ಬಳ್ಳಾರಿ: ಜಿಲ್ಲೆಯ ಕೊಟ್ಟೂರು ಪಟ್ಟಣದಲ್ಲಿಂದು ಹಳೆಯದಾದ ಮನೆಯ ಕಟ್ಟಡ ತೆರವುಗೊಳಿಸುವ ಸಂದರ್ಭ ಅವಶೇಷಗಳಡಿ ಸಿಲುಕಿಕೊಂಡು ಕಾರ್ಮಿಕನೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.
ಕೊಟ್ಟೂರು ತಾಲೂಕಿನ ಹುಣಸಿಕಟ್ಟೆ ಗ್ರಾಮದ ಅಂಜಿನಪ್ಪ (39) ಎಂಬುವರು ಮೃತ ವ್ಯಕ್ತಿಯೆಂದು ಗುರುತಿಸಲಾಗಿದೆ.
ಜಿಲ್ಲೆಯ ಕೊಟ್ಟೂರಿನ ಉಜ್ಜನಿ ರಸ್ತೆಯ ಬಳಿ ಈ ಘಟನೆ ನಡೆದಿದೆ. ಯಶೋದಮ್ಮ ಎಂಬುವರಿಗೆ ಸೇರಿದ್ದ ಈ ಮನೆಯನ್ನ ತೆರವುಗೊಳಿಸುವ ಕಾರ್ಯಕ್ಕೆ ಪಟ್ಟಣ ಪಂಚಾಯತ್ ಮುಂದಾಗಿತ್ತು. ಕೊಟ್ಟೂರು ಠಾಣೆಯ ಪೊಲೀಸರ ಸಮಕ್ಷಮದಲ್ಲಿ ಮೃತ ವ್ಯಕ್ತಿ ಅಂಜಿನಪ್ಪನವರ ಮೃತದೇಹವನ್ನು ಹೊರ ತೆಗೆಯಲಾಯಿತು. ಘಟನೆಯಲ್ಲಿ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.