ETV Bharat / state

ಹೊಸಪೇಟೆ: ಜನರ ಕನಸಿನ ಮನೆಗೆ ಗೃಹ ಮಂಡಳಿ ಎಳ್ಳುನೀರು

ಕರ್ನಾಟಕ ಗೃಹ ಮಂಡಳಿ ಬಡಜನರಿಂದ ಹಣವನ್ನು ನಿವೇಶಕ್ಕಾಗಿ ಪಾವತಿಸಿಕೊಂಡು ಸುಮ್ಮನಾಗಿದೆ. ಜನರು ಪಾವತಿಸಿರುವ ದುಡ್ಡಿಗೆ ನ್ಯಾಯ ಸಿಗದಂತಾಗಿದೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಜನರ ಕನಸಿನ ಮನೆಯೊಂದಿಗೆ ಚೆಲ್ಲಾಟ ಆಡುತ್ತಿದ್ದಾರೆ.‌

Karnataka Home Board
ಕರ್ನಾಟಕ ಗೃಹ ಮಂಡಳಿ
author img

By

Published : Sep 7, 2020, 3:24 PM IST

ಹೊಸಪೇಟೆ: ಬಡಜನರ ಕನಸಿನ ಮನೆಯೊಂದಿಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಚೆಲ್ಲಾಟ ಆಡುತ್ತಿದ್ದಾರೆ.‌ ಜನರ ದುಡ್ಡಿಗೆ ನ್ಯಾಯ ಸಿಗದಂತಾಗಿದೆ.

ಹಣ ಪಾವತಿಸಿಕೊಂಡು ಸುಮ್ಮನಾದ ಕರ್ನಾಟಕ ಗೃಹ ಮಂಡಳಿ

ಹೊಸಪೇಟೆಯಲ್ಲಿ ನಿವೇಶನಕ್ಕಾಗಿ 975 ಜನರು ಕರ್ನಾಟಕ ಗೃಹ ಮಂಡಳಿಗೆ 2019ರ ಆಗಸ್ಟ್​​ನಲ್ಲಿ ಹಣವನ್ನು ಪಾವತಿಸಿದ್ದಾರೆ. ಒಂದು ವರ್ಷ ಕಳೆದರೂ ಜನರಿಗೆ ನಿವೇಶನದ ಕುರಿತು ಸ್ಪಷ್ಟತೆ ಸಿಗದೇ ಅಡಕತ್ತರಿಯಲ್ಲಿ ಸಿಲುಕಿಕೊಂಡಿದ್ದಾರೆ. ಕೇಂದ್ರ ಸರಕಾರದ ವ್ಯಾಪ್ತಿಯಲ್ಲಿದ್ದ ನಗರದ ತುಂಗಭದ್ರಾ ಸ್ಟೀಲ್ ಪ್ರಾಡಕ್ಟ್​ ಕಾರ್ಖಾನೆ ಮುಚ್ಚಲ್ಪಟ್ಟಿತ್ತು. ಬಳಿಕ 2019 ಜನವರಿ ತಿಂಗಳಿನಲ್ಲಿ ಕರ್ನಾಟಕ ಗೃಹ ಮಂಡಳಿಗೆ 82.37 ಎಕರೆ ಪ್ರದೇಶವನ್ನು 55.22 ಕೋಟಿ ರೂಪಾಯಿಗೆ ಪರಭಾರೆಯನ್ನು ಮಾಡಲಾಗಿತ್ತು. ಕರ್ನಾಟಕ ಗೃಹ ಮಂಡಳಿ ಈ ಪ್ರದೇಶವನ್ನು ಸುಪರ್ದಿಗೆ ಪಡೆದುಕೊಂಡು ಆಗಸ್ಟ್ ತಿಂಗಳಿನಲ್ಲಿ ನೋಟಿಫಿಕೇಶನ್ ಹೊರಡಿಸಿತ್ತು. ಆಗ ಗೃಹ ಮಂಡಳಿಗೆ 975 ಜನರು ಹಣವನ್ನು ಪಾವತಿಸಿದ್ದರು.

ಮಾತು ಮರೆತ ಸಚಿವ: ಕೆಳ ತಿಂಗಳ ಹಿಂದೆ ಹೊಸಪೇಟೆಯ ಕರ್ನಾಟಕ ಗೃಹ ಮಂಡಳಿಯ ಪ್ರದೇಶಕ್ಕೆ ವಸತಿ ಸಚಿವ ವಿ.ಸೋಮಣ್ಣ ಅವರು ಭೇಟಿ ನೀಡಿದ್ದರು. ಆಗ ಅರಣ್ಯ ಸಚಿವ ಆನಂದ ಸಿಂಗ್ ಅವರು ಜೊತೆಯಲ್ಲಿದ್ದರು. ಆ ಸಂದರ್ಭದಲ್ಲಿ ಜನರಿಗೆ ಇಗೀನ ಪ್ರದೇಶವನ್ನು ಸರಕಾರದ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗುವುದು. ಜನರಿಗೆ ಬೇರೆ ಸ್ಥಳದಲ್ಲಿ ನಿವೇಶನ ಹಂಚಿಕೆ‌ ಮಾಡಲಾಗುವುದು. ‌ಅಲ್ಲದೇ, ಜನರ ಹಣಕ್ಕೆ ಬಡ್ಡಿ ಹಾಕಿ‌ ಕೊಡಲಾಗುವುದುವ ಭರವಸೆ ‌ನೀಡಿದ್ದರು. ಆದರೆ ಸಚಿವರು ಆಡಿದ ಮಾತು ಮಾತಾಗಿಯೇ ಉಳಿದಿದೆ.‌ ಜನರಿಗೆ ನೀಡಿದ ಭರವಸೆಗಳ ಕಡತಗಳಲ್ಲಿ ಕಾಣಸಿಗುತ್ತಿಲ್ಲ.

ಸಮರ್ಪಕ ಉತ್ತರವಿಲ್ಲ: ಜನರು ಗೃಹ ಮಂಡಳಿಯ ಅಧಿಕಾರಿ ನಿವೇಶನ ಕುರಿತು ಕೇಳಿದರೆ, ಹಾರಿಕೆಯ ಉತ್ತರ ಬರುತ್ತಿದೆ.‌ ಬೆಂಗಳೂರಿನ ಸಭೆ ನಡೆಯಬೇಕು. ಬಳಿಕ‌ ನಿವೇಶನ ಕುರಿತು ಸ್ಪಷ್ಟ ಮಾಹಿತಿ ಸಿಗಲಿದೆ ಎಂದು ಹೆಸರು ಹೇಳಲು ಇಚ್ಛಿಸದ ನಿವೇಶನಕ್ಕಾಗಿ ಹಣ ಪಾವತಿಸಿದವರು ತಿಳಿಸಿದರು.

ಜಿಲ್ಲೆಗಾಗಿ ಸ್ಥಳ ಮೀಸಲು: ಈ ಹಿಂದೆ ಆನಂದ ಸಿಂಗ್ ಅವರು ಹೊಸಪೇಟೆಯನ್ನು ವಿಜಯನಗರ ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕು ಎಂದು ಉದ್ದೇಶ ಹೊಂದಿದ್ದರು. ಜಿಲ್ಲೆ ಘೋಷಣೆ ನಂತರ ನಗರದಲ್ಲಿ ಗೃಹ ಮಂಡಳಿಯ ಸ್ಥಳವನ್ನು ಬಳಸಿಕೊಳ್ಳುವ ಉದ್ದೇಶ ಅವರದಾಗಿತ್ತು.‌ ಹಾಗಾಗಿ ಜನರ ನಿವೇಶ ಹಂಚಿಕೆ ಮಾಡಲು ಆನಂದ ಸಿಂಗ್ ಅವರು ಮನಸ್ಸು ಮಾಡಲಿ ಎಂಬ ಮಾತುಗಳು ಕೇಳಿ ಬರುತ್ತಿವೆ.

ಸಂಘಟನೆಗಳು ಆಕ್ರೋಶ: ಜನರಿಂದ ಹಣವನ್ನು ಪಾವತಿಸಿಕೊಂಡು ನಿವೇಶವನ್ನು ಹಂಚಿಕೆ ಮಾಡದಿರುವುದು ಸರಿಯಲ್ಲ.‌ ಸಾಲ ಮಾಡಿಕೊಂಡು‌ ಜನರು ನಿವೇಶನದ ಅರ್ಹತೆಗಾಗಿ ಹಣವನ್ನು ಪಾವತಿಸಿದ್ದಾರೆ. ಆದರೆ, ಗೃಹ ಮಂಡಳಿಯ ನಿವೇಶನ ಹಂಚಿಕೆ‌‌ ಮಾಡದಿರುವುದು ನಿರ್ಲಕ್ಷ್ಯಕ್ಕೆ ಕೈಗನ್ನಡಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿವೆ.

ಈಟಿವಿ ಭಾರತದೊಂದಿಗೆ ಕರ್ನಾಟಕ ಗೃಹ ಮಂಡಳಿಯ ಕಾರ್ಯನಿರ್ವಾಹಕ ಇಂಜಿನಿಯರ್ ಲಕ್ಷ್ಮಿನಾರಾಯಣ ಸ್ವಾಮಿ ಅವರು ಮಾತನಾಡಿ, ನಿವೇಶನ ಹಂಚಿಕೆ ಮಾಡಲು ಸರಕಾರದಿಂದ ಅನುಮೋದನೆ ದೊರೆತ್ತಿಲ್ಲ. ನಿವೇಶನ ಲೇಔಟ್ ಗೆ ತಡೆ ಹಿಡಿಯಲಾಗಿದೆ ಎಂದು ತಿಳಿದಿದೆ.‌ ನಿವೇಶನ ಹಂಚಿಕೆ ಆಗಲಿದೆ. ಆದರೆ ತಡವಾಗಲಿದೆ ಎಂದರು.‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.