ETV Bharat / sports

ಹೆಚ್ಚು ಬಾರ್ಡರ್ ಗವಾಸ್ಕರ್ ಟ್ರೋಫಿ ಗೆದ್ದ ತಂಡ ಯಾವುದು?: ಇಲ್ಲಿದೆ ಹೆಡ್ ಟು ಹೆಡ್ ರೆಕಾರ್ಡ್ ಮಾಹಿತಿ - BORDER GAVASKAR TROPHY HISTORY

1996ರಲ್ಲಿ ಆರಂಭವಾದ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಇದುವರೆಗೆ 16 ಸರಣಿಗಳನ್ನು ಆಯೋಜಿಸಲಾಗಿದೆ. ಈ ಬಾರ್ಡರ್ ಗವಾಸ್ಕರ್ ಟ್ರೋಫಿಯ ಇತಿಹಾಸ ಏನು, ಆಸ್ಟ್ರೇಲಿಯಾ ವಿರುದ್ಧ ಭಾರತದ ದಾಖಲೆ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ರೋಹಿತ್ ಶರ್ಮಾ, ಪ್ಯಾಟ್ ಕಮ್ಮಿನ್ಸ್
ರೋಹಿತ್ ಶರ್ಮಾ, ಪ್ಯಾಟ್ ಕಮ್ಮಿನ್ಸ್ (ANI)
author img

By ETV Bharat Karnataka Team

Published : Nov 18, 2024, 8:53 PM IST

ನವದೆಹಲಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್ ಗವಾಸ್ಕರ್ ಸರಣಿ ನವೆಂಬರ್ 22 ರಿಂದ ಪ್ರಾರಂಭವಾಗಲಿದೆ. ರೋಚಕ ಪಂದ್ಯಗಳನ್ನು ವೀಕ್ಷಿಸಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

1996ರಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್ ಗವಾಸ್ಕರ್ ಟ್ರೋಫಿ ಪ್ರಾರಂಭವಾಯಿತು. ಮೊದಲ ಬಾರಿ ಕೇವಲ 1 ಪಂದ್ಯ ನಡೆಯಿತು, ಇದರಲ್ಲಿ ಟೀಂ ಇಂಡಿಯಾ 1-0 ಅಂತರದಿಂದ ಗೆದ್ದಿತು. ಇದರ ನಂತರ, 1997 ರಿಂದ 2001 ರವರೆಗೆ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ 3 ಟೆಸ್ಟ್ ಪಂದ್ಯಗಳ ಸರಣಿ ನಡೆದವು.

ಬಾರ್ಡರ್ ಗವಾಸ್ಕರ್ ಟ್ರೋಫಿಯನ್ನು ಭಾರತ ಮತ್ತು ಆಸ್ಟ್ರೇಲಿಯಾ ನಡುವೆ 2003 ರಿಂದ 2023 ರವರೆಗೆ 4 ಪಂದ್ಯಗಳ ಟೆಸ್ಟ್ ಸರಣಿಯನ್ನಾಗಿ ನಡೆಸಲಾಯಿತು. ಇದೀಗ, ಕೆಂಪು ಚೆಂಡು ಕ್ರಿಕೆಟ್‌ನ ಈ ರೋಚಕ ಪಂದ್ಯಾವಳಿ 5 ಟೆಸ್ಟ್ ಪಂದ್ಯಗಳ ಸರಣಿಯಾಗಿ ನಡೆಯುತ್ತಿರುವುದು ಇದೇ ಮೊದಲು. ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಹೆಚ್ಚು ಟ್ರೋಫಿ ಗೆದ್ದ ತಂಡ ಯಾವುದು? ಸರಣಿಯ ಹೆಡ್ ಟು ಹೆಡ್ ರೆಕಾರ್ಡ್ ಮಾಹಿತಿ ಇಲ್ಲಿದೆ.

ಬಾರ್ಡರ್ ಗವಾಸ್ಕರ್ ಟ್ರೋಫಿಯ ಇತಿಹಾಸ:

  • 1996ರಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಬಾರ್ಡರ್ ಗವಾಸ್ಕರ್ ಟ್ರೋಫಿಯ 1 ಟೆಸ್ಟ್​ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಟೀಂ ಇಂಡಿಯಾ ಕಾಂಗರೂಗಳನ್ನು 7 ವಿಕೆಟ್​ಗಳಿಂದ ಸೋಲಿಸಿತು. ಈ ಪಂದ್ಯದಲ್ಲಿ ಅನಿಲ್ ಕುಂಬ್ಳೆ 9 ವಿಕೆಟ್ ಪಡೆದಿದ್ದರೆ, ನಯನ್ ಮೊಂಗಿಯಾ 152 ರನ್ ಬಾರಿಸಿದ್ದರು.
  • 1997ರಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಎರಡನೇ ಬಾರಿಗೆ 3 ಪಂದ್ಯಗಳ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿ ನಡೆಯಿತು. ಈ ಸರಣಿಯನ್ನು ಟೀಂ ಇಂಡಿಯಾ 2-1ರಿಂದ ಗೆದ್ದು ಬೀಗಿತು. ಸಚಿನ್ ತೆಂಡೂಲ್ಕರ್ 446 ರನ್ ಮತ್ತು 1 ವಿಕೆಟ್​ನೊಂದಿಗೆ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.
  • 1999 ರಲ್ಲಿ ಉಭಯ ದೇಶಗಳ ನಡುವೆ 3 ಪಂದ್ಯಗಳ ಬಾರ್ಡರ್ ಗವಾಸ್ಕರ್ ಟ್ರೋಫಿ ನಡೆಯಿತು. ಮೊದಲ ಬಾರಿಗೆ ಆಸ್ಟ್ರೇಲಿಯಾ ಭಾರತವನ್ನು 3-0 ಅಂತರದಿಂದ ಸೋಲಿಸಿತು.
  • 2000ದಲ್ಲಿ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿ ಎರಡು ದೇಶಗಳ ನಡುವೆ ನಾಲ್ಕನೇ ಬಾರಿಗೆ ನಡೆಯಿತು. ಭಾರತ 3 ಪಂದ್ಯಗಳ ಸರಣಿಯನ್ನು 2-1 ರಿಂದ ಗೆದ್ದು, ಈ ಟೂರ್ನಿಯಲ್ಲಿ ತನ್ನ ಪ್ರಾಬಲ್ಯ ಮುಂದುವರೆಸಿತು. ಈ ಸರಣಿಯಲ್ಲಿ ಹರ್ಭಜನ್ ಸಿಂಗ್ 32 ವಿಕೆಟ್ ಹಾಗೂ 34 ರನ್ ಗಳಿಸಿ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.
  • 2003ರಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 4 ಪಂದ್ಯಗಳ ಬಾರ್ಡರ್ ಗವಾಸ್ಕರ್ ಟ್ರೋಫಿ 1-1 ರಿಂದ ಡ್ರಾ ಆಯಿತು. ಈ ಎರಡು ದೇಶಗಳ ನಡುವೆ ಸರಣಿ ಡ್ರಾ ಆಗಿರುವುದು ಇದೇ ಮೊದಲು. ಈ ಸರಣಿಯಲ್ಲಿ 619 ರನ್ ಗಳಿಸಿದ್ದ ರಾಹುಲ್​ ದ್ರಾವಿಡ್​ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.
  • 2004ರಲ್ಲಿ ಬಾರ್ಡರ್ ಗವಾಸ್ಕರ್ ಟ್ರೋಫಿಯ 4 ಪಂದ್ಯಗಳ ಸರಣಿ ನಡೆಯಿತು. ಆಸ್ಟ್ರೇಲಿಯಾ ತಂಡ ಟೀಂ ಇಂಡಿಯಾ ವಿರುದ್ಧ 2-1 ರಿಂದ ಸರಣಿ ಜಯಿಸಿತು.
  • ಆಸ್ಟ್ರೇಲಿಯಾ ಮತ್ತೊಮ್ಮೆ 2007ರಲ್ಲಿ 4 ಪಂದ್ಯಗಳ ಬಾರ್ಡರ್ ಗವಾಸ್ಕರ್ ಟ್ರೋಫಿಯನ್ನು 2-1 ರಿಂದ ಗೆದ್ದುಕೊಂಡಿತು. ಈ ಮೂಲಕ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಟೀಂ ಇಂಡಿಯಾವನ್ನು ಸತತವಾಗಿ ಎರಡು ಬಾರಿ ಸೋಲಿಸಿತು. ಈ ಸರಣಿ ಆಸ್ಟ್ರೇಲಿಯಾದಲ್ಲಿ ನಡೆದಿತ್ತು.
  • 2008ರಲ್ಲಿ ನಡೆದ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಟೀಂ ಇಂಡಿಯಾ ಮತ್ತೆ ತನ್ನ ಹಿಡಿತ ಸಾಧಿಸಿತು. 4 ಪಂದ್ಯಗಳ ಸರಣಿಯನ್ನು 2-1 ರಿಂದ ಗೆದ್ದುಕೊಂಡಿತು. ಇದು ಇಶಾಂತ್ ಶರ್ಮಾ ಅವರ ಚೊಚ್ಚಲ ಸರಣಿಯಾಗಿತ್ತು. 15 ವಿಕೆಟ್ ಪಡೆದ ವೇಗದ ಬೌಲರ್ ಇಶಾಂತ್ ಶರ್ಮಾ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.
  • 2010ರಲ್ಲಿ 2 ಪಂದ್ಯಗಳ ಸರಣಿಯನ್ನು 2-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡುವ ಮೂಲಕ ಭಾರತ ಬಾರ್ಡರ್ ಗವಾಸ್ಕರ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು. ಈ ಸರಣಿಯಲ್ಲಿ ಸಚಿನ್ ತೆಂಡೂಲ್ಕರ್ 403 ರನ್ ಗಳಿಸಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.
  • 2011ರಲ್ಲಿ ನಡೆದ 4 ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ಭಾರತವನ್ನು 4 - 0 ಅಂತರದಿಂದ ಸೋಲಿಸಿತು. ಇದಾದ ಬಳಿಕ ಭಾರತ 2012ರಲ್ಲಿ ನಡೆದ 4 ಪಂದ್ಯಗಳ ಸರಣಿಯನ್ನು 4-0 ಅಂತರದಲ್ಲಿ ಗೆದ್ದು ಕಾಂಗರೂಗಳ ವಿರುದ್ಧ ಸೇಡು ತೀರಿಸಿಕೊಂಡಿತು.
  • 2014ರಲ್ಲಿ ನಡೆದ 4 ಪಂದ್ಯಗಳ ಸರಣಿಯನ್ನು ಆಸ್ಟ್ರೇಲಿಯಾ 2-0 ಅಂತರದಲ್ಲಿ ಗೆದ್ದುಕೊಂಡಿತು. ಇದು ಆಸ್ಟ್ರೇಲಿಯಾ ಕೊನೆಯ ಬಾರಿಗೆ ಗೆದ್ದುಕೊಂಡ ಬಾರ್ಡರ್ ಗವಾಸ್ಕರ್ ಟ್ರೋಫಿಯಾಗಿದೆ.
  • 2016ರಲ್ಲಿ ಭಾರತ ನಾಲ್ಕು ಪಂದ್ಯಗಳ ಸರಣಿಯನ್ನು 2-1ರಿಂದ ಗೆದ್ದುಕೊಂಡಿತ್ತು. ನಂತರ 2018 ರಿಂದ 2023ರ ವರೆಗೆ ಬಾರ್ಡರ್ ಗವಾಸ್ಕರ್ ಟ್ರೋಫಿಯ ನಾಲ್ಕು ಪಂದ್ಯಗಳ ಸರಣಿಯನ್ನು ಟೀಂ ಇಂಡಿಯಾ ಸತತವಾಗಿ 4 ಬಾರಿ ಆಸ್ಟ್ರೇಲಿಯಾವನ್ನು 2-1 ಅಂತರದಿಂದ ಸೋಲಿಸಿದೆ.

ಇದುವರೆಗೆ 16 ಬಾರ್ಡರ್ ಗವಾಸ್ಕರ್ ಸರಣಿಗಳನ್ನು ಆಯೋಜಿಸಲಾಗಿದೆ. ಇದರಲ್ಲಿ ಭಾರತ 10 ಬಾರಿ ಟ್ರೋಫಿಯನ್ನು ವಶಪಡಿಸಿಕೊಂಡಿದೆ, ಆಸ್ಟ್ರೇಲಿಯಾ ಕೇವಲ 5 ಬಾರಿ ಸರಣಿಯನ್ನು ಗೆದ್ದಿದೆ ಮತ್ತು ಒಮ್ಮೆ ಸರಣಿ ಡ್ರಾದಲ್ಲಿ ಕೊನೆಗೊಂಡಿದೆ.

ಇದನ್ನೂ ಓದಿ: IPL ಹರಾಜಿನಲ್ಲಿ ಕೆ.ಎಲ್.ರಾಹುಲ್​ ಖರೀದಿಸುವ ತಂಡ, ಪಡೆಯಲಿರುವ ಮೊತ್ತದ ಬಗ್ಗೆ AI ಕೊಟ್ಟ ಉತ್ತರ ಇದು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.