ETV Bharat / state

ಬಳ್ಳಾರಿ: ಕ್ರಿಕೆಟ್ ಆಡುವ ಸ್ಥಳೀಯ ಯುವಕರ ಕಿರಿಕ್​, ಬುದ್ಧಿವಾದ ಹೇಳಿ ಮನೆಗೆ ಕಳಿಸಿದ ಪೊಲೀಸರು - cricket

ಗಣಿನಾಡು ಬಳ್ಳಾರಿ‌ ನಗರದ ರೇಡಿಯೋ ಪಾರ್ಕ್ ಸರ್ಕಾರಿ ಐಟಿಐ ಕಾಲೇಜು ಮುಂಭಾಗದಲ್ಲಿ ಕ್ರಿಕೆಟ್​​ ಆಡಲು ಬಂದಿದ್ದ ಯುವಕರು ಆಟ ಮುಗಿಸಿದ ನಂತರ ಕಿರಿಕ್​​ ಮಾಡಿಕೊಂಡಿರುವ ಘಟನೆ ನಡೆದಿದೆ.

local cricket playing boys fights
ಕ್ರಿಕೆಟ್ ಆಡುವ ಸ್ಥಳೀಯ ಯುವಕರಿಂದ ಗಲಾಟೆ
author img

By

Published : Aug 23, 2020, 10:44 PM IST

ಬಳ್ಳಾರಿ‌: ನಗರದ ರೇಡಿಯೋ ಪಾರ್ಕ್ ಸರ್ಕಾರಿ ಐಟಿಐ ಕಾಲೇಜು ಮುಂಭಾಗದಲ್ಲಿ ಇಂದು ಸಂಜೆ ಕ್ರಿಕೆಟ್ ಆಟವಾಡಿದ ನಂತರ 50 ಕ್ಕಿಂತ ಹೆಚ್ಚಿನ ಯುವಕರನ್ನೊಳಗೊಂಡ ಗುಂಪು ಜಗಳ ಮಾಡಿಕೊಂಡಿದೆ.

ಕೆಲ ಯುವಕರ ಕುಡಿತ ಹಾಗೂ ಕ್ರಿಕೆಟ್ ಬೆಟ್ಟಿಂಗ್ಈ ಜಗಳಕ್ಕೆ ಕಾರಣ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಕೊರೊನಾ ವೈರಸ್ ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ದಿನೇ ದಿನೆ ಹೆಚ್ಚಾಗುತ್ತಿದೆ. ಆದರೆ ಪ್ರತಿನಿತ್ಯ ನೂರಾರು ಯುವಕರು ಈ ಕಾಲೇಜು ಆವರಣದಲ್ಲಿ ಬೆಳಗ್ಗೆ, ಸಂಜೆ ಕ್ರಿಕೆಟ್ ಆಟವಾಡಲು ಸೇರಿರುತ್ತಾರೆ. ಇವರಿಗೆ ಯಾರೂ ಹೇಳೋರು​ ಇಲ್ಲ. ಇಲ್ಲಿಯ ಯುವಕರಿಗೆ ಪೊಲೀಸರ ಭಯವಿಲ್ಲದಂತಾಗಿದೆ ಎನ್ನುತ್ತಾರೆ ಸ್ಥಳೀಯ ಜನರು.

ಈ ಸಮಯದಲ್ಲಿ ನಗರದ ಕೌಲ್ ಬಜಾರ್ ಠಾಣೆಯ ಪೊಲೀಸರು ಆಗಮಿಸಿ ಗಲಾಟೆ ಮಾಡುತ್ತಿದ್ದ ಯುವಕರಿಗೆ ಬುದ್ಧಿವಾದ ಹೇಳಿ ಮನೆಗೆ ಕಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.