ETV Bharat / state

ಎಲ್ಎಲ್​​ಸಿ ಮಣ್ಣಿನ ತಡೆಗೋಡೆ ಕುಸಿತ: ರೈತರಿಗೆ ಎದುರಾದ ಸಂಕಷ್ಟ

ಕಾಲುವೆ ನಿರ್ಮಾಣ ಹಂತದಲ್ಲಿ ಲಾರಿ ಓಡಾಟಕ್ಕೆ ಮಣ್ಣನ್ನು ಅಗೆಯಲಾಗಿದ್ದು, ಇದರಿಂದ ಕಾಲುವೆ ದಂಡೆಯಲ್ಲಿ ಮಣ್ಣಿನ ಸವಕಳಿ ಹೆಚ್ಚಾದ ಪರಿಣಾಮ ರಸ್ತೆ ಸಂಪೂರ್ಣ ಕುಸಿಯುವ ಹಂತಕ್ಕೆ ಬಂದು ತಲುಪಿದೆ.

LLC soil retaining wall collapse in Hosapete
ಎಲ್ಎಲ್​​ಸಿ ಮಣ್ಣಿನ ತಡೆಗೋಡೆ ಕುಸಿತ
author img

By

Published : Jun 29, 2021, 10:26 AM IST

ಹೊಸಪೇಟೆ(ವಿಜಯನಗರ): ತಾಲೂಕಿನ ನಾಗೇನ‌ಹಳ್ಳಿಯ ಎಲ್‌ಎಲ್‌ಸಿ ಕಾಲುವೆ ಸಿಮೆಂಟ್ ಗೋಡೆ ಇಲ್ಲದಿರುವುದರಿಂದ ಮಣ್ಣಿನ ಸವಕಳಿ ಹೆಚ್ಚಾಗಿದ್ದು, ಅಪಾಯಕ್ಕೆ ಆಹ್ವಾನ ನೀಡಿದಂತಾಗಿದೆ. ಕಾಲುವೆ ಸುಮಾರು 200 ಮೀಟರ್‌ನಷ್ಟು ಸವಕಳಿಯಾಗಿದ್ದು, ರಸ್ತೆ ಬಿರುಕು ಬಿಡುವಂತ ಸ್ಥಿತಿ ನಿರ್ಮಾಣವಾಗಿದೆ.

ಅಪಾಯದ ಮುನ್ಸೂಚನೆ: ಈಗಾಗಲೇ ಕಾಲುವೆಯ ಪಕ್ಕದಲ್ಲಿ ರಸ್ತೆ ಎರಡು ಭಾಗದಲ್ಲಿ ನೀರಿನ ರಭಸಕ್ಕೆ ಮಣ್ಣು ಕೊರೆದುಕೊಂಡು ಹೋಗಿದೆ. ಈಗ ಮಳೆಗಾಲ ಪ್ರಾರಂಭವಾಗಿದ್ದು, ಭಾರೀ ಮಳೆ ಬಂದರೆ ರಸ್ತೆ ಸಂಪೂರ್ಣವಾಗಿ ಕುಸಿಯಲಿದೆ. ರೈತರು ಓಡಾಟ ಸಂದರ್ಭದಲ್ಲಿ ಮಣ್ಣು ಕುಸಿದರೆ ಅಪಾಯವಾಗಲಿದೆ.

ಎಲ್ಎಲ್​​ಸಿ ಮಣ್ಣಿನ ತಡೆಗೋಡೆ ಕುಸಿತ

ಕಬ್ಬಿನ ಗಾಣಗಳಿಗೆ ಹೋಗುವುದಕ್ಕೆ ತೊಂದರೆ: ಈ ಕಾಲುವೆ ಮಾರ್ಗವಾಗಿ ಕಬ್ಬಿಣಗಾಣಗಳಿಗೆ ರೈತರು ಎತ್ತಿನ ಬಂಡಿಗಳ‌ಲ್ಲಿ ತೆರಳುತ್ತಾರೆ. ತಾಲೂಕಿನ ಕೊಂಡನಾಯಕಹಳ್ಳಿ, ಅನಂತಶಯಗುಡಿ, ಮಲಪನಗುಡಿ, ಬೆಣಕಾಪುರ ತಾಂಡ, ಕೊಂಡನಾಯಕಹಳ್ಳಿ ತಾಂಡದ ನೂರಾರು ರೈತರು ಸಂಚರಿಸುತ್ತಾರೆ. ಹಾಗಾಗಿ ಕೂಡಲೇ ತುಂಗಭದ್ರಾ ಮಂಡಳಿ ರಸ್ತೆಯನ್ನು ದುರಸ್ತಿ ಮಾಡಬೇಕು ಎನ್ನುವುದು ರೈತರ ಒತ್ತಾಸೆ.

ವಾಲ್ ನಿರ್ಮಿಸಲು ಆಗ್ರಹ: ಕಾಲುವೆಯಲ್ಲಿ 200 ಮೀಟರ್‌ನಷ್ಟು ಮಣ್ಣಿನ ದಂಡೆ ಇದೆ. ಇದು ನೀರಿನ ರಭಸಕ್ಕೆ ಕುಸಿಯುತ್ತಿದೆ. ಹೀಗಾಗಿ ಸಿಮೆಂಟ್ ವಾಲ್ ನಿರ್ಮಿಸಿದರೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ.

ನಾಲ್ಕು ವರ್ಷದಿಂದ ಕಾಲುವೆ ನಿರ್ಮಾಣಕ್ಕಾಗಿ ಲಾರಿ ಓಡಾಟಕ್ಕೆ ರಸ್ತೆಯನ್ನು ನಿರ್ಮಿಸಲಾಗಿತ್ತು. ಬಳಿಕ ಸಿಮೆಂಟ್ ವಾಲ್ ನಿರ್ಮಿಸಲಿಲ್ಲ. ಇದರಿಂದ ಮಣ್ಣಿನ ಸವಕಳಿಯಿಂದ ರಸ್ತೆ ಹಾಳಾಗುವ ಸಂಭವವಿದೆ. ಕೂಡಲೇ ತುಂಗಭದ್ರಾ ಆಡಳಿತ ಮಂಡಳಿಯ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಈ ಬಗ್ಗೆ ಗ್ರಾಮ‌ ಪಂಚಾಯಿತಿ ಸದಸ್ಯ ಶಂಕ್ರಪ್ಪ ಮಾತನಾಡಿ, ಎತ್ತಿನ ಬಂಡಿ ಹಾಗೂ ಟ್ರ್ಯಾಕ್ಟರ್ ಓಡಾಟದಿಂದ ರಸ್ತೆಯ ಮಣ್ಣು ಕುಸಿಯುತ್ತಿದೆ. ಅಲ್ಲದೇ, ಕಾಲುವೆಯಲ್ಲಿ ನೀರು ಬಿಟ್ಟರೇ ಮಣ್ಣು ಕೊಚ್ಚಿಕೊಂಡು ಹೋಗಲಿದೆ. ಇದನ್ನು ತಪ್ಪಿಸಲು ವಾಲ್ ನಿರ್ಮಿಸಬೇಕು ಎಂದರು.

ಇದನ್ನೂ ಓದಿ: ಖಾಲಿ ಚೀಲ ಹೊಲಿಯುತ್ತಿದ್ದವರಿಂದ ವೈದ್ಯಕೀಯ ವಸ್ತುಗಳ ತಯಾರಿ: ಕಾಯಕದಲ್ಲಿ ಯಶ ಕಂಡ ಬೆಣ್ಣೆನಗರಿ ಮಹಿಳೆಯರು

ತುಂಗಭದ್ರಾ ಆಡಳಿತ ಮಂಡಳಿಯ ವಿಜಲನ್ಸ್ ನ ಕಾರ್ಯನಿರ್ವಾಹಕ ಇಂಜಿನಿಯರ್ ಶ್ರೀನಿವಾಸ ರೆಡ್ಡಿ ಮಾತನಾಡಿ, ನಾಗೇನಹಳ್ಳಿಯಲ್ಲಿ 9\4 ಎಲ್ ಎಲ್ ಎಲ್ ಸಿ ಕಾಲುವೆ ಸಮಸ್ಯೆ ಕುರಿತು ಪರಿಶೀಲಸಲಾಗುವುದು. ಈ ಕುರಿತು ತುಂಗಭದ್ರಾ ಆಡಳಿತ ಮಂಡಳಿ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.