ಬಳ್ಳಾರಿ: ಪೆರೋಲ್ ಮೇಲೆ ಹೊರ ಬಂದಿದ್ದ ನಗರದ ಕೇಂದ್ರ ಕಾರಾಗೃಹದ ಸಜಾಬಂದಿ ಪರಾರಿಯಾಗಿದ್ದಾನೆ.
ಕೊರಚರ ನಾಗೇಶ (46) ಕಾರಾಗೃಹಕ್ಕೆ ವಾಪಸ್ ತೆರಳದ ಹಿನ್ನೆಲೆಯಲ್ಲಿ ಗಾಂಧಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಗೇಶ್ ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆಯ ನಿವಾಸಿಯಾಗಿದ್ದು, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಎಂದು ಜೈಲಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಕೈದಿ 6 ವರ್ಷಗಳಿಂದ ಕೇಂದ್ರ ಕಾರಾಗೃಹದಲ್ಲೇ ಸಜಾಬಂದಿಯಾಗಿದ್ದ ಈತನಿಗೆ 15 ದಿನಗಳ ಕಾಲ ಪೆರೋಲ್ ರಜೆ ನೀಡಲಾಗಿದ್ದು, ಫೆ.5 ರಂದು ಕಾರಾಗೃಹಕ್ಕೆ ವಾಪಸ್ ತೆರಳಬೇಕಿತ್ತು. ಆದರೆ, ಈತ ಮತ್ತೇ ವಾಪಸ್ ಹೋಗದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ.