ಬಳ್ಳಾರಿ: ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕನ್ನು ಬಳ್ಳಾರಿಗೆ ಸೇರಿಸಲು ಕೂಗು ಎದ್ದಿದೆ. ಮೊಳಕಾಲ್ಮೂರು ತಾಲೂಕನ್ನು ಬಳ್ಳಾರಿಗೆ ಸೇರಿಸಲು ನನ್ನ ಸಹಮತವಿದೆ ಎಂದು ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಹೇಳಿದರು.
ನಗರದ ಗೋವಿಂದಪ್ಪ ಕಲ್ಯಾಣ ಮಂಟಪದಲ್ಲಿ ಮಾಧ್ಯಮದರೊಂದಿಗೆ ಮಾತನಾಡಿದ ಅವರು, ಬಳ್ಳಾರಿ ಜಿಲ್ಲೆ ವಿಭಜನೆ ವಿಚಾರದಲ್ಲಿ ಸಿಎಂ ನಿರ್ಧಾರ ತೆಗೆದುಕೊಂಡಿದ್ದಾರೆ. ಅದಕ್ಕೆ ನಾವು ಬದ್ಧ. ಸೋಮಶೇಖರ್ ರೆಡ್ಡಿಯವರು ಯಾವುದೋ ಒತ್ತಡದಲ್ಲಿ ವಿರೋಧಿಸುತ್ತಿರಬಹುದು. ಎಲ್ಲರನ್ನೂ ವಿಶ್ವಾಸಕ್ಕೆ ತಗೆದುಕೊಂಡು ಜಿಲ್ಲೆ ವಿಭಜನೆ ಮಾಡಲಾಗಿದೆ. ಯಾರಿಗೂ ವಿರೋಧ ಇಲ್ಲ ಎಂದರು.
ವಿಜಯನಗರ ಜಿಲ್ಲೆಗೆ ಆರು ತಾಲೂಕು ಸೇರಿಸಿದ್ದು, ಬಳ್ಳಾರಿ ಜಿಲ್ಲೆಗೆ ಐದು ಉಳಿಯುತ್ತವೆ. ಹಾಗಾಗಿ ಬಳ್ಳಾರಿಗೆ ಮೊಳಕಾಲ್ಮೂರು ಸೇರಿಸಿ ಆರು ತಾಲೂಕುಗಳಾಗಿ ಮಾಡುವ ಕೂಗು ಕೇಳಿ ಬರುತ್ತಿದೆ ಎಂದರು.
ಮುಖ್ಯಮಂತ್ರಿ ಯಡಿಯೂರಪ್ಪನವರು 40 ವರ್ಷಗಳ ಕಾಲ ಹೋರಾಟ ಮಾಡಿ ಬಂದವರು. ಅವರ ನಾಯಕತ್ವ ಬದಲಾವಣೆ ವಿಚಾರ ಇಲ್ಲ. ಅವರೇ ನಮ್ಮ ನಾಯಕರು. ಸಿಎಂ ಯಡಿಯೂರಪ್ಪ ಸಮರ್ಥವಾಗಿದ್ದಾರೆ. ಅವರ ಮಾತು ದಾಟೋರು ಇಲ್ಲ. ಬಹಳಷ್ಟು ಜನ ಮಂತ್ರಿ ಸ್ಥಾನ ಬೇಡಿಕೆ ಇಟ್ಟಿದ್ದಾರೆ. ಮೊನ್ನೆ ಸಿಎಂ ದೆಹಲಿಗೆ ಹೋದಾಗ ಆ ಬಗ್ಗೆ ಅಂತಿಮ ನಿರ್ಧಾರ ಆಗಿಲ್ಲ. ಶೀಘ್ರದಲ್ಲಿ ದೆಹಲಿಗೆ ಹೋಗಿ ಯಾರು ಸಚಿವರಾಗಬೇಕು ಎಂದು ಫೈನಲ್ ಮಾಡುತ್ತಾರೆ. 17 ಜನ ಶಾಸಕರ ಗುಂಪು ಒಂದಡೆ ಸೇರಿ ಚರ್ಚಿಸಿದರೆ ಪಕ್ಷ ವಿರೋಧಿ ಚಟುವಟಿಕೆ ಅಲ್ಲ ಎಂದು ಶ್ರೀರಾಮುಲು ಹೇಳಿದ್ದಾರೆ.