ಬಳ್ಳಾರಿ: ಸಮಾನ ಕೆಲಸಕ್ಕೆ ಸಮಾನ ವೇತನ, ಆಯುಷ್ ಗುತ್ತಿಗೆ ವೈದ್ಯರನ್ನು ನೇಮಕ ಮಾಡಿಕೊಳ್ಳದಿದ್ದರೆ ಜುಲೈ 15ರಂದು ಆಯುಷ್ ಗುತ್ತಿಗೆ ವೈದ್ಯರಿಂದ ಸಾಮೂಹಿಕ ರಾಜೀನಾಮೆ ನೀಡುತ್ತೇವೆ ಎಂದು ಆಯುಷ್ ಫೆಡರೇಷನ್ ಆಫ್ ಇಂಡಿಯಾ ರಾಜ್ಯ ಘಟಕದ ಖಜಾಂಚಿ ಡಾ. ಆನಂದ ಎಸ್. ಕಿರಿಶ್ಯಾಳ ಆಗ್ರಹಿಸಿದರು.
ನಗರದ ಪತ್ರಿಕಾ ಭವದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಇದುವರೆಗೂ 2 ಸಾವಿರ ಆಯುಷ್ ಗುತ್ತಿಗೆ ವೈದ್ಯರು ಕೆಲಸ ಮಾಡುತ್ತಿದ್ದಾರೆ. ಇವರಿಗೆ ವೇತನದಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಅದಕ್ಕಾಗಿ ಜುಲೈ 15ರಂದು ಸಾಮೂಹಿಕ ರಾಜೀನಾಮೆ ಸಲ್ಲಿಸುತ್ತಿದ್ದೇವೆ ಎಂದು ತಿಳಿಸಿದರು. ಈ ವಿಚಾರವಾಗಿ ಎರಡು ಮೂರು ಬಾರಿ ಚರ್ಚೆ ಸಹ ಮಾಡಿದ್ದೇವೆ. ಆದರೆ ಅದಕ್ಕೆ ಪ್ರತಿಕ್ರಿಯೆ ಸರಿಯಾಗಿ ಬಂದಿಲ್ಲ ಎಂದರು.
ನಂತರ ಸಿಂಧನೂರು ತಾಲೂಕಿನ ಆಯುಷ್ ವೈದ್ಯ ಜೀವನೇಶ್ವರಯ್ಯ ಮಾತನಾಡಿ, ಕಳೆದ 14 ವರ್ಷಗಳಿಂದ ಕೆಲಸ ಮಾಡುತ್ತಾ ಇದ್ದೇವೆ. ಆದರೆ 20 ಸಾವಿರ ರೂ. ಸಂಬಳದಲ್ಲಿ ಜೀವನ ನಿರ್ವಹಣೆ ಮಾಡುವುದು ಕಷ್ಟಕರವಾಗಿದೆ ಎಂದರು.
ಬೇಡಿಕೆ :-
1. ಸುಪ್ರೀಂ ಕೋರ್ಟ್ ಆದೇಶದಂತೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು.
2. ರಾಜ್ಯ ಸರ್ಕಾರದ ಹೊರಡಿಸಿದ ಕಾರ್ಮಿಕ ಕಾಯ್ದೆ ನಿಯಮಾನುಸಾರ ಸೌಲಭ್ಯ ನೀಡಬೇಕು.
3. ಗುತ್ತಿಗೆ ನೌಕರರ ನೇಮಕ ಮಾಡಿಕೊಂಡು ತಿಂಗಳಿಗೆ 58,500 ವೇತನ ನೀಡಬೇಕು.
4. 2000 ಗುತ್ತಿಗೆ ಆಧಾರದ ವೈದ್ಯರನ್ನು ಕಾಯಂ ಮಾಡಬೇಕು.