ETV Bharat / state

ವ್ಯಕ್ತಿಯ ಅಂತ್ಯಸಂಸ್ಕಾರ ಮತ್ತು ತಿಥಿ ಕಾರ್ಯದಲ್ಲಿ ಭಾಗಿಯಾಗಿ ಅಚ್ಚರಿ ಮೂಡಿಸಿದ ವಾನರ - ವ್ಯಕ್ತಿಯ ಅಂತ್ಯಸಂಸ್ಕಾರದಲ್ಲಿ ಭಾಗಿಯಾದ ಮಂಗ

ಆ ದಿನ ಮಂಗವೊಂದು ಅವರ ಅಂತಿಮ ಸಂಸ್ಕಾರಕ್ಕೆ ಬಂದಿತ್ತು. ಮಂಗ ಮೃತ ವ್ಯಕ್ತಿಯ ತಲೆಯ ಮೇಲಿನ ಹೊದಿಕೆ ತೆಗೆದು ಮುಖದ ಮೇಲೆ ತಲೆ ಇಟ್ಟು ಮರುಗಿದ್ದನ್ನು ಕಂಡ ಸ್ಥಳೀಯರು ಅಚ್ಚರಿಗೊಂಡಿದ್ದರು..

Monkey participated in man funeral ceremony
ವ್ಯಕ್ತಿಯೋರ್ವರ ಅಂತ್ಯಸಂಸ್ಕಾರಕ್ಕೆ ಮಂಗವೊಂದು ಭಾಗಿ
author img

By

Published : Jul 14, 2021, 8:31 PM IST

ಬಳ್ಳಾರಿ : ಜಿಲ್ಲೆಯ ಕಂಪ್ಲಿ ತಾಲೂಕಿನ ಬಸವೇಶ್ವರನಗರ ಕ್ಯಾಂಪಿನಲ್ಲಿ ಕಳೆದ ಕೆಲ ದಿನಗಳ ಹಿಂದೆ ಮಂಗವೊಂದು ಮೃತ ವ್ಯಕ್ತಿಯ ಅಂತಿಮ ಸಂಸ್ಕಾರ ಹಾಗೂ ತಿಥಿ ಕಾರ್ಯದಲ್ಲಿ ಭಾಗಿಯಾಗುವ ಮೂಲಕ ಅಚ್ಚರಿ ಮೂಡಿಸಿತ್ತು. ಇದೀಗ ಮಂಗನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.

ವ್ಯಕ್ತಿಯ ಅಂತ್ಯಸಂಸ್ಕಾರದಲ್ಲಿ ಭಾಗಿಯಾದ ವಾನರ

ಕಳೆದ ಜೂನ್ 30ರಂದು ಬಸವೇಶ್ವರ ನಗರ ಕ್ಯಾಂಪಿನ ನಿವಾಸಿಯಾಗಿದ್ದ ವಿಶ್ವನಾಥ್‌ ರಾಜು(70) ಮೃತಪಟ್ಟಿದ್ದರು. ಆ ದಿನ ಮಂಗವೊಂದು ಅವರ ಅಂತಿಮ ಸಂಸ್ಕಾರಕ್ಕೆ ಬಂದಿತ್ತು. ಮಂಗ ಮೃತ ವ್ಯಕ್ತಿಯ ತಲೆಯ ಮೇಲಿನ ಹೊದಿಕೆ ತೆಗೆದು ಮುಖದ ಮೇಲೆ ತಲೆ ಇಟ್ಟು ಮರುಗಿದ್ದನ್ನು ಕಂಡ ಸ್ಥಳೀಯರು ಅಚ್ಚರಿಗೊಂಡಿದ್ದರು.

ಅಷ್ಟೇ ಅಲ್ಲ, ಮೃತ ವಿಶ್ವನಾಥ್ ಅವರ 9ನೇ ದಿವಸದ ಕಾರ್ಯಕ್ಕೂ ಸಹ ಮಂಗ ಆಗಮಿಸಿತ್ತು. ವಿಧಿ-ವಿಧಾನದ ವೇಳೆ ಪೂಜಾರಿ ತೊಡೆ ಮೇಲೆ ಕೂತು ನೋಡುಗರಲ್ಲಿ ಆಶ್ಚರ್ಯ ಉಂಟು ಮಾಡಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.