ಬಳ್ಳಾರಿ: ನಗರದ ಕನಕ ದುರ್ಗಮ್ಮ ದೇವಸ್ಥಾನದ ಆವರಣದಿಂದ ರಾಯಲ್ ವೃತ್ತದ ಮಾರ್ಗವಾಗಿ ಮೋತಿ ವೃತ್ತದವರೆಗೆ ರಾಷ್ಟ್ರೀಯ ಏಕತಾ ದಿನದ ಪ್ರಯುಕ್ತ ಏಕತಾ ನಡಿಗೆ ಜಾಥಾಗೆ ಬಳ್ಳಾರಿ ಎಸ್ಪಿ ಸೈದುಲು ಅಡಾವತ್ ಚಾಲನೆ ನೀಡಿದರು.
ಈ ಸಮಯದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಉದ್ದೇಶಿಸಿ ಮಾತನಾಡಿದ ಸೈದುಲು ಅಡಾವತ್, ಕೋವಿಡ್ ಸಮಯದಲ್ಲಿ ಏಕಾತಾ ನಡಿಗೆ ನಡೆಯುವಾಗ ಮಧ್ಯದಲ್ಲಿ ಮಾತನಾಡುವುದು ಬೇಡ. ಹಾಗೆಯೇ ಜಾಥಾ ಸಾಗುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ಇದು ಜನರಿಗೆ ಜಾಗೃತಿ ಮೂಡಿಸುವ ಕೆಲಸವಾಗಿದೆ ಎಂದರು.
ರಾಷ್ಟ್ರೀಯ ಏಕತಾ ನಡಿಗೆ ಕಾರ್ಯಕ್ರಮವನ್ನು ಈ ಹಿಂದೆ ಜನರ ಸಭೆ ಕರೆದು ಆಚರಿಸಲಾಗುತ್ತಿತ್ತು. ಈಗ ಕೋವಿಡ್ ಇರುವ ಕಾರಣ ರಾಷ್ಟ್ರೀಯ ಏಕತಾ ನಡಿಗೆೆಯೆನ್ನಲಾಗುತ್ತಿದೆ ಎಂದರು.
ಈ ಸಮಯದಲ್ಲಿ ನಗರ ಡಿವೈಎಸ್ಪಿ ಹೆಚ್.ಬಿ.ರಮೇಶ್ ಕುಮಾರ್, ಸಂಚಾರಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಎಂ.ನಾಗರಾಜ್ ಹಾಗೂ ಬಳ್ಳಾರಿ ನಗರ ಪೊಲೀಸ್ ವಿಭಾಗ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು.