ಬಳ್ಳಾರಿ: ನಗರ ಹೊರವಲಯದ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಸರ್ಕಾರಿ ಅತಿಥಿ ಗೃಹದಲ್ಲಿ ಅಂದಾಜು 50 ಬೆಡ್ಗಳ ಕೋವಿಡ್ ಕೇರ್ ಐಸೋಲೇಷನ್ ಕೇಂದ್ರಕ್ಕೆ ಇಂದು ಚಾಲನೆ ದೊರೆಯಲಿದೆ.
ವಿಎಸ್ಕೆ ವಿವಿಯ ಸರ್ಕಾರಿ ಅತಿಥಿ ಗೃಹದಲ್ಲಿರುವ ಕೋವಿಡ್ ಕೇರ್ ಐಸೋಲೇಷನ್ ಕೇಂದ್ರದಲ್ಲಿ ಸುಸಜ್ಜಿತ ಬೆಡ್ಗಳ ವ್ಯವಸ್ಥೆಯನ್ನ ಮಾಡಲಾಗಿದೆ. ಒಂದೊಂದು ಕೊಠಡಿಗಳಲ್ಲಿ ಎರಡು ಬೆಡ್ಗಳ ವ್ಯವಸ್ಥೆ ಮಾಡಲಾಗಿದೆ. ಕೋವಿಡ್ ಸೋಂಕಿತರು ಹೋಮ್ ಐಸೋಲೇಷನ್ನಲ್ಲಿರಲು ಅನಾನುಕೂಲ ಇದ್ದವರಿಗೆ ಮಾತ್ರ ಇಲ್ಲಿ ಇರಲು ಅವಕಾಶವನ್ನ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯವು ಕಲ್ಪಿಸಿದೆ.
ಜೈನ್ ಇಂಟರ್ ನ್ಯಾಷನಲ್ ಟ್ರೇಡ್ ಆರ್ಗನೈಸೇಷನ್ (ಜಿಐಟಿಒ) ಹಾಗೂ ಸೇವಾ ಭಾರತಿ ಸಹಯೋಗದಲ್ಲಿ ನಡೆಯುವ ಈ ಐಸೋಲೇಷನ್ ಕೇಂದ್ರಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾ ಆರೋಗ್ಯಾಧಿಕಾರಿ (ಡಿಹೆಚ್ ಓ) ಡಾ. ಹೆಚ್.ಎಲ್.ಜರ್ನಾಧನ್ ಚಾಲನೆ ನೀಡಲಿದ್ದಾರೆ. ಕುಲಪತಿ ಪ್ರೊ. ಸಿದ್ದು ಪಿ. ಅಲಗೂರ, ಮೌಲ್ಯಮಾಪನ ಕುಲಸಚಿವ ಪ್ರೊ. ಶಶಿಕಾಂತ್ ಎಸ್. ಉಡಿಕೇರಿ, ಎಡಿಸಿ ಪಿ.ಎಸ್.ಮಂಜುನಾಥ ಭಾಗವಹಿಸಲಿದ್ದಾರೆ. ಈ ಕೋವಿಡ್ ಕೇರ್ ಐಸೋಲೇಷನ್ ಕೇಂದ್ರಕ್ಕೆ ಬರುವವರು ಹೋಮ್ ಐಸೋಲೇಷನ್ನಲ್ಲಿರಲು ಅನಾನುಕೂಲತೆಯನ್ನ ಅನುಭವಿಸುತ್ತಿರುವ ಕೋವಿಡ್ ಜಿಲ್ಲಾಡಳಿತದ ಸೂಕ್ತ ಮಾರ್ಗಸೂಚಿಯ ಮೂಲಕವೇ ಬರಬೇಕು.
ಇದನ್ನೂ ಓದಿ : ಕೊರೊನಾ ಕರ್ಫ್ಯೂ ತಂದಿಟ್ಟ ಸಂಕಷ್ಟ: ಮಲ್ಲಿಗೆ ಹೂ ಹೊಲದಲ್ಲೇ ಬಾಡುವ ಆತಂಕದಲ್ಲಿ ರೈತರು!
ಇಲ್ಲಿ ದಿನದ 24 ಗಂಟೆಯೂ ಕೂಡ ನರ್ಸ್ಗಳ ಸೌಲಭ್ಯ ಇರುತ್ತೆ. ನುರಿತ ತಜ್ಞ ವೈದ್ಯರ ಸೇವೆಯೂ ಇರುತ್ತೆ. ಇದಲ್ಲದೆ ಯೋಗಾಭ್ಯಾಸ, ಧ್ಯಾನ ಹಾಗೂ ಪ್ರಾಣಾಯಾಮ, ಓದಲು ಪುಸ್ತಕದ ವ್ಯವಸ್ಥೆ ಮಾಡಲಾಗಿದೆ. ವಿಎಸ್ಕೆ ವಿವಿಯ ಐಸೋಲೇಷನ್ನಲ್ಲಿರುವವರಿಗೆ ಪಾಸಿಟಿವ್ ಎನರ್ಜಿ ನೀಡೋ ಮುಖೇನ ಕೋವಿಡ್ ಸೋಂಕಿನಿಂದ ಗುಣಮುಖರಾಗಲು ಸಹಕರಿಸಲಾಗುವುದು ಎಂದು ಕುಲಪತಿ ಪ್ರೊ. ಸಿದ್ದು ಪಿ. ಅಲಗೂರ ತಿಳಿಸಿದ್ದಾರೆ.