ಬಳ್ಳಾರಿ: ವಾಹನ ಸವಾರರಿಂದ ಹಣ ವಸೂಲಿ ಮಾಡುತ್ತಿರುವ ಕುರಿತು ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ರಾಜ್ಯದ ಹಲವೆಡೆ ಆರ್ಟಿಒ ಚೆಕ್ ಪೋಸ್ಟ್ಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದೆ.
ಬಳ್ಳಾರಿಯಿಂದ 12 ಕಿ.ಮೀ ದೂರದಲ್ಲಿರುವ ಎನ್ಹೆಚ್ 63 ರಸ್ತೆಯ ಗೋಡೆಹಾಳ್ ಬಳಿ ಇರೋ ಆರ್ಟಿಒ ಚೆಕ್ ಪೋಸ್ಟ್ ಮೇಲೆ ಬೆಳಗಿನ ಜಾವ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದಾರೆ. ಎಸ್ಪಿ ಪುರುಷೋತ್ತಮ ಮತ್ತು ಡಿವೈಎಸ್ಪಿ ರಾಮರಾವ್ ನೇತೃತ್ವದ ತಂಡ ದಾಳಿ ಮಾಡಿ, ಎರಡೂವರೆ ತಾಸುಗಳ ಕಾಲ ದಾಖಲೆಗಳ ಪರಿಶೀಲನೆ ಮಾಡಿದೆ.
ಇನ್ನು ಲೋಕಾಯುಕ್ತ ಡಿಎಸ್ಪಿ ಅಯ್ಯನಗೌಡ ನೇತೃತ್ವದಲ್ಲಿ ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದ ಹೊರವಲಯದ ವಾಹನ ತಪಾಸಣಾ ಕೇಂದ್ರದ ಮೇಲೆ ದಾಳಿ ನಡೆಸಲಾಗಿದ್ದು, ಈ ಸಂದರ್ಭದಲ್ಲಿ ಹಣ ಮತ್ತು ದಾಖಲೆ ವಶಕ್ಕೆ ಪಡೆಯಲಾಗಿದೆ ಎಂದು ಹೇಳಲಾಗುತ್ತಿದೆ.
ಆಂಧ್ರಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 63 ರಲ್ಲಿರುವ ಚೆಕ್‌ಪೋಸ್ಟ್‌ನಲ್ಲಿ ಗಡಿ ಭಾಗದಿಂದ ನಿತ್ಯ ನೂರಾರು ವಾಹನಗಳು ಬಳ್ಳಾರಿಗೆ ಎಂಟ್ರಿ ಕೊಡುತ್ತವೆ. ದಾಖಲೆಗಳನ್ನು ಸರಿಯಾಗಿ ಚೆಕ್ ಮಾಡುತ್ತಿಲ್ಲ, ತಪಾಸಣೆ ನೆಪದಲ್ಲಿ ಹಣ ಪಡೆಯುತ್ತಾರೆಂಬ ಆರೋಪದ ಹಿನ್ನೆಲೆಯಲ್ಲಿ ಲೋಕಾಯುಕ್ತ ದಾಳಿ ಮಾಡಲಾಗಿದೆ.
ಇದನ್ನೂ ಓದಿ: ಪ್ರಯಾಣಿಕರಿಂದ ದುಪ್ಪಟ್ಟು ಟಿಕೆಟ್ ದರ ವಸೂಲಿ ಮಾಡುತ್ತಿರುವ ಖಾಸಗಿ ಬಸ್ಗಳು : ಆರ್ಟಿಒ ದಾಳಿ