ETV Bharat / state

ದೊಡ್ಡಬಳ್ಳಾಪುರ: ಸಚಿವ ಮಾಧುಸ್ವಾಮಿ ರಾಜೀನಾಮೆಗೆ ಕುರುಬರ ಸಂಘ ಒತ್ತಾಯ

ಸಚಿವ ಮಾಧುಸ್ವಾಮಿ ರಾಜೀನಾಮೆಗೆ ಒತ್ತಾಯಿಸಿ ಕುರುಬರ ಸಂಘದ ಕಾರ್ಯಕರ್ತರು ದೊಡ್ಡಬಳ್ಳಾಪುರ ಹಾಗೂ ಹೊಸಪೇಟೆಯಲ್ಲಿ ಒತ್ತಾಯಿಸಿದರು.

protest , ಪ್ರತಿಭಟನೆ
author img

By

Published : Nov 21, 2019, 6:21 PM IST

ದೊಡ್ಡಬಳ್ಳಾಪುರ/ಹೊಸಪೇಟೆ: ಕನಕಪೀಠದ ಈಶ್ವರಾನಂದಪುರ ಸ್ವಾಮೀಜಿ ಅವರ ನಿಂದನೆ ಆರೋಪ ಹೊತ್ತಿರುವ ಸಚಿವ ಮಾಧುಸ್ವಾಮಿ ಅವರು ರಾಜೀನಾಮೆ ನೀಡಬೇಕೆಂದು ಬೆಂಗಳೂರು ಗ್ರಾಮಾಂತರ ಕುರುಬರ ಸಂಘ ಮತ್ತು ದೊಡ್ಡಬಳ್ಳಾಪುರ ತಾಲೂಕು ಕುರುಬರ ಸಂಘ ಪಟ್ಟು ಹಿಡಿದಿದೆ.

ಸಚಿವ ಮಾಧುಸ್ವಾಮಿ ರಾಜೀನಾಮೆಗೆ ಕುರುಬರ ಸಂಘ ಒತ್ತಾಯ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತಾಲೂಕು ಕುರುಬರ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ, ಸಚಿವರ ಒರಟು ಮಾತು ಕುರುಬ ಸಮುದಾಯದ ವಿರೋಧಕ್ಕೆ ಕಾರಣವಾಗಿದ್ದು, ತಪ್ಪು ಒಪ್ಪಿಕೊಂಡು ಸ್ವಾಮೀಜಿಯವರ ಬಳಿ ಕ್ಷಮೆ ಕೇಳಬೇಕು. ರಾಜ್ಯದ ಮುಖ್ಯಮಂತ್ರಿ ಕ್ಷಮೆ ಯಾಚಿಸಿದ್ದಾರೆ. ಆದರೆ ಸಚಿವರು ದರ್ಪದ ಮಾತುಗಳನ್ನಾಡಿದ್ದಾರೆ. ಸಚಿವರು ರಾಜೀನಾಮೆ ಕೊಡಬೇಕು. ಇಲ್ಲವಾದ್ದಲ್ಲಿ ರಾಜ್ಯ ಕುರುಬರ ಸಂಘದ ಜೊತೆ ಕುರುಬ ಸಮುದಾಯ ಉಗ್ರ ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದರು.

ಹೊಸಪೇಟೆಯಲ್ಲಿ ಪ್ರತಿಭಟನೆ : ಸಚಿವ ಮಾಧುಸ್ವಾಮಿ ಕ್ಷಮೆಯಾಚನೆಗೆ ಆಗ್ರಹಿಸಿ ಹೊಸಪೇಟೆಯಲ್ಲಿ ಕುರುಬ ಸಮಾಜದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ನಗರದ ರೋಟರಿ ವೃತ್ತದಲ್ಲಿ ಜಮಾಯಿಸಿದ ಕುರುಬ ಸಮಾಜದ ಕಾರ್ಯಕರ್ತರು ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಕುರುಬ ಸಮಾಜದ ಹಿರಿಯ ಮುಖಂಡ ಆರ್ .ಕೊಟ್ರೇಶ್, ಕನಕದಾಸರ ನಾಮಫಲಕವನ್ನು ತೆರವುಗೊಳಿಸಿ ಸಚಿವರು ಅಪಮಾನ ಮಾಡಿದ್ದಾರೆ. ಅವರು ಸಮಾಜಕ್ಕೆ ಕ್ಷೇಮೆ ಕೇಳಬೇಕು. ಕನಕದಾಸರ ಬಗ್ಗೆ ಸಚಿವರು ತಿಳಿದುಕೊಳ್ಳಬೇಕಿದೆ. ಅವರು ತಪ್ಪನ್ನು ಒಪ್ಪಿಕೊಳ್ಳದಿದ್ದರೆ ರಾಜ್ಯದಲ್ಲಿ ಹಾಲುಮತ ಹಾಗೂ ಕುರುಬ ಸಮಾಜವು ಉಗ್ರವಾದ ಹೋರಾಟವನ್ನು ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

Intro:ಸಚಿವ ಮಾಧುಸ್ವಾಮಿ ರಾಜೀನಾಮೆಗೆ ಕುರುಬರ ಸಂಘ ಒತ್ತಾಯ

Body:ಸಚಿವ ಮಾಧುಸ್ವಾಮಿ ರಾಜೀನಾಮೆಗೆ ಕುರುಬರ ಸಂಘ ಒತ್ತಾಯ

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.