ETV Bharat / state

ಜಿಂದಾಲ್​​​​ ಉಕ್ಕು ಕಾರ್ಖಾನೆಗೆ ಭೂಮಿ ಪರಾಭಾರೆ ವಿಚಾರದಲ್ಲಿ ಸಮರ್ಥನೆ ಬೇಡ - Anand Singh

ಜಿಂದಾಲ್ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಗೆ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನಲ್ಲಿ 3,666 ಎಕರೆ ಜಮೀನು ಪರಾಭಾರೆ ಮಾಡುವ ಸರ್ಕಾರದ ನಿರ್ಧಾರದ ಬಗ್ಗೆ ಪರ-ವಿರೋಧಗಳು ಕೇಳಿ ಬರುತ್ತಿವೆ. ಈ ನಡುವೆ ಜಿಲ್ಲೆಯ ಕೆಲ ಶಾಸಕರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಆನಂದ್​ ಸಿಂಗ್
author img

By

Published : Jun 21, 2019, 7:56 AM IST

ಬಳ್ಳಾರಿ: ಜಿಂದಾಲ್​ ಉಕ್ಕು ಕಾರ್ಖಾನೆಗೆ ಅಂದಾಜು 3,666 ಎಕರೆ ಭೂಮಿಯನ್ನು ಪರಾಭಾರೆ ಮಾಡೋದನ್ನು ಸಮರ್ಥನೆ ಮಾಡಿಕೊಳ್ಳೋದು ಬ್ಯಾಡ ಎಂದು ಹಾಲಿ ಕಾಂಗ್ರೆಸ್​ ಶಾಸಕ ಬಿ.ಎಸ್.ಆನಂದ್​ ಸಿಂಗ್ ಅವರು ವೈದ್ಯಕೀಯ ಶಿಕ್ಷಣ ಸಚಿವ ತುಕಾರಾಂಗೆ ತಿರುಗೇಟು ನೀಡಿದ್ದಾರೆ.

ಜಿಲ್ಲೆಯ ಕುಡಿತಿನಿ ಗ್ರಾಮದ ಆಂಜನೇಯಸ್ವಾಮಿ ದೇಗುಲದ ಬಳಿ ನಿನ್ನೆ ನಡೆದ ಕಾರ್ಖಾನೆಗೆ ಭೂಮಿ ಪರಾಭಾರೆ ಮಾಡುವ ರಾಜ್ಯ ಸರ್ಕಾರದ ನಿಲುವಿನ ಬಗ್ಗೆ ಜನಾಭಿಪ್ರಾಯ ಸಂಗ್ರಹ ಸಭೆಯಲ್ಲಿ ಅವರು ಮಾತನಾಡಿ, ಜಿಂದಾಲ್​ ಸಂಸ್ಥೆಗೆ ಭೂಮಿಯನ್ನು ಪರಾಭಾರೆ ಮಾಡಿರೋದು ಕಾನೂನಾತ್ಮಕವಾಗಿಯೇ ಇದೆ ಎಂಬ ಹೇಳಿಕೆಯನ್ನು ಸಚಿವ ಈ.ತುಕಾರಾಂ ನೀಡಿದ್ದಾರೆ.

ಜಿಂದಾಲ್ ಮಾಲೀಕರ ವಿರುದ್ಧ ಮಾತನಾಡದಂತೆ ಬೆದರಿಕೆ ಕರೆ: ಹೆಚ್.ಅನಿಲ್ ಲಾಡ್ ದೂರು

ಹೌದು, ಸ್ವಾಮಿ ನಾವೇನು ಇಲ್ಲ ಅಂತಾ ಹೇಳಿಲ್ಲ. ಆದ್ರೆ, ಭೂಮಿ ಪರಾಭಾರೆ ಬ್ಯಾಡ. ಗುತ್ತಿಗೆ ಆಧಾರದಲ್ಲೇ ಕೊಡಿ ಅಂತಾ ನಾವು ಕೇಳುತ್ತಿದ್ದೇವೆ.‌ ಅದನ್ನ ನೀವು ಸಮರ್ಥನೆ ಮಾಡಿಕೊಳ್ಳೋದು ಬ್ಯಾಡ. ನೀವೊಬ್ಬ ಜವಾಬ್ದಾರಿಯುತ ಸಚಿವರಾಗಿದ್ದೀರಿ. ನೀವು ಈ ರೀತಿಯಾಗಿ ಮಾತನಾಡಬಾರದು ಎಂದು ಪರೋಕ್ಷವಾಗಿ ಸಚಿವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಜಿಂದಾಲ್​ಗೆ ಸ್ವಾಗತ‌ ಮಾಡುವೆ:

ಜಿಂದಾಲ್​ ಕಂಪನಿಗೂ ನನಗೂ ಯಾವುದೇ ದ್ವೇಷವಿಲ್ಲ.‌ ನನ್ನ ಹಾಗೂ ಅವರ ನಡುವೆ ಉತ್ತಮ ಬಾಂಧವ್ಯ ಇದೆ. ಜಿಂದಾಲ್​ ಕಂಪನಿಯನ್ನ ನಾನು ಸ್ವಾಗತಿಸುವೆ. ನಾನೂ ಕೂಡ ಮಂತ್ರಿಯಾಗಿದ್ದೆ. ಅವರ ಕಂಪನಿಯೊಳಗಡೆ ಸಾಕಷ್ಟು ಕಾರ್ಯಕ್ರಮಗಳನ್ನು ಉದ್ಘಾಟಿಸಿರುವೆ. ಹಾಗಂತ ಜಿಲ್ಲೆಯ ಭೂಮಿಯನ್ನುಅತ್ಯಂತ ಅಗ್ಗದ ದರದಲ್ಲಿ ರಾಜ್ಯ ಸರ್ಕಾರ ಮಾರಾಟ ಮಾಡಲು ಹೊರಟಿರೋದು ತರವಲ್ಲ ಎಂದರು.

ಜನಾಭಿಪ್ರಾಯ ಸಂಗ್ರಹ ಸಭೆಯಲ್ಲಿ ಮಾತನಾಡಿದ ಶಾಸಕ ಬಿ.ಎಸ್.ಆನಂದ್​ ಸಿಂಗ್

ಅದಕ್ಕೆ ನನ್ನ ವಿರೋಧವಿದೆ. ಕಾನೂನಾತ್ಮಕವಾಗಿ ಐದು ಸಾವಿರ ಎಕರೆಯನ್ನಾದ್ರೂ ಕೊಡಿ. ನಾನು ಬ್ಯಾಡ ಅನ್ನಲ್ಲ. ಆದ್ರೆ, ಗುತ್ತಿಗೆ (ಲೀಸ್‌) ಆಧಾರದ ಮೇಲೆ ಕೊಡಿ. ಅವರಿಗೆ ಒನರ್​ಶಿಪ್ ಕೊಡಬ್ಯಾಡಿ ಎಂದು ಕೋರಿದರು.

Intro:ಜಿಂದಾಲ್ ಉಕ್ಕು ಕಾರ್ಖಾನೆಗೆ ಭೂಮಿ ಪರಭಾರೆ: ಸಮರ್ಥನೆ ಮಾಡಿಕೊಳ್ಳೋದು ಬ್ಯಾಡ!
ಬಳ್ಳಾರಿ: ಜಿಂದಾಲ್ ಉಕ್ಕು ಕಾರ್ಖಾನೆಗೆ ಅಂದಾಜು 3,666 ಎಕರೆ ಭೂಮಿಯನ್ನು ಪರಭಾರೆ ಮಾಡೋದನ್ನ ಸಮರ್ಥನೆ ಮಾಡಿಕೊಳ್ಳೋದು ಬ್ಯಾಡ ಎಂದು ಹಾಲಿ ಕಾಂಗ್ರೆಸ್ ಶಾಸಕ ಬಿ.ಎಸ್.ಆನಂದಸಿಂಗ್ ಅವರು ಸಚಿವ ಈ.ತುಕರಾಂಗೆ ತಿರುಗೇಟು ನೀಡಿದ್ದಾರೆ.
ಜಿಲ್ಲೆಯ ಕುಡಿತಿನಿ ಗ್ರಾಮದ ಆಂಜನೇಯಸ್ವಾಮಿ ದೇಗುಲದ ಬಳಿ ನಿನ್ನೆಯ ದಿನ ಸಂಜೆಯೊತ್ತಿಗೆ ನಡೆದ ಜಿಂದಾಲ್ ಉಕ್ಕು ಕಾರ್ಖಾನೆಗೆ ಭೂಮಿ ಪರಭಾರೆ ಮಾಡಿರುವ ರಾಜ್ಯ ಸರ್ಕಾರದ ನಿಲುವಿನ ಬಗ್ಗೆ ಜನಾಭಿಪ್ರಾಯ ಸಂಗ್ರಹಣೆ ಸಭೆಯಲ್ಲಿ ಅವರು ಮಾತನಾಡಿ, ಜಿಂದಾಲ್ ಸಂಸ್ಥೆಗೆ ಭೂಮಿಯನ್ನು ಪರಭಾರೆ ಮಾಡಿರೋದು ಕಾನೂನಾತ್ಮಕವಾಗಿಯೇ ಇದೆ ಎಂಬ ಹೇಳಿಕೆಯನ್ನು ಸಚಿವ ಈ.ತುಕಾರಾಂ ನೀಡಿದ್ದಾರೆ. ಹೌದು, ಸ್ವಾಮಿ ನಾವೇನು ಇಲ್ಲ ಅಂತಾ ಹೇಳಿಲ್ಲ. ಆದ್ರೆ, ಭೂಮಿ ಪರಭಾರೆ ಬ್ಯಾಡ. ಗುತ್ತಿಗೆ ಆಧಾರದಲ್ಲೇ ಕೊಡಿ ಅಂತಾ
ನಾವು ಕೇಳುತ್ತಿದ್ದೇವು.‌ ಅದನ್ನ ನೀವ್ ಸಮರ್ಥನೆ ಮಾಡಿ ಕೊಳ್ಳೋದು ಬ್ಯಾಡ. ನೀವೊಬ್ಬ ಜವಾಬ್ದಾರಿಯುತ ಸಚಿವ ರಾಗಿದ್ದೀರಿ. ನೀವು ಈ ರೀತಿಯಾಗಿ ಮಾತನಾಡಬಾರದು
ಎಂದು ಪರೋಕ್ಷವಾಗಿ ಸಚಿವರ ವಿರುದ್ಧ ವಾಗ್ದಾಳಿ ನಡೆಸಿ
ದ್ದಾರೆ.

Body:ಜಿಂದಾಲ್ ಗೆ ಸ್ವಾಗತ‌ ಮಾಡುವೆ: ಜಿಂದಾಲ್ ಕಂಪನಿಗೂ ನನಗೂ ಯಾವುದೇ ದ್ವೇಷವಿಲ್ಲ.‌ ನನ್ನ ಹಾಗೂ ಅವರ ನಡುವೆ ಉತ್ತಮ ಬಾಂಧವ್ಯ ಇದೆ. ಜಿಂದಾಲ್ ಕಂಪನಿಯನ್ನ ನಾನು ಸ್ವಾಗತಿಸುವೆ. ನಾನೂ ಕೂಡ ಮಂತ್ರಿಯಾಗಿದ್ದೆ. ಅವರ ಕಂಪನಿಯೊಳಗಡೆ ಸಾಕಷ್ಟು ಕಾರ್ಯಕ್ರಮಗಳನ್ನು ಉದ್ಘಾಟಿಸಿರುವೆ. ಹಾಗಂತ, ಜಿಲ್ಲೆಯ ಭೂಮಿಯನ್ನು
ಅತ್ಯಂತ ಅಗ್ಗದ ದರದಲ್ಲಿ ರಾಜ್ಯ ಸರ್ಕಾರ ಮಾರಾಟ
ಮಾಡಲು ಹೊರಟಿರೋದು ತರವಲ್ಲ.‌ ಅದಕ್ಕೆ ನನ್ನ ವಿರೋಧವಿದೆ. ಕಾನೂನಾತ್ಮಕವಾಗಿ ಐದು ಸಾವಿರ
ಎಕರೆಯನ್ನಾದ್ರೂ ಕೊಡಿ. ನಾನು ಬ್ಯಾಡ ಅನ್ನೋಲ್ಲ.
ಆದ್ರೆ, ಲೀಸ್ ಬೇಸಿಸ್ ಮೇಲೆ ಕೊಡಿ. ಅವರಿಗೆ ಒನರ್
ಶಿಪ್ ಕೊಡಬ್ಯಾಡಿ ಎಂದು ಶಾಸಕರು ಕೋರಿದ್ದಾರೆ.
ಇಷ್ಟಾದ್ರೂ ಜಿಲ್ಲೆಯ ಒಂಭತ್ತು ಕ್ಷೇತ್ರದ ಶಾಸಕರು,
ಸಚಿವರು ಈವರೆಗೂ ಧ್ವನಿ ಎತ್ತುತ್ತಿಲ್ಲ ಯಾಕೆ? ಎಂಬುದನ್ನು ಸ್ಪಷ್ಟಪಡಿಸಬೇಕು. ಇಲ್ಲವಾದ್ರೆ, ಐದು ವರ್ಷದ ಬಳಿಕ ಧ್ವನಿ ಎತ್ತದ ಶಾಸಕರು, ಸಚಿವರಿಗೆ ತಕ್ಕ ಪಾಠವನ್ನು ನೀವ್ ಕಲಿಸಲಿದ್ದಾರೆಂದು ಜನರತ್ತ ಬೆರಳು ತೋರಿಸಿದ್ರು.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_06_20_KUDUTINI_PUBLIC_MEETING_VISUALS_7203310

KN_BLY_06l_20_KUDUTINI_PUBLIC_MEETING_VISUALS_7203310
ETV Bharat Logo

Copyright © 2025 Ushodaya Enterprises Pvt. Ltd., All Rights Reserved.