ಬಳ್ಳಾರಿ: ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಮಂತ್ರಿ ಅಮಿತ್ ಶಾ ವಿರುದ್ಧ ಚಾಮರಾಜಪೇಟೆ ಶಾಸಕ ಜಮೀರ್ ಅಹಮ್ಮದ್ ಖಾನ್ ಅವಾಚ್ಯ ಶಬ್ದ ಬಳಸಿ ನಿಂದಿಸಿದ್ದಾರೆ.
ಜಿಲ್ಲೆಯ ಸಂಡೂರು ತಾಲೂಕು ತೋರಣಗಲ್ಲು ಪೊಲೀಸ್ ಠಾಣೆಯ ಒಳಾಂಗಣದಲ್ಲಿ ಮುಸ್ಲಿಂ ಧರ್ಮಿಯರನ್ನು ಉದ್ದೇಶಿಸಿ ಮಾತನಾಡಿ, ಪ್ರಧಾನಿ ಮೋದಿ , ಗೃಹ ಸಚಿವ ಅಮಿತ್ ಶಾ ವಿರುದ್ಧ "ತೇರಿ ತಾನಾಷಾಯಿ ನಹೀ ಚಲೇಗಿ..... ತುಮಾರಾ ದರ್ಬಾರ್ ನಹಿ ಚಲೇಗಾ" ಎಂದು ಉರ್ದು ಭಾಷೆಯಲ್ಲಿ ಘೋಷಣೆ ಮೊಳಗಿಸಿದ್ದಾರೆ. ಈ ವೇಳೆ, ನೆರೆದಿದ್ದ ನೂರಾರು ಯುವಕರು ಭೋಲೋ ಭಾರತ್ ಮಾತಾಕೀ ಜೈ ಎಂದು ಕೇಕೆ ಹಾಕಿದ್ರು.
ಜಮೀರ್ ವಿರುದ್ಧ ಪ್ರಕರಣ ದಾಖಲಿಸುವೆ: ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ವಿರುದ್ಧ ಅವಾಚ್ಯ ಶಬ್ದಗಳ ಬಳಸಿದ ಶಾಸಕ ಜಮೀರ್ ಅಹಮ್ಮದ್ ಖಾನ್ ವಿರುದ್ಧ ದೂರು ದಾಖಲಿಸುವುದಾಗಿ ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರರೆಡ್ಡಿ ತಿಳಿಸಿದ್ದಾರೆ.
ಇನ್ನು ಇದಕ್ಕೂ ಮೊದಲು, ಕೊಟ್ಟ ಮಾತಿನಂತೆ ಬಳ್ಳಾರಿಗೆ ಬಂದಿದ್ದ ಶಾಸಕ ಜಮೀರ್ ಅಹಮ್ಮದ್ ಖಾನ್ಗೆ ಅಭಿಮಾನಿ ಬಳಗ ಸನ್ಮಾನಿಸಿತು. ಮತ್ತೊಂದೆಡೆ ಬಳ್ಳಾರಿ ನಗರ ಶಾಸಕ ಗಾಲಿ ಸೋಮ ಶೇಖರ ರೆಡ್ಡಿ ಪೋಟೊಗೋ ಅಭಿಮಾನಿ ಬಳಗ ಕ್ಷೀರಾಭಿಷೇಕ ಮಾಡಿದೆ.
ಶಾಸಕ ಗಾಲಿ ಸೋಮಶೇಖರ ರೆಡ್ಡಿಯ ಪ್ರಚೋದನಕಾರಿ ಭಾಷಣದ ಹಿನ್ನೆಲೆ ಜನವರಿ 13ರಂದು ಬಳ್ಳಾರಿಗೆ ಬರುವುದಾಗಿ ಹೇಳಿದ್ದ ಶಾಸಕ ಜಮೀರ್ ಅಹಮ್ಮದ್ ಖಾನ್, ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆಂದು ಅಭಿಮಾನಿಗಳು ಸಂಡೂರು ತಾಲೂಕಿನ ತೋರಣಗಲ್ಲಿನ ವಿದ್ಯಾನಗರದ ಜಿಂದಾಲ್ ಏರ್ ಪೋರ್ಟ್ನಲ್ಲಿ ಸನ್ಮಾನಿಸಿದರು. ಮತ್ತೊಂದೆಡೆ ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಅಭಿಮಾನಿಗಳು ರೆಡ್ಡಿ ಪೋಟೊಗೆ ಕ್ಷೀರಾಭಿಷೇಕ ಮಾಡಿದರು.