ETV Bharat / state

ಬಳ್ಳಾರಿಯಲ್ಲಿ ಮತ್ತೋರ್ವ ಕೊರೊನಾ ಸೋಂಕಿತ ಗುಣಮುಖ: ಆಸ್ಪತ್ರೆಯಿಂದ ಡಿಸ್ಚಾರ್ಜ್

author img

By

Published : May 14, 2020, 10:09 PM IST

ಕೊರೊನಾ ಪಾಸಿಟಿವ್​ ಇದ್ದ ರೋಗಿ-331 ಗುಣಮುಖರಾದ ಹಿನ್ನೆಲೆ ಕೋವಿಡ್ ಜಿಲ್ಲಾಸ್ಪತ್ರೆಯಿಂದ ಇಂದು ಸಂಜೆ ಬಿಡುಗಡೆ ಮಾಡಲಾಯಿತು.

ಕೊರೊನಾ ಪಾಸಿಟಿವ್​ ಇದ್ದ ರೋಗಿ- 331 ಗುಣಮುಖ
ಕೊರೊನಾ ಪಾಸಿಟಿವ್​ ಇದ್ದ ರೋಗಿ- 331 ಗುಣಮುಖ

ಬಳ್ಳಾರಿ: ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್​​​ ಇದ್ದ ಮತ್ತೋರ್ವ ವ್ಯಕ್ತಿ ಗುಣಮುಖರಾದ ಹಿನ್ನೆಲೆ ಕೋವಿಡ್ ಜಿಲ್ಲಾಸ್ಪತ್ರೆಯಿಂದ ಇಂದು ಸಂಜೆ ಬಿಡುಗಡೆ ಮಾಡಲಾಯಿತು.

ಇಲ್ಲಿಯವರೆಗೆ ಗುಣಮುಖರಾಗಿ ಬಿಡುಗಡೆಯಾದವರ ಸಂಖ್ಯೆ 13ಕ್ಕೇರಿದೆ. ಜಿಲ್ಲೆಯ ವಿಮ್ಸ್ ಆಸ್ಪತ್ರೆಯಲ್ಲಿ ಮತ್ತೊಂದು ಪಾಸಿಟಿವ್ ಕೇಸ್ ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಇದುವರೆಗೆ 17 ಮಂದಿ ಕೊರೊನಾ ಸೋಂಕಿತರಾದಂತಾಗಿದೆ. ಈ ಮೊದಲು ಗುಣಮುಖರಾದ ರೋಗಿ-89, ರೋಗಿ-91 ಮತ್ತು ರೋಗಿ-141 ನಂತರ ರೋಗಿ-90 & ರೋಗಿ-151 ಅವರನ್ನು ಬಿಡುಗಡೆ ಮಾಡಲಾಗಿತ್ತು.

ಸಿರುಗುಪ್ಪ ತಾಲೂಕಿನ ಹೆಚ್.ಹೊಸಳ್ಳಿ ಗ್ರಾಮದ 14 ವರ್ಷದ ರೋಗಿ-113 ಬಾಲಕ ಗುಣಮುಖನಾದ ಹಿನ್ನೆಲೆ ಬಿಡುಗಡೆ ಮಾಡಲಾಯಿತು. ಈ ರೋಗಿ-113 ಬಾಲಕ ಮೈಸೂರಿನ ನಂಜನಗೂಡಿನಿಂದ ಬಳ್ಳಾರಿಯ ಸಿರುಗುಪ್ಪಕ್ಕೆ ಬಂದಿರುವ ಟ್ರಾವೆಲ್ ಹಿಸ್ಟರಿ ಇದೆ. ಇದೀಗ ರೋಗಿ-331 ಗುಣಮುಖರಾದ ಹಿನ್ನೆಲೆಯಲ್ಲಿ ಇಂದು ಬಿಡುಗಡೆ ಮಾಡಲಾಗಿದೆ.

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಎನ್.ಬಸರೆಡ್ಡಿ, ಗುಣಮುಖರಾದ ರೋಗಿ-331 ವ್ಯಕ್ತಿಯನ್ನ ಚಪ್ಪಾಳೆ ತಟ್ಟುವ ಮುಖೇನ ಆತ್ಮೀಯವಾಗಿ ಬೀಳ್ಕೊಟ್ಟರು. ಬಳಿಕ ಮಾತನಾಡಿದ ಡಾ. ಬಸರೆಡ್ಡಿ, ಗುಣಮುಖರಾದ ಅವರನ್ನು 14 ದಿನಗಳವರೆಗೆ ಹೋಂ ಕ್ವಾರಂಟೈನ್ ಮತ್ತು 14 ದಿನಗಳ ಕಾಲ ಸೆಲ್ಫ್​​ ರಿಪೋರ್ಟಿಂಗ್ ಮಾಡಲಾಗುವುದು ಹಾಗೂ ಜಿಲ್ಲಾ ಕಂಟ್ರೋಲ್ ರೂಮ್​ ಮತ್ತು ನಮ್ಮ ಆರ್​​ಆರ್​ಟಿ ತಂಡದಿಂದ 28 ದಿನಗಳ ಕಾಲ ನಿಗಾ ವಹಿಸಲಾಗುವುದು. ಅಲ್ಲದೆ ಈ ಆರ್‌ಆರ್‌ಟಿ ತಂಡದಿಂದ ಗುಣಮುಖರಾಗಿರುವ ಇವರ ಮನೆಗಳ ಸುತ್ತಮುತ್ತಲಿನ ಮನೆಯವರಿಗೆ ಈ ಮಹಾಮಾರಿ ಕೊರೊನಾ ಸೋಂಕಿನ ಕುರಿತು ಜಾಗೃತಿ ಮೂಡಿಸಲಾಗುವುದು ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.