ETV Bharat / state

ಹಿತ್ತಲಲ್ಲಿ ಬೆಳೆದಿದ್ದ 16 ಕೆ.ಜಿ ಗಾಂಜಾ ವಶಪಡಿಸಿಕೊಂಡ ಕೂಡ್ಲಿಗಿ ಪೊಲೀಸರು - ಗಾಂಜಾ ಬೆಳೆ

ಕೂಡ್ಲಿಗಿ ಪೊಲೀಸರು ದಾಳಿ ನಡೆಸಿ ಮನೆಯ ಹಿತ್ತಲಲ್ಲಿ ಬೆಳೆದಿದ್ದ 16 ಕೆ.ಜಿ  ಗಾಂಜಾ ವನ್ನು ವಶಪಡಿಸಿಕೊಂಡಿದ್ದಾರೆ.

Marijuana
Marijuana
author img

By

Published : Sep 10, 2020, 2:41 PM IST

ಬಳ್ಳಾರಿ: ಜಿಲ್ಲೆಯ ಸಂಡೂರು ತಾಲೂಕಿನ ಮರ್ತಾಜನ ಹಳ್ಳಿ ಮನೆಯೊಂದರ ಹಿತ್ತಲಲ್ಲಿ ಅಕ್ರಮವಾಗಿ ಬೆಳೆದಿದ್ದ ಗಾಂಜಾ ಬೆಳೆಯನ್ನು ಕೂಡ್ಲಿಗಿ ಪೊಲೀಸರು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಮರ್ತಾಜನ ಹಳ್ಳಿಯ ನಿವಾಸಿ ಪಾಪಯ್ಯ ಎಂಬುವರ ಮನೆ ಹಿತ್ತಲಲ್ಲಿ ಅಕ್ರಮವಾಗಿ ಸರಿ ಸುಮಾರು 16 ಕೆ.ಜಿ ಯಷ್ಟು ಗಾಂಜಾವನ್ನು ಬೆಳೆದಿದ್ದರು. ಈ ಕುರಿತು ಮಾಹಿತಿ ಪಡೆದ ಪೊಲೀಸರು ಡಿ ಎಸ್ ಪಿ ಹರೀಶ್ ನೇತ್ರತ್ವದಲ್ಲಿ ದಾಳಿ ನಡೆಸಿ, ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ.

ಇನ್ನು ಮನೆಯ ಮಾಲೀಕ ಪಾಪಯ್ಯ ತಲೆ‌ಮರೆಸಿಕೊಂಡಿದ್ದು, ಆತನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಈ ಕುರಿತು ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.