ಹೊಸಪೇಟೆ: ಕಳೆದ ಕೆಲವು ದಿನಗಳಿಂದ ಕಾಶ್ಮೀರದಲ್ಲಿ ಹಿಮಪಾತವಾಗುತ್ತಿದ್ದು, ರಸ್ತೆಗಳು ಹಿಮದಿಂದ ಆವೃತವಾಗಿವೆ. ಈ ಮಧ್ಯೆ ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದ ಕರ್ನಾಟಕದ ಹೊಸಪೇಟೆ ಹಾಗೂ ಹುಬ್ಬಳ್ಳಿ ಮೂಲದ ಕೆಲವರು ತಾವು ಉಳಿದುಕೊಂಡಿದ್ದ ಲಾಡ್ಜ್ನಲ್ಲೇ ಸಿಲುಕಿಕೊಂಡಿದ್ದು, ಮರಳಿ ಊರಿಗೆ ಬರಲಾರದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಧಿಕಾರಿಗಳು ಮಾತ್ರ ಇತ್ತ ಸುಳಿದಿಲ್ಲ ಎನ್ನಲಾಗುತ್ತಿದೆ.
ಓದಿ: ಇಬ್ಬರು ಸಶಸ್ತ್ರ ಪಡೆ ಪೊಲೀಸರ ಮೇಲೆ ಮಾರಣಾಂತಿಕ ಹಲ್ಲೆ
ಈ ಬಗ್ಗೆ ಮಾತನಾಡಿದ ಹೊಸಪೇಟೆ ನಿವಾಸಿ ಪ್ರಕಾಶ್ ಮೆಹರವಾಡೆ , ಕಳೆದ ಮೂರು ದಿನಗಳಿಂದ ಕರೆಂಟ್, ಆಕ್ಸಿಜನ್ ವ್ಯವಸ್ಥೆ ಇಲ್ಲದಂತಾಗಿದೆ. ಪ್ರಯಾಣಕ್ಕೆ ತಂದಿದ್ದ ವಾಹನಗಳ ಮೇಲೆ ಮತ್ತಷ್ಟು ಹಿಮಗಡ್ಡೆ ಬಿದ್ದಿದೆ. 2-3 ದಿನಗಳಿಂದ ಹಿಮಪಾತ ಕಡಿಮೆಯಾಗಿದೆ. ಆದರೂ ಇಂದಿಗೂ ಹಿಮವನ್ನು ತೆರವುಗೊಳಿಸಿಲ್ಲ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.