ಬಳ್ಳಾರಿ: ವಿಜಯನಗರ ಜಿಲ್ಲೆಗೆ ಕೂಡ್ಲಿಗಿ ತಾಲೂಕನ್ನೂ ಸೇರಿಸುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದು, ವಿಜಯನಗರಕ್ಕೆ ಕೂಡ್ಲಿಗಿ ಸೇರಿಸಿ ಎಂದು ಒತ್ತಾಯಿಸಿ ಪತ್ರ ಚಳವಳಿ ನಡೆಸಿದ್ದಾರೆ.
ಕೊಟ್ರೇಶ್ ಎಂಬುವರು ಅಂಚೆ ಮೂಲಕ ಸಿಎಂಗೆ ಪತ್ರ ಬರೆದು ಒತ್ತಾಯಿಸಿದ್ದಾರೆ. ಇಂದು ಸಹ ನೂರಾರು ಜನರಿಂದ ಸಿಎಂಗೆ ಪತ್ರ ರವಾನೆಯಾಗಿದೆ. ಕೂಡ್ಲಿಗಿ ಹಾಗೂ ಹೊಸಪೇಟೆಗೆ ಕೇವಲ 45 ಕಿ ಮೀ ದೂರವಿದೆ. ಕೂಡ್ಲಿಗಿಯಿಂದ ಬಳ್ಳಾರಿಗೆ 80 ಕಿ.ಮೀ ಇದೆ. ಇನ್ನು, ಕೂಡ್ಲಿಗಿಯ ಕೊನೆ ಭಾಗದ ಹಳ್ಳಿಯಿಂದ ಬಳ್ಳಾರಿಗೆ 130 ಕಿ.ಮೀ ಇದೆ. ಹೀಗಾಗಿ ಭೌಗೋಳಿಕವಾಗಿ ಹಾಹೂ ಅಗತ್ಯ ಸೌಲಭ್ಯ ಪಡೆಯಲು ಹತ್ತಿರದ ಜಿಲ್ಲಾ ಕೇಂದ್ರಕ್ಕೆ ಸೇರಿಸಿ ಎಂದು ಪತ್ರದಲ್ಲಿ ಸಿಎಂಗೆ ಮನವಿ ಮಾಡಿದ್ದಾರೆ.
ನಿನ್ನೆ ಶಾಸಕ ಎನ್ ವೈ ಗೋಪಾಲಕೃಷ್ಣರನ್ನ ಭೇಟಿ ಮಾಡಿ ಕೂಡ್ಲಿಗಿ ಸೇರಿಸಲು ಸ್ಥಳೀಯರು ಒತ್ತಾಯಿಸಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ ಕೂಡ್ಲಿಗಿ ಶಾಸಕ ಗೋಪಾಲಕೃಷ್ಣ ಅವರು, ಈ ಬಗ್ಗೆ ಸಿಎಂ ಬಳಿ ಮಾತನಾಡುವೆ ಎಂದಿದ್ದಾರೆ.