ಬಳ್ಳಾರಿ : ಪ್ರಯಾಣಿಕರೊಬ್ಬರು ಚಲಿಸುವ ರೈಲು ಹತ್ತುವ ಸಮಯದಲ್ಲಿ ಆಯತಪ್ಪಿ ಕೆಳಗೆ ಬಿದ್ದ ಸಂದರ್ಭದಲ್ಲಿ ಸಮಯ ಪ್ರಜ್ಞೆಯಿಂದ ಅವರ ಜೀವ ರಕ್ಷಣೆ ಮಾಡಿದ ರೈಲ್ವೆ ಪೊಲೀಸ್‌ಗೆ ರಾಷ್ಟ್ರಪತಿ ಪದಕ ನೀಡಿ ಗೌರವಿಸಲಾಗಿದೆ. 2019ರ ಡಿಸೆಂಬರ್ 21ರಂದು ಬಳ್ಳಾರಿ ರೈಲ್ವೆ ನಿಲ್ದಾಣದಲ್ಲಿ ಚಲಿಸುತ್ತಿದ್ದ ಕೊಲ್ಲಾಪುರ ಹೈದರಾಬಾದ್ ರೈಲುಗಾಡಿಗೆ ಬಳ್ಳಾರಿ ಕೇಂದ್ರೀಯ ವಿದ್ಯಾಲಯದ ಶಾಲೆಯ ಶಿಕ್ಷಕಿ ರಶ್ಮಿಯವರು ಹತ್ತುವ ಸಂದರ್ಭ ಆಯತಪ್ಪಿ ಕೆಳಗೆ ಬಿದ್ದಿದ್ದರು.
ಅದನ್ನು ಗಮನಿಸಿದ್ದ ಎಸ್ ಎಂ ರಫೀ ಅವರು, ತಕ್ಷಣ ಎಚ್ಚೆತ್ತು ಶಿಕ್ಷಕಿಯ ಜೀವ ರಕ್ಷಣೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಇವರ ಧೈರ್ಯ ಹಾಗೂ ಸಾಹಸವನ್ನು ಗಮನಿಸಿದ ಕೇಂದ್ರ ಸರಕಾರ ರಾಷ್ಟ್ರಪತಿ ಪದಕದ ಜೊತೆಗೆ ಪ್ರಮಾಣ ಪತ್ರ ಮತ್ತು ಮೆಡಲ್ ಹಾಗೂ 1 ಲಕ್ಷ ರೂ. ನೀಡಿ ಗೌರವಿಸಿದೆ. ಮೇ 27 ರಂದು ದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ರಫೀ ಅವರಿಗೆ ರಾಷ್ಟ್ರಪತಿ ಪದಕ ನೀಡಿದ್ದಾರೆ.
ಓದಿ : ರಾಜ್ಯಸಭೆ ಚುನಾವಣೆ : ಜೆಡಿಎಸ್ ಅಭ್ಯರ್ಥಿಯಾಗಿ ಕುಪೇಂದ್ರ ರೆಡ್ಡಿ ನಾಮಪತ್ರ ಸಲ್ಲಿಕೆ