ETV Bharat / state

ಹಂಪಿ ಉತ್ಸವಕ್ಕೆ ಚಾಲನೆ‌‌‌ ನೀಡಿದ ಸಚಿವ ಆನಂದ್​ ಸಿಂಗ್ - HAMPI USTAVA INAUGURATION NEWS

ವೇದಿಕೆಯ ಕಾರ್ಯಕ್ರಮದಲ್ಲಿ ಬಳ್ಳಾರಿ ನಗರ ಕ್ಷೇತ್ರದ ಶಾಸಕ ಸೋಮಶೇಖರ್ ರೆಡ್ಡಿ ಗೈರಾಗಿದ್ದರು. ಇದು ಹಲವು ರಾಜಕೀಯ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿತ್ತು.

ಹಂಪಿ ಉತ್ಸವ
ಹಂಪಿ ಉತ್ಸವ
author img

By

Published : Nov 13, 2020, 9:09 PM IST

ಹೊಸಪೇಟೆ: ಹಂಪಿಯ ಉದ್ಧಾನ ವೀರಭದ್ರೇಶ್ವರ ದೇವಸ್ಥಾನದ ವೇದಿಕೆಯಲ್ಲಿ ಅರಣ್ಯ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆನಂದ್​‌‌ ಸಿಂಗ್ ಹಂಪಿ ಉತ್ಸವನ್ನು ಉದ್ಘಾಟಿಸಿದರು. ಬಳಿಕ ಭುವನೇಶ್ವರಿ ದೇವಿಗೆ ಪುಷ್ಪಾರ್ಪಣೆ ಮಾಡುವ ಮೂಲಕ ಶೋಭಾಯಾತ್ರೆಗೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಕೊರೊನಾ ಹಿನ್ನೆಲೆ ಸರಳವಾಗಿ ಹಂಪಿ ಉತ್ಸವ ಆಚರಣೆ ಮಾಡಲಾಗುತ್ತಿದೆ. 2021ಕ್ಕೆ ವಿಜೃಂಭಣೆಯಿಂದ ಆಚರಣೆ ಮಾಡಲಾಗುವುದು ಎಂದು ಭರವಸೆ ನೀಡಿದರು.‌

ಹಂಪಿ ಉತ್ಸವಕ್ಕೆ ಚಾಲನೆ‌‌‌ ನೀಡಿದ ಸಚಿವ ಆನಂದ್​‌ ಸಿಂಗ್

ಕಲಾ ತಂಡಗಳ ಮೆರುಗು: ಶೋಭಾಯಾತ್ರೆಯಲ್ಲಿ ಕಲಾ ತಂಡಗಳು ಉತ್ಸವಕ್ಕೆ ಮೆರುಗು ನೀಡಿದವು. ಜಿಲ್ಲಾ, ತಾಲೂಕಿನ ತಲಾ ಎರಡು ಕಲಾ ತಂಡಗಳು ಭಾಗವಹಿಸಿದ್ದವು. ವೀರಭದ್ರೇಶ್ವರ ವಾದ್ಯ ಸಂಘ- ನಂದಿ ಧ್ವಜ ಹಾಗೂ ಸಮಾಳ ಹರಪನಹಳ್ಳಿಯ ವಿಶ್ವಕಲಾ ರೈತ ಸಂಘ, ಕೀಲು ಕುದುರೆ ಮತ್ತು ಗರಡು ಗೊಂಬೆ, ಮಲಪನಗುಡಿ ಆಂಜನೇಯ ಡೊಳ್ಳು ಕುಣಿತ ತಂಡ, ಕಂಪ್ಲಿಯ ಹಕ್ಕಿಪಿಕ್ಕಿ ನೃತ್ಯ ತಂಡ, ಕೂಡ್ಲಿಗಿ ದುರ್ಗಮ್ಮ ಡೊಳ್ಳು ಕುಣಿತ ತಂಡ, ಕುರುಗೋಡು ದೊಡ್ಡ ಬಸವೇಶ್ವರ ಹಗಲು ವೇಷ ಕಲಾ ಸಂಘ, ಹಳೇ ದರೋಜಿ ಅಶ್ವರಾಮಣ್ಣ ಹಗಲು ವೇಷ ಕಲಾ ಸಂಘ, ಸಂಡೂರಚಂದ್ರಶೇಖರ ಡೊಳ್ಳು ಕುಣಿತ ತಂಡ, ಹೊಸಪೇಟೆ ಮರಗಾಳು ಕುಣಿತ ಕಲಾ ತಂಡ, ಸಿರಗುಪ್ಪ ಸಿಂದೊಳ್ಳಿ ಕುಣಿತ, ಬಳ್ಳಾರಿಯ ಗೊರವ ಕುಣಿತ ಮಲ್ಲಯ್ಯ ತಂಡ ಕಲಾ ಪ್ರದರ್ಶನ ಅತ್ಯಾಕರ್ಷಣೆಯಿಂದ ಕೂಡಿತ್ತು.‌

ಸೋಮಶೇಖರ್ ರೆಡ್ಡಿ ಗೈರು: ವೇದಿಕೆಯ ಕಾರ್ಯಕ್ರಮದಲ್ಲಿ ಬಳ್ಳಾರಿ ನಗರ ಕ್ಷೇತ್ರದ ಶಾಸಕ ಸೋಮಶೇಖರ್ ರೆಡ್ಡಿ ಗೈರಾಗಿದ್ದರು. ಇದು ಹಲವು ರಾಜಕೀಯ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.