ETV Bharat / state

’ಜಿಲ್ಲೆ ಒಡೆಯಬೇಡಿ.. ನಮಗೆ ಅಖಂಡ ಬಳ್ಳಾರಿ ಜಿಲ್ಲೆಯೇ ಇರಲಿ’: ದಲಿತ ಸಂಘಟನೆಗಳ ಪ್ರತಿಭಟನೆ - ಅಖಂಡ ಬಳ್ಳಾರಿ ಜಿಲ್ಲೆ

ಅಖಂಡ ಬಳ್ಳಾರಿ ಜಿಲ್ಲೆಯನ್ನಾಗಿಯೇ ಮುಂದುವರಿಸುವಂತೆ ಆಗ್ರಹಿಸಿ ದಲಿತಪರ ಸಂಘಟನೆಗಳ ಒಕ್ಕೂಟದ ಮುಖಂಡರು ಗಡಿಗಿ ಚೆನ್ನಪ್ಪ ವೃತ್ತದ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತಿಭಟನೆ
author img

By

Published : Oct 4, 2019, 9:16 AM IST

ಬಳ್ಳಾರಿ: ಅಖಂಡ ಬಳ್ಳಾರಿ ಜಿಲ್ಲೆಯನ್ನಾಗಿಯೇ ಮುಂದುವರಿಸುವಂತೆ ಆಗ್ರಹಿಸಿ ದಲಿತಪರ ಸಂಘಟನೆಗಳ ಒಕ್ಕೂಟದ ಮುಖಂಡರು ಬಳ್ಳಾರಿಯ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಗುರುವಾರ ಬೃಹತ್ ಪ್ರತಿಭಟನೆ ನಡೆಸಿದ್ದಾರೆ.

ಪ್ರತಿಭಟನೆ ನಡೆಸಿದ ದಲಿತಪರ ಸಂಘಟನೆಗಳು

ಇದಕ್ಕೂ ಮುಂಚೆ ಬಳ್ಳಾರಿ ನಗರದ ಡಬಲ್ ರಸ್ತೆಯಲ್ಲಿನ ಈಡಿಗ ಸಮುದಾಯದ ವಿದ್ಯಾರ್ಥಿ ನಿಲಯದಿಂದ ಗಡಿಗಿ ಚೆನ್ನಪ್ಪ ವೃತ್ತದ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿದರು.

ಬ್ರಿಟಿಷ್ ಕಾಲದಿಂದಲೂ ತನ್ನದೇ ಆದ ಅಸ್ತಿತ್ವ ಹೊಂದಿರುವ ಈ ಬಳ್ಳಾರಿ ಜಿಲ್ಲೆಯ ವಿಭಜನೆಗೆ ರಾಜ್ಯ ಸರ್ಕಾರ ಮುಂದಾಗಿರೋದು ಖಂಡನಾರ್ಹ. ಸಾಂಸ್ಕೃತಿಕವಾಗಿ ಒಂದೇ ಮನಸ್ಥಿತಿ ಹೊಂದಿರುವ ಪಶ್ಚಿಮ ತಾಲೂಕುಗಳು ಸ್ವಾತಂತ್ರೋತ್ತರದ ನಂತರ ನಡೆದ ಕರ್ನಾಟಕ ಏಕೀಕರಣ ಹೋರಾಟದಲ್ಲಿ ಬಳ್ಳಾರಿ ನಗರದೊಂದಿಗೆ ಸೇರಿ ಚಳವಳಿಯಲ್ಲಿ ಪಾಲ್ಗೊಂಡಿದ್ದರು. ಅದರ ಫಲವಾಗಿ ಜಿಲ್ಲೆ ಮೈಸೂರು ಪ್ರಾಂತ್ಯಕ್ಕೆ ಸೇರಿತು. ಅಂದಿನಿಂದ ಜಿಲ್ಲೆಯ ಎಲ್ಲ ತಾಲೂಕುಗಳು ಆಡಳಿತಾತ್ಮಕವಾಗಿ, ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ, ಸಾಂಸ್ಕೃತಿಕವಾಗಿ ಒಂದಾಗಿವೆ. ಆದರೆ, ಇತ್ತೀಚೆಗೆ ನಡೆದ ರಾಜಕೀಯ ಅಸ್ಥಿರತೆಯಿಂದ ಜಿಲ್ಲೆ ವಿಭಜನೆಗೆ ಮುಂದಾಗಿರೋದು ಸಲ್ಲದು ಎಂದು ಮುಂಡ್ರಿಗಿ ನಾಗರಾಜ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಕೆಲ ವಿಕೃತಿ ಮನಸ್ಸುಗಳು ರಾಜಕೀಯ ಲಾಭಕ್ಕಾಗಿ ಪ್ರತ್ಯೇಕ ವಿಜಯನಗರ ಜಿಲ್ಲೆ ರಚನೆಯ ಬೇಡಿಕೆ ಇಟ್ಟಿದ್ದಾರೆ ಎಂದು ದೂರಿದ್ದಾರೆ. ಕೆಲವರು ರಾಜಕೀಯ ಲಾಭ ಪಡೆಯಲು ಈ ಜಿಲ್ಲೆಯನ್ನು ಬಲಿ ಕೊಡಲು ಯತ್ನಿಸುತ್ತಿದ್ದಾರೆ. ಜಿಲ್ಲೆಯ ಜನತೆ ಅದಕ್ಕೆ ಅವಕಾಶ ನೀಡಬಾರದು. ಕಳೆದ 200 ವರ್ಷಗಳಿಂದಲೂ ಅಖಂಡವಾಗಿರುವ ಜಿಲ್ಲೆಯಲ್ಲಿ ಎಲ್ಲ ಸಮುದಾಯಗಳು ಸೌಹಾರ್ದತೆಯಿಂದ ಜೀವನ ನಡೆಸುತ್ತಿವೆ. ವಿಶ್ವಪ್ರಸಿದ್ದ ಹಂಪಿ ಮತ್ತು ಜಿಲ್ಲೆಯ ರೈತರ ಜೀವನಾಡಿ ತುಂಗಭದ್ರಾ ಜಲಾಶಯ ಇರುವ ಜಿಲ್ಲೆಯಲ್ಲಿ ಜನತೆ ಅಖಂಡತೆಯಿಂದ ಬದುಕಲು ಇಚ್ಚಿಸುತ್ತಿದ್ದಾರೆ. ಆದ್ದರಿಂದ ಮಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಜಿಲ್ಲೆಯ ವಿಭಜನೆಗೆ ಆಸ್ಪದ ನೀಡದೇ, ವಿಜಯನಗರ ಜಿಲ್ಲೆಯ ಪ್ರಸ್ತಾಪವನ್ನೇ ಕೈಬಿಟ್ಟು ಅಖಂಡ ಬಳ್ಳಾರಿ ಜಿಲ್ಲೆಯನ್ನಾಗಿಯೇ ಮುಂದುವರೆಸಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಎ.ಮಾನಯ್ಯ ಒತ್ತಾಯಿಸಿದ್ದಾರೆ.

ದಲಿತಪರ ಸಂಘಟನೆಗಳ ಒಕ್ಕೂಟದ ಮುಖಂಡರಾದ ಸೋಮಶೇಖರ್​, ಅರುಣಕುಮಾರ್​, ಹೆಚ್.ಅರ್ಜುನ, ಎ.ಕೆ.ಹುಲುಗಪ್ಪ, ಕಪ್ಪಗಲ್ಲು ಹುಲಿಯಪ್ಪ, ಡಿ.ವಿಜಯಕುಮಾರ, ಶ್ರೀನಿವಾಸ ಕರ್ಚೇಡು ಇನ್ನಿತರರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Intro:ಅಖಂಡ ಬಳ್ಳಾರಿ ಜಿಲ್ಲೆಯನ್ನಾಗಿಯೇ ಮುಂದುವರಿಸುವಂತೆ ಆಗ್ರಹಿಸಿ ದಲಿತಪರ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ
ಬಳ್ಳಾರಿ: ಅಖಂಡ ಬಳ್ಳಾರಿ ಜಿಲ್ಲೆಯನ್ನಾಗಿಯೇ ಮುಂದುವರಿ ಸುವಂತೆ ಆಗ್ರಹಿಸಿ ದಲಿತಪರ ಸಂಘಟನೆಗಳ ಒಕ್ಕೂಟದ ಮುಖಂಡರು ಬಳ್ಳಾರಿಯ ಜಿಲ್ಲಾಧಿಕಾರಿ ಕಚೇರಿ ಆವರಣ
ದಲ್ಲಿಂದು ಬೃಹತ್ ಪ್ರತಿಭಟನೆ ನಡೆಸಿದ್ದಾರೆ.
ಇದಕ್ಕೂ ಮುಂಚೆ ಬಳ್ಳಾರಿ ನಗರದ ಡಬಲ್ ರಸ್ತೆಯಲ್ಲಿನ ಈಡಿಗ ಸಮುದಾಯದ ವಿದ್ಯಾರ್ಥಿನಿಲಯದಿಂದ ಗಡಿಗಿ ಚೆನ್ನಪ್ಪ ವೃತ್ತದ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ
ಕೂಗುತ್ತಾ ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಬ್ರಿಟಿಷ್ ಕಾಲದಿಂದಲೂ ತನ್ನದೇ ಆದ ಅಸ್ತಿತ್ವ ಹೊಂದಿರುವ ಈ ಬಳ್ಳಾರಿ ಜಿಲ್ಲೆಯ ವಿಭಜನೆಗೆ ರಾಜ್ಯ ಸರ್ಕಾರ ಮುಂದಾಗಿರೋದು ಖಂಡನಾರ್ಹ. ಸಾಂಸ್ಕೃತಿಕವಾಗಿ ಒಂದೇ ಮನಸ್ಥಿತಿ ಹೊಂದಿರುವ ಪಶ್ಚಿಮ ತಾಲ್ಲೂಕುಗಳು ಸ್ವಾತಂತ್ರೋತ್ತರದ ನಂತರ ನಡೆದ ಕರ್ನಾಟಕ ಏಕೀಕರಣ ಹೋರಾಟದಲ್ಲಿ ಬಳ್ಳಾರಿ ನಗರದೊಂದಿಗೆ ಸೇರಿ ಚಳವಳಿಯಲ್ಲಿ ಪಾಲ್ಗೊಂಡಿದ್ದರು. ಅದರ ಫಲವಾಗಿ ಜಿಲ್ಲೆ ಮೈಸೂರು ಪ್ರಾಂತ್ಯಕ್ಕೆ ಸೇರಿತು. ಅಂದಿನಿಂದ ಜಿಲ್ಲೆಯ ಎಲ್ಲ ತಾಲ್ಲೂಕುಗಳು ಆಡಳಿತಾತ್ಮಕವಾಗಿ, ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ, ಸಾಂಸ್ಕೃತಿಕವಾಗಿ ಒಂದಾಗಿವೆ. ಆದರೆ, ಈಚೆಗೆ ನಡೆದ ರಾಜಕೀಯ ಅಸ್ಥಿರತೆಯಿಂದ ಜಿಲ್ಲೆ ವಿಭಜನೆಗೆ ಮುಂದಾಗಿ ರೋದು ಸಲ್ಲದು ಎಂದು ಮುಂಡ್ರಿಗಿ ನಾಗರಾಜ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಕೆಲ ವಿಕೃತಿ ಮನಸ್ಸುಗಳು ರಾಜಕೀಯ ಲಾಭಕ್ಕಾಗಿ ಪ್ರತ್ಯೇಕ ವಿಜಯನಗರ ಜಿಲ್ಲೆ ರಚನೆಯ ಬೇಡಿಕೆ ಇಟ್ಟಿದ್ದಾರೆ ಎಂದು ದೂರಿದ್ದಾರೆ.
Body:ಕೆಲವರು ರಾಜಕೀಯ ಲಾಭ ಪಡೆಯಲು ಈ ಜಿಲ್ಲೆಯನ್ನು ಬಲಿ ಕೊಡಲು ಯತ್ನಿಸುತ್ತಿದ್ದಾರೆ. ಜಿಲ್ಲೆಯ ಜನತೆ ಅದಕ್ಕೆ ಅವಕಾಶ ನೀಡಬಾರದು. ಕಳೆದ 200 ವರ್ಷಗಳಿಂದಲೂ ಅಖಂಡವಾಗಿರುವ ಜಿಲ್ಲೆಯಲ್ಲಿ ಎಲ್ಲ ಸಮುದಾಯಗಳು ಸೌಹಾರ್ದತೆಯಿಂದ ಜೀವನ ನಡೆಸುತ್ತಿವೆ. ವಿಶ್ವಪ್ರಸಿದ್ದ ಹಂಪಿ ಮತ್ತು ಜಿಲ್ಲೆಯ ರೈತರ ಜೀವನಾಡಿ ತುಂಗಭದ್ರಾ ಜಲಾಶಯ ವಿರುವ ಜಿಲ್ಲೆಯಲ್ಲಿ ಜನತೆ ಅಖಂಡತೆ ಯಿಂದ ಬದುಕಲು ಇಚ್ಚಿಸುತ್ತಿದ್ದಾರೆ. ಆದ್ದರಿಂದ ಮಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಜಿಲ್ಲೆಯ ವಿಭಜನೆಗೆ ಆಸ್ಪದ ನೀಡದೆ, ವಿಜಯನಗರ ಜಿಲ್ಲೆಯ ಪ್ರಸ್ತಾಪವನ್ನೇ ಕೈಬಿಟ್ಟು ಅಖಂಡ ಬಳ್ಳಾರಿ ಜಿಲ್ಲೆಯನ್ನಾಗಿಯೇ ಮುಂದುವರೆಸಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಎ.ಮಾನಯ್ಯ ಒತ್ತಾಯಿಸಿದ್ದಾರೆ.
ದಲಿತಪರ ಸಂಘಟನೆಗಳ ಒಕ್ಕೂಟದ ಮುಖಂಡರಾದ ಸೋಮ ಶೇಖರ, ಅರುಣಕುಮಾರ, ಹೆಚ್.ಅರ್ಜುನ, ಎ.ಕೆ.ಹುಲುಗಪ್ಪ, ಕಪ್ಪಗಲ್ಲು ಹುಲಿಯಪ್ಪ, ಡಿ.ವಿಜಯಕುಮಾರ, ಶ್ರೀನಿವಾಸ ಕರ್ಚೇಡು ಇನ್ನಿತರರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_4_DALITHPAR_SANGHTANEGAL_OKKUTA_PROTEST_7203310

KN_BLY_4m_DALITHPAR_SANGHTANEGAL_OKKUTA_PROTEST_7203310
ETV Bharat Logo

Copyright © 2025 Ushodaya Enterprises Pvt. Ltd., All Rights Reserved.