ETV Bharat / state

ಬಳ್ಳಾರಿ: ಕುಡಿಯುವ ನೀರಿನ ಸಮಸ್ಯೆ.. ಜನರಿಗೆ ತಪ್ಪುತ್ತಿಲ್ಲ ಪರದಾಟ

author img

By

Published : Jun 19, 2022, 5:48 PM IST

ರೂಪನಗುಡಿ, ಶಂಕರ್ ಬಂಡೆ ಗ್ರಾಮಗಳಲ್ಲಿ ನೀರಿನ ಕೆರೆಗಳು ಇವೆ. ಆದರೀಗ ಸರಿಯಾದ ನಿರ್ವಹಣೆ ಇಲ್ಲದೇ ಅವು ಪಾಚಿಗಟ್ಟಿವೆ. ಕೆರೆ‌ ನೀರು ಕುಡಿಯಲು ಯೋಗ್ಯವಾಗಿಲ್ಲ. ಈ ಗ್ರಾಮಗಳಲ್ಲಿ ತಲಾ ಎರಡು ಶುದ್ಧೀಕರಣ ಘಟಕಗಳಿದ್ದರೂ ಕೂಡ ಯಾವುದೇ ಪ್ರಯೋಜನವಿಲ್ಲ.

ನೀರು ತುಂಬಿಸಿಕೊಳ್ಳುತ್ತಿರುವುದು
ನೀರು ತುಂಬಿಸಿಕೊಳ್ಳುತ್ತಿರುವುದು

ಬಳ್ಳಾರಿ: ಪಕ್ಕದಲ್ಲೇ ರಾಜ್ಯದ 2ನೇ ಅತಿದೊಡ್ಡ ಡ್ಯಾಂ ಇದ್ದರೂ ಜಿಲ್ಲೆಯ ಜನರಿಗೆ ಸರಿಯಾಗಿ ಕುಡಿಯುವ ನೀರು ಸರಬರಾಜು ಮಾಡಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಅದರಲ್ಲೂ ಬಳ್ಳಾರಿಯ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಸದ್ಯಕ್ಕೆ ನೀಗುವ ಲಕ್ಷಣಗಳು ಕಾಣುತ್ತಿಲ್ಲ. ತಾಲೂಕಿನ ರೂಪನಗುಡಿ ಶಂಕರ್ ಬಂಡೆ, ಶಂಕರ್ ಬಂಡೆ ಕ್ಯಾಂಪ್ ಹೀಗೆ ಹತ್ತು ಹಲವು ಗ್ರಾಮಗಳು ಆಂಧ್ರ ಪ್ರದೇಶದ ಗಡಿ ಬಳಿ ಇದ್ದು, ಇಲ್ಲಿ ದಿನನಿತ್ಯ ಶುದ್ಧ ಕುಡಿಯುವ ನೀರಿಗಾಗಿ ಜನರು ಪರದಾಡುತ್ತಿದ್ದಾರೆ.

ಸ್ಥಳೀಯ ನಿವಾಸಿ ಮಂಜುನಾಥ್​ ಅವರು ಮಾತನಾಡಿದರು

ರೂಪನಗುಡಿ, ಶಂಕರ್ ಬಂಡೆ ಗ್ರಾಮಗಳಲ್ಲಿ ನೀರಿನ ಕೆರೆಗಳು ಇವೆ. ಆದರೀಗ ಸರಿಯಾದ ನಿರ್ವಹಣೆ ಇಲ್ಲದೇ ಅವು ಪಾಚಿಗಟ್ಟಿವೆ. ಕೆರೆ‌ ನೀರು ಕುಡಿಯಲು ಯೋಗ್ಯವಾಗಿಲ್ಲ. ಈ ಗ್ರಾಮಗಳಲ್ಲಿ ತಲಾ ಎರಡು ಶುದ್ಧೀಕರಣ ಘಟಕಗಳಿದ್ದರೂ ಕೂಡ ಯಾವುದೇ ಪ್ರಯೋಜನವಿಲ್ಲ. ಘಟಕಗಳು ಕೆಟ್ಟು ಮೂರ್ನಾಲ್ಕು ತಿಂಗಳಾಗಿವೆ. ಹೀಗಾಗಿ, ಗ್ರಾಮದಲ್ಲಿ ಕುಡಿಯುವ ನೀರಿಗೆ ಭಾರಿ ತೊಂದರೆ ಉಂಟಾಗಿದೆ.

ಈ ಪರಿಸ್ಥಿತಿಯನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವರು ನೆರೆಯ ಆಂಧ್ರಪ್ರದೇಶಕ್ಕೆ ಹೊಂದಿಕೊಂಡಿರುವ ನಾನಾ ಗ್ರಾಮಗಳಿಂದ ಖಾಸಗಿ ಶುದ್ಧೀಕರಿಸಿದ ಘಟಕಗಳಿಂದ ತಂದು ಇಲ್ಲಿ ಮಾರಾಟ ಮಾಡುತ್ತಿದ್ದಾರೆ. ಅನಿವಾರ್ಯವಾಗಿ ಒಂದು ಬಿಂದಿಗೆ ನೀರಿಗೂ ಹತ್ತು ರೂಪಾಯಿ ಹಣ ಕೊಟ್ಟು ಖರೀದಿ ಮಾಡುವ ಪರಿಸ್ಥಿತಿ ಇಲ್ಲಿನ ಜನರದ್ದಾಗಿದೆ.

ಒಂದು ಸಣ್ಣ ಕುಟುಂಬ ಇದ್ದರೆ, ದಿನಕ್ಕೆ ಎರಡು ಬಿಂದಿಗೆ ನೀರು ಬೇಕೇ ಬೇಕು. ದೊಡ್ಡ ಕುಟುಂಬ ಇದ್ದರೆ ಐದಾರೂ ಬಿಂದಿಗೆ ನೀರು ಬೇಕು. ಹೀಗಾಗಿ, ಪ್ರತಿ ಕುಟುಂಬ ಕೇವಲ ಕುಡಿಯುವ ನೀರಿಗಾಗಿ, ತಿಂಗಳಿಗೆ ಸಾವಿರಾರು ರೂಪಾಯಿಯನ್ನು ‌ಕುಡಿಯುವ ನೀರಿಗಾಗಿ ಖರ್ಚು ಮಾಡುವ ಪರಿಸ್ಥಿತಿ ಇದೆ‌. ಕಳೆದ ಎರಡು ವರ್ಷಗಳಿಂದಲೂ ಇದೇ ಪರಿಸ್ಥಿತಿ ಇದ್ದರೂ ಇಲ್ಲಿನ ಜನ ಪ್ರತಿನಿಧಿಗಳು ಮಾತ್ರ ಸಮಸ್ಯೆ ಬಗೆಹರಿಸಲು ಮುಂದಾಗಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.

ಓದಿ: ನನ್ನ ಕಚೇರಿ ಮತ್ತು ನನ್ನ ಹೆಸರನ್ನು ಕೆಲವರು ದುರ್ಬಳಕೆ ಮಾಡಿದ್ದಾರೆ: ಸಚಿವೆ ಶೋಭಾ ಕರಂದ್ಲಾಜೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.