ETV Bharat / state

ಜುಬಿಲಂಟ್​ ಕೊರೊನಾ ವೈರಸ್ ಮೂಲ ಪತ್ತೆಗೆ ರಾಜ್ಯ ಸರ್ಕಾರ ಹರಸಾಹಸ: ಸಚಿವ ಶ್ರೀರಾಮುಲು

ಜುಬಿಲಂಟ್​ ಕಾರ್ಖಾನೆಗೆ ಬಂದ ಕಂಟೇನರ್ ಟೆಸ್ಟ್​​ ರಿಪೋರ್ಟ್​​ ಇನ್ನೂ ಬಂದಿಲ್ಲ. ಹೀಗಾಗಿ ಕೊರೊನಾ ವೈರಸ್ ಮೂಲ ಪತ್ತೆಗೆ ರಾಜ್ಯ ಸರ್ಕಾರ ಹರಸಾಹಸ ಪಡುತ್ತಿದೆ ಎಂದು ಸಚಿವ ಶ್ರೀರಾಮುಲು ಹೇಳಿದ್ದಾರೆ.

ministr sriramulu pressmeet in bellary
ಸಚಿವ ಶ್ರೀರಾಮುಲು ಹೇಳಿಕೆ
author img

By

Published : Apr 10, 2020, 4:45 PM IST

ಬಳ್ಳಾರಿ: ಕೊರೊನಾ ವೈರಸ್ ಮೂಲ ಪತ್ತೆಗೆ ರಾಜ್ಯ ಸರ್ಕಾರ ಹರಸಾಹಸ ಪಡುತ್ತಿದೆ. ಜುಬಿಲಿಯಂಟ್​​ ಕಾರ್ಖಾನೆಗೆ ಬಂದ ಕಂಟೇನರ್ ಪುಣೆ ಲ್ಯಾಬ್​​ಗೆ ಟೆಸ್ಟಿಂಗ್​​​ಗೆ ಕಳಿಸಿದ್ರೂ ಈವರೆಗೂ ರಿಪೋರ್ಟ್ ಬಂದಿಲ್ಲ. ಹೀಗಾಗಿ, ರಾಜ್ಯ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ.

ಸಚಿವ ಶ್ರೀರಾಮುಲು

ಹೌದು, ಹೀಗಂತ ಸ್ವತಃ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅವರೇ ಈ ವಿಚಾರವನ್ನ ಹೊರಹಾಕಿದ್ದಾರೆ. ಮೈಸೂರು ಜಿಲ್ಲೆಯ ನಂಜನಗೂಡಿನ ಜುಬಿಲಂಟ್​ ಕಾರ್ಖಾನೆಗೆ ಮಾರ್ಚ್ 10ಕ್ಕೆ ಚೀನಾದಿಂದ ಈ ಕಂಟೇನರ್ ಬಂದಿತ್ತು. ದುಬೈ ಹಾಗೂ ಚೀನಾ ಮೂಲದ ಕಾರ್ಮಿಕರು ಅದರೊಳಗೆ ಇದ್ದರು. ಸೆಮಿ ಲಿಕ್ವಿಡ್ ತಂದಿತ್ತು. ಅದರ ಮೂಲಕ ಈ ಸೋಂಕು ಹರಡಿರೋ ಸಾಧ್ಯತೆ ಇದೆ. ಹೀಗಾಗಿ, ಪುಣೆ ಲ್ಯಾಬ್​​ಗೆ ಈ ಕಂಟೇನರ್ ಪರೀಕ್ಷೆಗೆ ಕಳಿಸಲಾಗಿತ್ತು. ಈವರೆಗೂ ಲ್ಯಾಬ್ ಟೆಸ್ಟಿಂಗ್ ರಿಪೋರ್ಟ್ ಬಂದಿಲ್ಲ. ಹೀಗಾಗಿ ನಮಗೆ ಈ ಕೊರೊನಾ ವೈರಸ್ ಮೂಲ ಪತ್ತೆಯಾಗಿಲ್ಲ ಎಂಬ ಆತಂಕವನ್ನು ಬಳ್ಳಾರಿಯಲ್ಲಿಂದು ಸುದ್ದಿಗಾರರ ಮುಂದೆ ತೋಡಿಕೊಂಡ್ರು.

ಸೀಲ್​​ ಡೌನ್ ಬಗ್ಗೆ ಮಾಹಿತಿ ಇಲ್ಲ: ಸದ್ಯ ನನಗಂತೂ ಸೀಲ್ ​​ಡೌನ್ ಬಗ್ಗೆ ಮಾಹಿತಿ ಇಲ್ಲ‌.‌ ಅದನ್ನ ಪ್ರಧಾನಿ ನರೇಂದ್ರ ಮೋದಿಯವ್ರು, ಸಿಎಂ ಬಿಎಸ್​​ವೈ ಅವರೇ ಅಂತಿಮ‌ ನಿರ್ಧಾರ‌ ಕೈಗೊಳ್ಳುತ್ತಾರೆ ಎಂದ್ರು ಸಚಿವ ಶ್ರೀರಾಮುಲು.

ರಾಜಕಾರಣ ಮಾಡಲ್ಲ: ಡಿಸಿಎಂ ಡಾ. ಅಶ್ವತ್ಥ್ ನಾರಾಯಣ, ಸಚಿವ ಡಾ. ಸುಧಾಕರ್​​ ಹಾಗೂ ನನ್ನ ನಡುವೆ ಯಾವುದೇ ವೈಮನಸ್ಸು ಇಲ್ಲ. ರಾಜ್ಯದಲ್ಲಿ ನಾನು ಈಗಾಗಲೇ 19 ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಿರುವೆ. ಮುಂದೆಯೂ ಕೈಗೊಳ್ಳುವೆ. ಇದರಲ್ಲಿ ನಾನಂತೂ ರಾಜಕಾರಣ ಬೆರೆಸೋಕೆ ಹೋಗಲ್ಲ ಎಂದ್ರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.