ಬಳ್ಳಾರಿ: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಇಂದು ನಡೆದ 72ನೇ ಗಣರಾಜ್ಯೋತ್ಸವ ದಿನಾಚರಣೆ ಪ್ರಯುಕ್ತ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸಚಿವ ಆನಂದ್ ಸಿಂಗ್ ಸನ್ಮಾನ ಮಾಡಿದರು.
ಓದಿ: ರಾಜ್ಯದಲ್ಲಿಂದು 529 ಮಂದಿಗೆ ಕೊರೊನಾ ದೃಢ: 4 ಸೋಂಕಿತರು ಸಾವು
72ನೇ ಗಣರಾಜ್ಯೋತ್ಸವ ದಿನಾಚರಣೆ ಪ್ರಯುಕ್ತ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಾದ, 2020-21ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ (ವೈದ್ಯಕೀಯ ಕ್ಷೇತ್ರ) ವಿಜೇತರಾದ ಡಾ. ಕೆ.ನಾಗರತ್ನ ಸುಯಜ್ಞ, ಶ್ರೀ ಊರಮ್ಮ ದೇವಿ ಸೇವಾ ಟ್ರಸ್ಟ್ ಮಾಜಿ ದೇವದಾಸಿ (ಸಮಾಜ ಸೇವೆಗೆ), ಹಾವು ಮತ್ತು ವನ್ಯಜೀವಿ ಸಂರಕ್ಷಕ ಸಮೀರ್ ಶೇಠ್ ಸಾಬ್ರಿ, 2019-20ನೇ ಸಾಲಿನ ವಿಶೇಷ ಚೇತನ ಮಕ್ಕಳ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ ಪಡೆದ ಆಕಾಶ್, ರಾಜ್ಯಮಟ್ಟದ 18 ವರ್ಷದ ಮಹಿಳೆಯರ ಗುಂಡು ಎಸೆತದಲ್ಲಿ ಬಂಗಾರದ ಪದಕ ಪಡೆದುಕೊಂಡ ಪಿ.ಕೀರ್ತಿ ಸೇರಿದಂತೆ ಹಲವರಿಗೆ ಸನ್ಮಾನ ಮಾಡಲಾಗಿದೆ.
ಮಾಜಿ ಸೈನಿಕರಿಗೆ ಸರ್ಕಾರಿ ಜಮೀನು ಪತ್ರ ವಿತರಣೆ:
ಮಾಜಿ ಸೈನಿಕರಾದ ಶಕೀಬ್ ಭಾಷ, ಅಲ್ಫರ್ಡ ತ್ಯಾಗರಾಜ, ಸುಬೇದಾರ್ ಚೆನ್ನಪ್ಪ ಕ್ಸೆವಿಯರ್, ಆರ್.ನಾಗರಾಜ್, ಜೆ.ಕುಮಾರಸ್ವಾಮಿ, ಐ.ವಿಜಯ ಕುಮಾರ್ ರೆಡ್ಡಿ, ಎಸ್.ಶಶಿಕುಮಾರ್, ಎಸ್.ವೆಂಕಟೇಶಲು, ಎಂ.ಮುದುಕಪ್ಪ, ಶ್ರೀನಿವಾಸ, ಎಂ.ಕೆ.ಸಯ್ಯದ್ ಅವರಿಗೆ ಸರ್ಕಾರಿ ಜಮೀನು ಮಂಜೂರು ಮಾಡಿದ ಪತ್ರಗಳನ್ನು ಸಚಿವ ಆನಂದ್ ಸಿಂಗ್ ವಿತರಣೆ ಮಾಡಿದರು.
ಅಲ್ಲದೇ ವಿಶೇಷ ಚೇತನರಿಗೆ ಉಚಿತ ಮೋಟಾರ್ ಸೈಕಲ್ಅನ್ನು ಸಚಿವ ಆನಂದ್ ಸಿಂಗ್ ವಿತರಣೆ ಮಾಡಿದರು.