ETV Bharat / state

ಗಣಿ ಜಿಲ್ಲೆಯ 827 ಮಕ್ಕಳಲ್ಲಿ ಅಪೌಷ್ಟಿಕತೆ... ಕೊರೊನಾ 3ನೇ ಅಲೆ ವಕ್ರದೃಷ್ಟಿ ಆತಂಕ!

ಗಣಿನಾಡು ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ 827 ಮಕ್ಕಳಿದ್ದಾರೆ. ಕೊರೊನಾ ಮೂರನೇ ಅಲೆ ಶುರುವಾಗುವ ಮುಂಚಿತವಾಗಿಯೇ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಬಾಲ ಚೈತನ್ಯ ಯೋಗಕ್ಷೇಮ ಕೇಂದ್ರವನ್ನಾರಂಭಿಸಿದೆ.

Malnutrition problem
ಅಪೌಷ್ಟಿಕತೆ
author img

By

Published : Jun 11, 2021, 3:07 PM IST

ಬಳ್ಳಾರಿ: ಗಣಿನಾಡು ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಬರೋಬ್ಬರಿ 827 ಮಕ್ಕಳಲ್ಲಿ ತೀರಾ ಅಪೌಷ್ಟಿಕತೆ ಕೊರತೆ ಎದ್ದು ಕಾಣುತ್ತಿದೆ. ಇದು ಕೊರೊನಾ ಮೂರನೇ ಅಲೆಯ ಆತಂಕಕ್ಕೆ ಎಡೆಮಾಡಿಕೊಟ್ಟಿದೆ.

ಹೌದು, ಈ ಉಭಯ ಜಿಲ್ಲೆಗಳಲ್ಲಿ ಅಂದಾಜು 827 ಮಂದಿ ಮಕ್ಕಳು ಅಪೌಷ್ಟಿಕತೆಯ ರೆಡ್ ಝೋನ್​ನಲ್ಲಿದ್ದಾರೆ. ಅವರೆಲ್ಲರೂ ಕೂಡ ಒಂದಲ್ಲ ಒಂದು ರೀತಿಯ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ.

ಹೀಗಾಗಿ ಮೂರನೇ ಅಲೆ ಶುರುವಾಗುವ ಮುಂಚಿತವಾಗಿಯೇ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಬಾಲ ಚೈತನ್ಯ ಯೋಗಕ್ಷೇಮ ಕೇಂದ್ರವನ್ನಾರಂಭಿಸಿದೆ. ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಈ ಬಾಲ ಚೈತನ್ಯ ಯೋಗಕ್ಷೇಮ ಕೇಂದ್ರ ತೆರೆಯಲಾಗಿದೆ. ನಾನಾ ರೀತಿಯ ಆರೋಗ್ಯ ಸಮಸ್ಯೆ ಎದುರಿಸುವಂತಹ ಮಕ್ಕಳಿಗೆ ಸೂಕ್ತ ಚಿಕಿತ್ಸೆ ನೀಡುವ ಕಾರ್ಯ ಈಗಾಗಲೇ ಈ ಉಭಯ ಜಿಲ್ಲೆಗಳಲ್ಲಿ ಶುರುವಾಗಿದೆ‌.

ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳು:

  • ಹೊಸಪೇಟೆ-145.
  • ಹಗರಿಬೊಮ್ಮನಹಳ್ಳಿ-136.
  • ಬಳ್ಳಾರಿ ಗ್ರಾಮಾಂತರ-130.
  • ಹಡಗಲಿ-110.
  • ಸಂಡೂರು- 70.
  • ಹರಪನಹಳ್ಳಿ- 69.
  • ಸಿರುಗುಪ್ಪ- 62.
  • ಬಳ್ಳಾರಿ ನಗರ- 53.
  • ಕೂಡ್ಲಿಗಿ- 52 ಮಂದಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿದ್ದಾರೆ.

ಆ ಪೈಕಿ 341 ಮಂದಿ ಬಾಲಕರು, 486 ಮಂದಿ ಬಾಲಕಿಯರಾಗಿದ್ದಾರೆ. ಬಳ್ಳಾರಿ ಗ್ರಾಮಾಂತರ ಸೇರಿದಂತೆ ವಿಜಯನಗರ ಜಿಲ್ಲೆಯ ಹೊಸಪೇಟೆ, ಹಗರಿಬೊಮ್ಮನಹಳ್ಳಿ ಹಾಗೂ ಹಡಗಲಿಯಲ್ಲಿ ಅಪೌಷ್ಟಿಕ ಮಕ್ಕಳ ಸಂಖ್ಯೆಯು ನೂರರ ಗಡಿ ದಾಟಿರೋದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

ಯಾವ ಝೋನ್​ನಲ್ಲಿ ಎಷ್ಟು ಮಕ್ಕಳಿದ್ದಾರೆ:

  • ರೆಡ್ ಝೋನ್ - 827.
  • ಯೆಲ್ಲೋ ಝೋನ್ 45,700.
  • ಗ್ರೀನ್ ಝೋನ್- 1,75,000.

ಈ ಸಂಬಂಧ ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಡಿಡಿ ಯು‌.ನಾಗರಾಜ, ಗಣಿ ಜಿಲ್ಲೆಯಲ್ಲಿ ಮೂರನೇ ಅಲೆ ಕೊರೊನಾ ಅಪೌಷ್ಟಿಕ ಮಕ್ಕಳಲ್ಲಿ ಕಾಣಸಿಕೊಳ್ಳುತ್ತದೆಯೆಂಬ ನಿರೀಕ್ಷೆಯಿದೆ. ಹೀಗಾಗಿ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಬಾಲ ಚೈತನ್ಯ ಯೋಗಕ್ಷೇಮ ಕೇಂದ್ರ ತೆರೆಯಲಾಗಿದೆ. ಆ ಕೇಂದ್ರಗಳಲ್ಲಿ ಅಪೌಷ್ಟಿಕ ಮಕ್ಕಳ ಆರೈಕೆ ಸಕಾಲದಲ್ಲಿ ನಡೆಯಲಿದೆ ಎಂದು ಮಾಹಿತಿ ನೀಡಿದ್ರು.

ಇದನ್ನೂ ಓದಿ: ಹಸಿರುವನ ಬೆಳೆಸಿ ಮನಗೆದ್ದಉಪನ್ಯಾಸಕ.. 1 ಎಕರೆ ಜಾಗದಲ್ಲಿ ಅಶ್ವತ್ಥ ಗಿಡಗಳನ್ನ ನೆಟ್ಟು ಪೋಷಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.