ETV Bharat / state

ವಿಜಯನಗರ ಸಾಮ್ರಾಜ್ಯದ ಮಾದರಿಯಲ್ಲಿ ನೂತನ 'ವಿಜಯನಗರ ಜಿಲ್ಲಾ ಭವನ' ನಿರ್ಮಾಣ

author img

By

Published : Feb 17, 2021, 5:50 PM IST

ವಿಜಯನಗರ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿ ವಿಜಯನಗರ ಸಾಮ್ರಾಜ್ಯದ ಮಾದರಿಯಲ್ಲಿ ನಿರ್ಮಾಣವಾಗಲಿದೆ.

Hospet
ವಿಜಯನಗರ ಸಾಮ್ರಾಜ್ಯದ ಮಾದರಿಯಲ್ಲಿ ನೂತನ ವಿಜಯನಗರ ಜಿಲ್ಲಾ ಭವನ

ಹೊಸಪೇಟೆ: ವಿಜಯ ನಗರ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿ ವಿಜಯನಗರ ಸಾಮ್ರಾಜ್ಯದ ಮಾದರಿಯಲ್ಲಿ ನಿರ್ಮಾಣವಾಗಲಿದೆ. ಈಗಾಗಲೇ ಈ‌ ಕುರಿತು ನೀಲನಕ್ಷೆ ತಯಾರಿಸಲಾಗುತ್ತಿದ್ದು, ಸಿದ್ಧತೆಗಳು ಭರದಿಂದ ಸಾಗಿವೆ.

ವಿಜಯನಗರ ಸಾಮ್ರಾಜ್ಯದ ಮಾದರಿಯಲ್ಲಿ ನೂತನ ವಿಜಯನಗರ ಜಿಲ್ಲಾ ಭವನ ನಿರ್ಮಾಣ

ನಗರದ ಟಿಎಸ್​ಪಿಯು (ತುಂಗಭದ್ರಾ ಸ್ಟೀಲ್ ಪ್ರಾಡೆಕ್ಟ್ ಲಿಮಿಟೆಡ್) ಕರ್ನಾಟಕ ಗೃಹ ಮಂಡಳಿಗೆ 82 ಎಕರೆ ಭೂಮಿಯನ್ನು ಪರಾಭಾರೆ ಮಾಡಿತ್ತು. ಈಗ ಕಂದಾಯ ವ್ಯಾಪ್ತಿಗೆ ಒಳಪಡುತ್ತಿದೆ. ಈ ಸ್ಥಳದಲ್ಲಿ ನೂತನ ಜಿಲ್ಲೆಯ ಕಚೇರಿ ನಿರ್ಮಿಸುವ ಉದ್ದೇಶ ಹೊಂದಲಾಗಿದೆ. ವಿಜಯನಗರ ಕಾಲದ ಪರಂಪರೆ ಅಚ್ಚಳಿಯದೆ ಉಳಿಸುವ ಕಾರ್ಯವಾಗಲಿದೆ. ಅಲ್ಲದೆ 82 ಎಕೆರೆಯಲ್ಲಿ ಜಿಲ್ಲಾಡಳಿತ ಕಚೇರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ, ಜಿಲ್ಲಾ ಪಂಚಾಯತ್ ಕಚೇರಿ, ಮೆಡಿಕಲ್ ಕಾಲೇಜ್, ಆಸ್ಪತ್ರೆ ನಿರ್ಮಿಸುವ ಉದ್ದೇಶವನ್ನು ಹೊಂದಲಾಗಿದೆ.

ಅನುದಾನದ ಕೊರತೆಯಿಲ್ಲ:

ಕೆಎಂಇಆರ್​​ಸಿ ಅನುದಾನ 17 ಸಾವಿರ ಕೋಟಿ ರೂ. ಇದೆ. ಗಣಿಗಾರಿಕೆಯ ಪ್ರದೇಶಗಳನ್ನು ಅಭಿವೃದ್ಧಿ ಮಾಡಲು ಅನುದಾನ ನಿಗದಿ ಮಾಡಲಾಗಿದೆ. ಅದಕ್ಕೆ ಬಡ್ಡಿ 3 ಸಾವಿರ ಕೋಟಿಯಷ್ಟು ಬೆಳೆದಿದೆ. ಈ ಹಣವನ್ನು ಉಪಯೋಗಿಸಲು ಉದ್ದೇಶಿಸಲಾಗಿದೆ.

ವಿಜಯನಗರ ಜಿಲ್ಲಾಡಳಿತ ಭವನ ಎಷ್ಟು ದೂರ?:

ಕೇಂದ್ರ ಬಸ್ ನಿಲ್ದಾಣದಿಂದ 4.2 ಕಿ.ಮೀ., ರೈಲ್ವೇ ಸ್ಟೇಷನ್​​ನಿಂದ 5.3 ಕಿ.ಮೀ., ಅಮರಾವತಿ ಸರ್ಕಾರಿ ಅತಿಥಿ ಗೃಹದಿಂದ ಹಾಗೂ ತುಂಗಭದ್ರಾ ಡ್ಯಾಂನಿಂದ 3 ಕಿ.ಮೀ. ಅಂತರದಲ್ಲಿದೆ. ಕೂಡ್ಲಿಗಿಯಿಂದ 47 ಕಿ.ಮೀ., ಹಗರಿಬೊಮ್ಮನಹಳ್ಳಿಯಿಂದ 38 ಕಿ.ಮೀ., ಕೊಟ್ಟೂರು 60 ಕಿ.ಮೀ., ಹರಪನಹಳ್ಳಿಯಿಂದ 80 ಕಿ.ಮೀ., ಹೂವಿನಹಡಗಲಿಯಿಂದ 72 ಕಿ.ಮೀ. ದೂರದಲ್ಲಿದೆ.

ಭೌಗೋಳಿಕ ವ್ಯಾಪ್ತಿ: ವಿಜಯನಗರ ಜಿಲ್ಲೆಗೆ ಒಟ್ಟು 18 ಹೋಬಳಿಗಳು ಬರುತ್ತವೆ. ಜಿಲ್ಲೆಗೆ ಹೊಸಪೇಟೆ, ಕೊಟ್ಟೂರು, ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ, ಹರಪನಹಳ್ಳಿ, ಹೂವಿನಹಡಗಲಿ ತಾಲೂಕುಗಳು ಸೇರಿವೆ. 13,92,750 ಎಕೆರೆಯಷ್ಟು ನೂತನ ವಿಜಯನಗರ ಜಿಲ್ಲೆ ಭೌಗೋಳಿಕ ವ್ಯಾಪ್ತಿ ಹೊಂದಿದೆ.

ಓದಿ: ಮಾರ್ಚ್​ನಲ್ಲಿ ವಿಜಯನಗರ ಜಿಲ್ಲೆಗೆ ಡಿಸಿ, ಎಸ್​ಪಿ, ಜಿಪಂ ಸಿಇಒ ನೇಮಕ: ಆನಂದ್ ಸಿಂಗ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.