ಹೊಸಪೇಟೆ(ವಿಜಯನಗರ): ಗೆಲುವು ಅಥವಾ ಏನಾದರೂ ಸಾಧಿಸಬೇಕಾದರೇ ಮನುಷ್ಯನಿಗೆ ವಿದ್ಯೆಯ ಜತೆಗೆ ಸಂಸ್ಕಾರ ಇರಬೇಕು. ಬಳ್ಳಾರಿ ಜಿಲ್ಲೆ ನನಗೆ ರಾಜಕಾರಣದಲ್ಲಿ ಜನ್ಮ ನೀಡಿದೆ. ಆದರೆ ಕರ್ಮ ಭೂಮಿಗಳು ಅನೇಕ ಇವೆ ಎಂದು ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಹೇಳಿದರು.
ಹಗರಿಬೊಮ್ಮನಹಳ್ಳಿ ತಾಲೂಕಿನ ಉಪನಾಯಕನಹಳ್ಳಿ ಗ್ರಾಮದ ಬಳಿ 19 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಾಗಿರುವ ನೂತನ ಮೊರಾರ್ಜಿ ದೇಸಾಯಿ ವಸತಿ ಶಾಲೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಶಿಕ್ಷಾಭಿಮಾನ ಸರ್ವಾಂಗೀಣ ಪ್ರಗತಿ ಸಾಧ್ಯ ಎಂದು ಹೇಳಿದ ಸಚಿವ ಶ್ರೀರಾಮುಲು 10 ಜಿಲ್ಲೆಗಳಲ್ಲಿ ಕ್ರೀಡಾ ಶಾಲೆಗಳ ಸ್ಥಾಪನೆ, ವಸತಿ ಶಾಲೆಗಳಿಗೆ 500 ವಾರ್ಡನ್ಗಳು ಹಾಗೂ ಶಿಕ್ಷಕರ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುವುದು. ಜೊತೆಗೆ ರಾಜ್ಯದಲ್ಲಿರುವ ಎಲ್ಲ ವಸತಿ ಶಾಲೆಗಳಿಗೆ ಮೂಲ ಸೌಕರ್ಯ ಕಲ್ಪಿಸಲಾಗುವುದು ಎಂದರು.
ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ಏಳೆಂಟು ಅಂಬೇಡ್ಕರ್ ಮತ್ತು ವಾಲ್ಮೀಕಿ ಭವನ ಮಂಜೂರು ಮಾಡುವಂತೆ ಸ್ಥಳೀಯ ಶಾಸಕ ಭೀಮಾನಾಯಕ್ ಮನವಿ ಮಾಡಿದ್ದು,ಪಟ್ಟಿ ನೀಡಿದಲ್ಲಿ ತಕ್ಷಣ ಮಂಜೂರು ಮಾಡುವುದ್ದಾಗಿ ಸಚಿವ ಶ್ರೀರಾಮುಲು ತಿಳಿಸಿದರು.
ಈ ವೇಳೆ ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯಕ್, ಸಂಸದ ವೈ.ದೇವೇಂದ್ರಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಓದಿ: ಸ್ವಪಕ್ಷದವರೇ ಮಸಲತ್ ಮಾಡಿ ನನ್ನ ಬಾದಾಮಿಯಲ್ಲಿ ಸೋಲಿಸಿದ್ರು : ಸಚಿವ ಶ್ರೀರಾಮುಲು