಧಾನ ರಚನಾ ಸಭೆಯು 1949ರ ನವೆಂಬರ್ 26ರಂದು ಭಾರತೀಯ ಸಂವಿಧಾನವನ್ನು ಅಂಗೀಕರಿಸಿದ ನೆನಪಿಗಾಗಿ ಪ್ರತೀ ವರ್ಷ ನ.26ನ್ನು 'ರಾಷ್ಟ್ರೀಯ ಸಂವಿಧಾನ ದಿನ' ಎಂದು ಆಚರಿಸಲಾಗುತ್ತದೆ. ಜನವರಿ 26, 1950ರಂದು ಜಾರಿಗೆ ಬಂದ ಸಂವಿಧಾನ, ಭಾರತದ ಪ್ರಜಾಪ್ರಭುತ್ವ, ಜಾತ್ಯತೀತ ಮತ್ತು ಸಮಾನತೆಯ ಚೌಕಟ್ಟನ್ನು ವ್ಯಾಖ್ಯಾನಿಸುವ ಮೂಲಭೂತ ದಾಖಲೆಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಕಾನೂನು ಮತ್ತು ನ್ಯಾಯ ಸಚಿವಾಲಯ ಹೇಳಿದೆ.
ಸಂವಿಧಾನವನ್ನು ಅಂಗೀಕರಿಸಿ 75 ವರ್ಷಗಳು ಪೂರ್ಣಗೊಂಡಿದ್ದು, ಈ ವರ್ಷ ಸಂವಿಧಾನದ ಅಮೃತಮಹೋತ್ಸವವನ್ನು ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಈ ವರ್ಷವಿಡೀ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವು ಕಾರ್ಯಕ್ರಮಗಳನ್ನು ಆಯೋಜಿಸಿವೆ.
Constitution Day marks 75 years of our democratic foundation. PM @narendramodi's government reinforces its ideals with landmark reforms, honoring Dr. Ambedkar’s vision and ensuring inclusivity, justice, and empowerment for all citizens.
— narendramodi_in (@narendramodi_in) November 26, 2024
Explore #75YearsOfConstitution in your… pic.twitter.com/wWli2THUfD
ಇತಿಹಾಸ: ಜನರಲ್ಲಿ ಸಾಂವಿಧಾನಿಕ ಮೌಲ್ಯಗಳನ್ನು ಉತ್ತೇಜಿಸುವ ಉದ್ದೇಶದಿಂದ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ 2015ರ ನವೆಂಬರ್ 19ರಂದು, ಸರ್ಕಾರ ಪ್ರತೀ ವರ್ಷ ನವೆಂಬರ್ 26 ಅನ್ನು ಸಂವಿಧಾನ ದಿನವನ್ನಾಗಿ ಆಚರಿಸುತ್ತದೆ ಎಂದು ಘೋಷಿಸಿತು. ಈ ಆಚರಣೆಯು ರಾಷ್ಟ್ರಕ್ಕೆ ಮಾರ್ಗದರ್ಶನ ನೀಡುವ ಪ್ರಜಾಸತ್ತಾತ್ಮಕ ತತ್ವಗಳ ಜ್ಞಾಪನೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಸಚಿವಾಲಯ ತಿಳಿಸಿದೆ.
ನಮ್ಮ ಸಂವಿಧಾನ, ನಮ್ಮ ಹೆಮ್ಮೆ: ಭಾರತ ಸಂವಿಧಾನದ 75ನೇ ವಾರ್ಷಿಕೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ಸಾಮಾನ್ಯ ಜನರಲ್ಲೂ ಸಂವಿಧಾನದ ಬಗ್ಗೆ ತಿಳುವಳಿಕೆ ಹೆಚ್ಚಿಸುವ ಉದ್ದೇಶದಿಂದ ಈ ವರ್ಷದ ಜನವರಿ 24ರಂದು 'ನಮ್ಮ ಸಂವಿಧಾನ, ನಮ್ಮ ಹೆಮ್ಮೆ' ಅಭಿಯಾನವನ್ನು ಪ್ರಾರಂಭಿಸಲಾಗಿದೆ. ಈ ವರ್ಷಪೂರ್ತಿ ಅಭಿಯಾನದ ಮೂಲಕ ಸಂವಿಧಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಪ್ರಯತ್ನಿಸಲಾಗುತ್ತದೆ ಎಂದು ತಿಳಿಸಿದೆ.
ಮೂಲಭೂತ ಹಕ್ಕಗಳು: ಭಾರತೀಯ ಸಂವಿಧಾನ ಪ್ರತಿಯೊಬ್ಬ ನಾಗರಿಕರಿಗೂ, ಸಮಾನತೆಯ ಹಕ್ಕು, ವಾಕ್ ಸ್ವಾತಂತ್ರ್ಯದ ಹಕ್ಕು ಮತ್ತು ನ್ಯಾಯಯುತ ವಿಚಾರಣೆಯ ಹಕ್ಕುಗಳಂತಹ ತಮ್ಮ ಹಕ್ಕುಗಳನ್ನು ಪಡೆಯಲು ಅಧಿಕಾರ ನೀಡಿದೆ. ಜೊತೆಗೆ, ರಾಷ್ಟ್ರ ಹಾಗೂ ಸಮಾಜದ ಕಡೆಗೆ ತಮ್ಮ ಮೂಲಭೂತ ಕರ್ತವ್ಯಗಳನ್ನು ಪಾಲಿಸುವುದನ್ನೂ ಹೇಳಿದೆ.
ಪ್ರೋತ್ಸಾಹಕ್ಕಾಗಿ ಯುವಕರ ಪಾಲ್ಗೊಳ್ಳುವಿಕೆ: ಸಂವಿಧಾನದ ಅಮೃತಮಹೋತ್ಸವದ ಪ್ರಯುಕ್ತ MY ಭಾರತ್ ಸ್ವಯಂಸೇವಕರು, NSS, NCC, ಮತ್ತು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸೇರಿದಂತೆ ವಿವಿಧ ಸಂಸ್ಥೆಗಳ 10,000ಕ್ಕೂ ಹೆಚ್ಚು ಯುವಕರು ಭಾಗವಹಿಸುವ ನಿರೀಕ್ಷೆಯಿರುವ ಪಾದಯಾತ್ರೆಯನ್ನು ಆಯೋಜಿಸಲಾಗಿದೆ. ಸಾಂಸ್ಕೃತಿಕ ಪ್ರದರ್ಶನಗಳು, ಶೈಕ್ಷಣಿಕ ಪ್ರದರ್ಶನಗಳು ಮತ್ತು ಸಂವಾದಾತ್ಮಕ ಕಾರ್ಯಾಗಾರಗಳು ಯುವ ನಾಗರಿಕರಲ್ಲಿ ಸಾಂವಿಧಾನಿಕ ಮೌಲ್ಯಗಳ ತಿಳುವಳಿಕೆಯನ್ನು ಇನ್ನೂ ಗಾಢವಾಗಿಸುತ್ತವೆ. ವಿಕಸಿತ ಭಾರತ- 2047ರ ದೃಷ್ಟಿಕೋನದಲ್ಲಿ ಸಾಂವಿಧಾನಿಕ ಮೌಲ್ಯಗಳನ್ನು ಸಂರಕ್ಷಿಸುವ ಮತ್ತು ಉತ್ತೇಜಿಸುವಲ್ಲಿ ಯುವಕರ ಪಾತ್ರವನ್ನು ಒತ್ತಿಹೇಳುವ ಮೂಲಕ ವರ್ಷವಿಡೀ ಸಂವಿಧಾನ ಅಮೃತಮಹೋತ್ಸವ ಆಚರಣೆಯಲ್ಲಿ ಈ ಎಲ್ಲಾ ಕಾರ್ಯಕ್ರಮಗಳು ಮಹತ್ವದ ಮೈಲಿಗಲ್ಲು ಸಾಧಿಸಲಿವೆ.
India celebrates #ConstitutionDay to mark the adoption of the Indian Constitution by the Constituent Assembly on Nov 26, 1949. It is also known as " national law day."#SamvidhanDiwas pic.twitter.com/3qrgRHEbSG
— DD News (@DDNewslive) November 26, 2022
ಸಂವಿಧಾನದ ಮಹತ್ವ: ಸಾಂವಿಧಾನಿಕ ವಿಚಾರಗಳ ಬಗ್ಗೆ ನಾಗರಿಕರಿಗೆ ಅರಿವು ಮೂಡಿಸುವುದು, ಸಂವಿಧಾನ ಉತ್ತೇಜಿಸುವ ನ್ಯಾಯ, ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವದ ಮೌಲ್ಯಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಅದರ ಮೂಲ ತತ್ವಗಳನ್ನು ಜನಸಾಮಾನ್ಯರಿಗೆ ತಿಳಿಯಪಡಿಸುವುದು.
ಇದನ್ನೂ ಓದಿ: 1976ರ ಸಂವಿಧಾನ ಪೀಠಿಕೆ ತಿದ್ದುಪಡಿ ಸಿಂಧುತ್ವದ ಪ್ರಶ್ನೆ: ಇದೇ ನ.25 ರಂದು ಸುಪ್ರೀಂ ಕೋರ್ಟ್ ತೀರ್ಪು