ETV Bharat / state

ಬಳ್ಳಾರಿ: ಪ್ರತ್ಯೇಕ ಅಪಘಾತ ಪ್ರಕರಣದಲ್ಲಿ ಇಬ್ಬರು ಸಾವು - ಅಪ್ಪೆ ಆಟೊಗೆ ಡಿಕ್ಕಿ ಹೊಡೆದು ಬೈಕ್

ಬಳ್ಳಾರಿಯ ಕಂಟೋನ್ಮೆಂಟ್ ರೈಲು ನಿಲ್ದಾಣದ ಬಳಿ ಮತ್ತು ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ದುಗ್ಗಾವತಿ ಸಮೀಪ ಸಂಭವಿಸಿದ ಎರಡು ಪ್ರತ್ಯೇಕ ಅಪಘಾತದಲ್ಲಿ ಇಬ್ಬರು ಅಸುನೀಗಿದ್ದಾರೆ.

Pedestrian dies after being hit by a tractor
ಟ್ರಾಕ್ಟರ್ ಡಿಕ್ಕಿ ಹೊಡೆದು ಪಾದಚಾರಿ ವ್ಯಕ್ತಿ ಸಾವು
author img

By

Published : Nov 11, 2022, 11:15 AM IST

ಬಳ್ಳಾರಿ: ಪಾದಚಾರಿಗೆ ಟ್ರಾಕ್ಟರ್ ಗುದ್ದಿ ಆತ ಸ್ಥಳದಲ್ಲೇ ಮೃತಪಟ್ಟ ಘಟನೆ ನಗರದ ಕಂಟೋನ್ಮೆಂಟ್ ರೈಲು ನಿಲ್ದಾಣದ ಬಳಿಯ ರಸ್ತೆಯಲ್ಲಿ ನಡೆದಿದೆ. ಮಲ್ಲಿಕಾರ್ಜುನ (55) ಮೃತಪಟ್ಟ ವ್ಯಕ್ತಿ. ಇವರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಟ್ರಾಕ್ಟರ್ ಡಿಕ್ಕಿ ಹೊಡೆದಿದ್ದು, ರಭಸಕ್ಕೆ ತೀವ್ರವಾಗಿ ಗಾಯಗೊಂಡಿದ್ದರು. ಚಾಲಕನನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಕರಣ 2: ಹರಪನಹಳ್ಳಿ ತಾಲೂಕಿನ ದುಗ್ಗಾವತಿ ಬಳಿ ಗುರುವಾರ ರಾತ್ರಿ ಬೈಕ್ ಮತ್ತು ಅಪ್ಪೆ ಆಟೋ ಮಧ್ಯೆ ಅಪಘಾತ ಸಂಭವಿಸಿ ಮಹಿಳೆ ಸಾವಿಗೀಡಾಗಿದ್ದಾರೆ. ಶಾಂತಿನಗರದ ನಿವಾಸಿ ಚಂದ್ರಿ ಬಾಯಿ(55) ಮೃತಪಟ್ಟವರೆಂದು ತಿಳಿದುಬಂದಿದೆ. ಇವರ ಪತಿ ಚಂದ್ರನಾಯ್ಕ(60) ಹಾಗೂ ಮಗ ಜಯಕುಮಾರ ಗಾಯಗೊಂಡಿದ್ದಾರೆ. ಈ ಮೂವರು ಬೈಕ್‌ನಲ್ಲಿ ಹೋಗುವಾಗ ದುರ್ಘಟನೆ ನಡೆದಿದೆ. ಹಲುವಾಗಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಹರಿಯಾಣ: ರಸ್ತೆ ಬದಿಯಲ್ಲಿ ನಿಂತವರಿಗೆ ಡಿಕ್ಕಿ ಹೊಡೆದ ಟ್ರಾಕ್ಟರ್ ; ಇಬ್ಬರಿಗೆ ಗಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.