ETV Bharat / state

ಲಾರಿಗೆ ಡಿಕ್ಕಿ ಹೊಡೆದ ಬಸ್: ಕಂಡಕ್ಟರ್ ಹೊಟ್ಟೆಗೆ ಹೊಕ್ಕಿದ ಕಬ್ಬಿಣದ ರಾಡುಗಳು! - KSRTC Bus Conductor

ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ಪಟ್ಟಣ ಹೊರವಲಯದ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ನಿಂತಿದ್ದ ಲಾರಿಯೊಂದಕ್ಕೆ ಕೆಎಸ್ಆರ್​ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಬಸ್ ಕಂಡಕ್ಟರ್ ಹೊಟ್ಟೆಗೆ ಕಬ್ಬಿಣದ ರಾಡುಗಳು ಹೊಕ್ಕಿರುವ ಘಟನೆ ನಡೆದಿದೆ.

KSRTC bus hit lorry: iron rods stuck to conductor abdomen
ಲಾರಿಗೆ ಡಿಕ್ಕಿ ಹೊಡೆದ ಕೆಎಸ್ಆರ್​ಟಿಸಿ ಬಸ್: ಕಂಡಕ್ಟರ್ ಹೊಟ್ಟೆಗೆ ಹೊಕ್ಕಿದ ಕಬ್ಬಿಣದ ರಾಡುಗಳು..!
author img

By

Published : Aug 26, 2020, 10:08 AM IST

ಬಳ್ಳಾರಿ: ಜಿಲ್ಲೆಯ ಕೂಡ್ಲಿಗಿ ಪಟ್ಟಣ ಹೊರವಲಯದ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ನಿಂತಿದ್ದ ಲಾರಿಯೊಂದಕ್ಕೆ ಕೆಎಸ್ಆರ್​ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಬಸ್ ಕಂಡಕ್ಟರ್ ಹೊಟ್ಟೆಗೆ ಕಬ್ಬಿಣದ ರಾಡುಗಳು ಹೊಕ್ಕಿರುವ ಘಟನೆ ನಡೆದಿದೆ.

ಲಾರಿಗೆ ಡಿಕ್ಕಿ ಹೊಡೆದ ಕೆಎಸ್ಆರ್​ಟಿಸಿ ಬಸ್: ಕಂಡಕ್ಟರ್ ಹೊಟ್ಟೆಗೆ ಹೊಕ್ಕಿದ ಕಬ್ಬಿಣದ ರಾಡುಗಳು!

ಕಬ್ಬಿಣದ ರಾಡು ತುಂಬಿದ್ದ ಲಾರಿಗೆ ಬಸ್ ಡಿಕ್ಕಿ ಹೊಡೆದ ಹಿನ್ನೆಲೆ ಬಸ್​​ನ ಎಡ ಭಾಗದಲ್ಲಿ ಕುಳಿತಿದ್ದ ಕಂಡಕ್ಟರ್ ಹೊಟ್ಟೆಗೆ ರಾಡುಗಳು ಚುಚ್ಚಿವೆ. ಕೂಡಲೇ ಸ್ಥಳಕ್ಕಾಗಮಿಸಿದ ಸ್ಥಳೀಯರು ಕಂಡಕ್ಟರ್​ಗೆ ಚುಚ್ಚಿದ್ದ ರಾಡುಗಳನ್ನ ಹೊರ ತೆಗೆದಿದ್ದಾರೆ. ಬಳಿಕ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಸದ್ಯ ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದು ಬಂದಿದೆ. ಈ ಕುರಿತು ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.