ETV Bharat / state

ಪೆಟ್ರೋಲ್, ಡಿಸೇಲ್, ಎಲ್​ಪಿಜಿ ಗ್ಯಾಸ್ ಬೆಲೆ ಏರಿಕೆ ಖಂಡಿಸಿ ಭಾರಿ ಪ್ರತಿಭಟನೆ - ಬಳ್ಳಾರಿ ಸುದ್ದಿ

ಪೆಟ್ರೋಲ್, ಡಿಸೇಲ್, ಎಲ್ ಪಿಜಿ ಗ್ಯಾಸ್ ಬೆಲೆ ಏರಿಕೆ ಖಂಡಿಸಿ ನಗರದಲ್ಲಿ ಫೆಡರೇಷನ್ ಆಫ್ ಕರ್ನಾಟಕ ಆಟೋ ರಿಕ್ಷಾ ಡ್ರೈವರ್ಸ್ ಯೂನಿಯನ್ಸ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿದೆ.

protest
ಪ್ರತಿಭಟನೆ
author img

By

Published : Feb 17, 2021, 12:53 PM IST

ಹೊಸಪೇಟೆ: ಪೆಟ್ರೋಲ್, ಡಿಸೇಲ್, ಎಲ್ ಪಿಜಿ ಗ್ಯಾಸ್ ಬೆಲೆ ಏರಿಕೆಯನ್ನು ಖಂಡಿಸಿ ಫೆಡರೇಷನ್ ಆಫ್ ಕರ್ನಾಟಕ ಆಟೋ ರಿಕ್ಷಾ ಡ್ರೈವರ್ಸ್ ಯೂನಿಯನ್ಸ್ ನೇತೃತ್ವದಲ್ಲಿಂದು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ಬಳಿಕ ಶಾಸಕ ಆನಂದ ಸಿಂಗ್ ಕಾರ್ಯಾಲಯ ಮುಂದೆ ಕೇಂದ್ರ ಸರಕಾರ ವಿರುದ್ಧ ಘೋಷಣೆ ಕೂಗಲಾಯಿತು. ಮೋದಿ ಕೋನ್ ಹೈ ಏಕ್ ನಂಬರ್ ಚೋರ್ ಎಂಬ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪೆಟ್ರೋಲ್, ಡಿಸೇಲ್, ಎಲ್​ಪಿಜಿ ಗ್ಯಾಸ್ ಬೆಲೆ ಏರಿಕೆಯನ್ನು ಖಂಡಿಸಿ ಪ್ರತಿಭಟನೆ

ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ. ರಾತ್ರಿ ಮುಗಿದು ಬೆಳಗಾಗುವಷ್ಟರಲ್ಲಿ ದರ ಏರಿಕೆ ಆಗಿರುತ್ತದೆ. ಇದರಿಂದ ಜನಸಾಮಾನ್ಯರು ತ್ತರಿಸಿ ಹೋಗಿದ್ದಾರೆ.‌ ಕೂಡಲೇ ದರವನ್ನು ಇಳಿಕೆ ಮಾಡಬೇಕು ಎಂದು ಆಗ್ರಹಿಸಿದರು.

ಗ್ಯಾಸ್ ಬೆಲೆ ಸಹ ಅಧಿಕವಾಗಿದೆ. ಈಗಾಗಲೇ ಕೊರೊನಾ ಲಾಕ್ ಡೌನ್ ನಿಂದ ಜನರು ಸಂಕಷ್ಟವನ್ನು‌ ಅನುಭವಿಸಿದ್ದಾರೆ. ಈಗ ಸರಕಾರ ಬೆಲೆಯನ್ನು ಏರಿಕೆ ಮಾಡುವ ಮೂಲಕ ಗಾಯದ ಮೇಲೆ ಬರೆ ಎಳೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.