ಬಳ್ಳಾರಿ: ಧರ್ಮಸ್ಥಳದಿಂದ ರಾತ್ರಿ ಬಸ್ ಹತ್ತಿದ್ದ ಪ್ರಯಾಣಿಕ ಹೋಗಬೇಕಾಗಿದ್ದು ಹೊಸಪೇಟೆಗೆ. ಆದರೆ, ಬೆಳಗ್ಗೆ ಬಸ್ ಇಳಿದು ನೋಡಿದರೆ ಆತ ಬಳ್ಳಾರಿಯಲ್ಲಿದ್ದ!. ಈ ಬಗ್ಗೆ ಖಾಸಗಿ ಬಸ್ ಮಾಲೀಕರನ್ನು ಕೇಳಿದರೆ ಸರಿಯಾದ ಉತ್ತರ ನೀಡುತ್ತಿಲ್ಲವಂತೆ.
ಬೆಂಗಳೂರು, ಬಳ್ಳಾರಿ ಅಥವಾ ಹೊಸಪೇಟೆಗೆ ಬಸ್ ಚಾರ್ಜ್ 500 ರೂ. ಇದೆ. ಖಾಸಗಿ ಬಸ್‌ನವರು 1,500, 2,000 ಹೀಗೆ ಮನಸೋಇಚ್ಛೆ ಹಣ ವಸೂಲಿ ಮಾಡುತ್ತಿದ್ದಾರೆ ಎನ್ನುವ ಆರೋಪವಿದೆ. ಹೆಚ್ಚುವರಿ ಹಣ ಕೊಟ್ಟರೂ ನಮ್ಮನ್ನು ಊರಿಗೆ ತಲುಪಿಸುತ್ತಾರೆ ಅನ್ನೋ ಭರವಸೆಯೇ ಇಲ್ಲ. ಏಕೆಂದರೆ ಧರ್ಮಸ್ಥಳದಿಂದ, ಹೊಸಪೇಟೆಗೆ ಬಸ್ ಹೋಗುತ್ತೆ ಎಂದು ಹತ್ತಿಸಿಕೊಂಡು ಬಳ್ಳಾರಿಗೆ ತಂದು ಬಿಟ್ಟಿದ್ದಾರೆ ಎಂದು ಪ್ರಯಾಣಿಕರೊಬ್ಬರು ಅಳಲು ತೋಡಿಕೊಂಡರು.
ನಗರದ ಹೊಸ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್‌ಗಳ ಮಾಲೀಕರು ಆಡಿದ್ದೇ ಆಟ ಎನ್ನುವಂತಾಗಿದೆ. ಸಾರಿಗೆ ಮುಷ್ಕರವನ್ನೇ ಸ್ವಾರ್ಥಕ್ಕೆ ಬಳಸಿಕೊಂಡ ಖಾಸಗಿ ಬಸ್‌ನವರು, ಜನರ ಹಾದಿ ತಪ್ಪಿಸುತ್ತಿದ್ದಾರೆ. ಅವರು ನೇರವಾಗಿ ವಸೂಲಿ ದಂಧೆಗಿಳಿದಿದ್ದಾರೆ. ಆರ್.ಟಿ.ಒ ಅಧಿಕಾರಿಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಪ್ರಶ್ನಿಸುತ್ತಿಲ್ಲ ಅನ್ನೋದು ಸಾರ್ವಜನಿಕರ ಆರೋಪ.
ಇದನ್ನೂ ಓದಿ: ಸರ್ಕಾರಿ ನೌಕರರಿಗೂ ಸಾರಿಗೆ ನೌಕರರಿಗೂ ಸಿಗುವ ವೇತನ, ಭತ್ಯೆ, ಸೌಲಭ್ಯಗಳ ವ್ಯತ್ಯಾಸವೇನು?ಸಂಪೂರ್ಣ ವಿವರ