ಬಳ್ಳಾರಿ : ತಾಲೂಕಿನ ಸಂಜೀವರಾಯನಕೋಟೆ ಗ್ರಾಮದಲ್ಲಿ ಕಲುಷಿತ ನೀರು ಸೇವೆಸಿ ಅಸ್ವಸ್ಥಗೊಂಡ ರೋಗಿಗಳಿಂದ ನಗರದ ಖಾಸಗಿ ಆಸ್ಪತ್ರೆಗಳು ಭಾರೀ ಮೊತ್ತದ ಹಣವನ್ನ ಪೀಕುತ್ತಿರುವ ಆರೋಪ ಕೇಳಿ ಬಂದಿದೆ.
ವಿಮ್ಸ್ ಆಸ್ಪತ್ರೆಗೆ ಈ ಅಸ್ವಸ್ಥಗೊಂಡಿದ್ದ ರೋಗಿಗಳನ್ನ ಮಿಂಚೇರಿ ಹಾಗೂ ಸಂಜೀವರಾಯನ ಕೋಟೆ ಗ್ರಾಮದ ಆರ್ಎಂಪಿ ವೈದ್ಯರು ಕರೆದೊಯ್ದದಂತೆ ನಾಟಕವಾಡಿ, ಬಳಿಕ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಿದ್ದಾರೆ.
ಕಳೆದ ಮೂರು ದಿನಗಳಿಂದ ಅಸ್ವಸ್ಥಗೊಂಡ ರೋಗಿಗಳಿಗೆ ಚಿಕಿತ್ಸೆ ನೀಡಿದ ಖಾಸಗಿ ಆಸ್ಪತ್ರೆಗಳ ವೈದ್ಯರು ಮನಸೋ ಇಚ್ಛೆ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ದೂರು ಕೇಳಿ ಬಂದಿವೆ.
ಸಂಜೀವರಾಯನಕೋಟೆ ಗ್ರಾಮದ ಮೂಲಕ ಹಾದುಹೋಗುವ ಉಪಕಾಲುವೆ ನೀರನ್ನು ನೇರವಾಗಿ ಸೇವನೆ ಮಾಡಿದ್ದರಿಂದ 79ಕ್ಕೂ ಅಧಿಕ ಮಂದಿ ಅಸ್ವಸ್ಥಗೊಂಡಿದ್ದಾರೆ. ಈ ಸಂಬಂಧ ಈಟಿವಿ ಭಾರತದೊಂದಿಗೆ ಮಾತನಾಡಿದ ಶ್ರೀಕಾಂತ್, ವಾಂತಿ- ಬೇಧಿ ಪ್ರಕರಣವನ್ನು ಖಾಸಗಿ ಆಸ್ಪತ್ರೆಗಳು ಬಂಡವಾಳ ಮಾಡಿಕೊಂಡು ಅಂದಾಜು 16 - 20 ಸಾವಿರ ರೂ. ಹಣ ಸ್ವೀಕರಿಸುತ್ತಿದ್ದಾರೆ ಎಂದು ದೂರಿದ್ದಾರೆ.