ಬಳ್ಳಾರಿ: ನಗರದ ರಾವ್ ಬಹದ್ದೂರ್ ಮಹಾಬಲೇಶ್ವರ ಇಂಜಿನಿಯರಿಂಗ್ ಕಾಲೇಜ್ನಲ್ಲಿ ನಡೆಯುತ್ತಿದ್ದ ಮತ ಎಣಿಕೆಯು ಮುಕ್ತಾಯವಾದ ನಂತರ ವಾರ್ತಾ ಇಲಾಖೆಯ ಕಾರು ಕಾಲೇಜಿನ ಒಳಹೋಗಿದೆ. ಈ ಕಾರಣಕ್ಕಾಗಿ ಪೊಲೀಸರು ಚಾಲಕನನ್ನು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ಮಧ್ಯಾಹ್ನ 3 ಗಂಟೆ 30 ನಿಮಿಷಕ್ಕೆ ಮುಖ್ಯ ದ್ವಾರದ ಮೂಲಕ ವಾರ್ತಾ ಇಲಾಖೆಯ ಕಾರು ಒಳ ಹೋಗಿದೆ. ಆ ವೇಳೆ ಅಲ್ಲಿ ಯಾವುದೇ ಭದ್ರತಾ ಸಿಬ್ಬಂದಿ ಇರಲಿಲ್ಲ. ಆದರೆ, ಕಾರು ಒಳ ಹೋದ ನಂತರ ಪೊಲೀಸರು ಕಾರ್ ಚಾಲಕನನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಇನ್ನು ವಾಹನದ ಕೀ ಕಸಿದುಕೊಂಡ ಪೊಲೀಸರು, ಚಾಲಕನ ಮೇಲೆ ದರ್ಪ ಮೆರೆದಿದ್ದಾರೆ ಎನ್ನುವ ಮಾತು ಕೂಡ ಕೇಳಿಬರುತ್ತಿವೆ.