ಬಳ್ಳಾರಿ: ನಗರದ ಮೋತಿ ವೃತ್ತದಲ್ಲಿ ಆಟೋ ಚಾಲಕನೊಬ್ಬ ಕುಡಿದು ಒನ್ ವೇನಲ್ಲಿ ಅಡ್ಡಾದಿಡ್ಡಿಯಾಗಿ ಆಟೋ ಚಾಲನೆ ಮಾಡುತ್ತಿದ್ದನ್ನು ಗಮನಿಸಿದ ನಗರ ಸಂಚಾರಿ ಪೊಲೀಸರು, ಆತನನ್ನ ಹಿಡಿದು ಠಾಣೆಗೆ ಕರೆದೊಯ್ದ ಘಟನೆ ಇಂದು ನಡೆದಿದೆ.
ಈ ರೀತಿಯಾಗಿ ಕುಡಿದ ಮತ್ತಿನಲ್ಲಿ ಅಡ್ಡಾದಿಡ್ಡಿಯಾಗಿ ವಾಹನ ಓಡಿಸುವುದರಿಂದ ಸಾರ್ವಜನಿಕರಿಗೆ ಮತ್ತು ವಾಹನ ಸವಾರರಿಗೆ ತೊಂದರೆಯಾಗಿ ಅಪಘಾತಗಳು ಸಹ ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತೆ. ಹಾಗಾಗಿ ವಾಹನ ಸವಾರರು ನೋಡಿಕೊಂಡು ವಾಹನ ಓಡಿಸಬೇಕಾಗಿದೆ.