ETV Bharat / state

ರಾಜಭಾರತಿ ಸ್ವಾಮೀಜಿ ಭೇಟಿಯಾದ ಕಂಪ್ಲಿ ಶಾಸಕ ಗಣೇಶ ಕುಟುಂಬ!

ದೇವರಕೊಳ್ಳ ಗುಡ್ಡದ ‌ಅನ್ನಪೂರ್ಣೇಶ್ವರಿ ಮಠದ ದಿಗಂಬರ ರಾಜಭಾರತಿ ಸ್ವಾಮೀಜಿ ಅವರನ್ನ ಕಂಪ್ಲಿ ಶಾಸಕ ಗಣೇಶ ಹಾಗೂ ಕುಟುಂಬ ಸದಸ್ಯರು ಭೇಟಿಯಾಗಿ ಆರ್ಶೀವಾದ ಪಡೆದರು.

author img

By

Published : Apr 28, 2019, 4:46 PM IST

ದಿಗಂಬರ ರಾಜಭಾರತಿ ಸ್ವಾಮೀಜಿ

ಬಳ್ಳಾರಿ: ಸಂಡೂರು ತಾಲೂಕಿನ ದೇವರಕೊಳ್ಳ ಗುಡ್ಡದ ಮೇಲಿನ ಅನ್ನಪೂರ್ಣೇಶ್ವರಿ ಮಠದ ರಾಜಭಾರತಿ ಸ್ವಾಮೀಜಿಯವರನ್ನ ಶಾಸಕ‌ ಗಣೇಶ, ಪತ್ನಿ ಹಾಗೂ ಮಕ್ಕಳು ಭೇಟಿಯಾಗಿ ಆಶೀರ್ವಾದ ಪಡೆದರು.

ಶಾಸಕ ಗಣೇಶ ಮತ್ತು ಕುಟುಂಬ ಸದಸ್ಯರು ಸ್ವಾಮೀಜಿ ಎದುರು ಕುಳಿತಿದ್ದರು. ಈ ಮೊದಲು ಸಂಸಾರಸ್ಥರಾಗಿದ್ದ ರಾಜಭಾರತಿ ಸ್ವಾಮೀಜಿ, ತದನಂತರ ಸನ್ಯಾಸ ದೀಕ್ಷೆ ಪಡೆದಿದ್ದಾರೆ. ನಾಗಸಾಧುವಿನಂತೆ ಕಾಣುವ ಸ್ವಾಮೀಜಿಯವರನ್ನು ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್​, ಹಾಲಿ ಸಂಸದ ವಿ.ಎಸ್.ಉಗ್ರಪ್ಪ, ಬಿಜೆಪಿ ಅಭ್ಯರ್ಥಿ ವೈ.ದೇವೇಂದ್ರಪ್ಪ ಸೇರಿದಂತೆ ‌ಅನೇಕ ರಾಜಕಾರಣಿಗಳು, ಗಣ್ಯರು ಭೇಟಿಯಾಗಿ ದರ್ಶನ ಪಡೆದಿದ್ದಾರೆ.

kampli MLA Ganesh family met rajbharati swamiji
ರಾಜಭಾರತಿ ಸ್ವಾಮೀಜಿ ಭೇಟಿ

ಮೌನಾಚರಣೆ:

ವರ್ಷದ 6 ತಿಂಗಳ ಕಾಲ ಮೌನ ವೃತಾಚರಣೆ ಮಾಡುವ ಸ್ವಾಮೀಜಿ, ಮುಂದಿನ 6 ತಿಂಗಳ ಕಾಲ ಮಾತನಾಡುತ್ತಾರೆ. ಮೌನ ವೃತಾಚರಣೆಯಲ್ಲಿ ಇರುವಾಗ ಸ್ಲೇಟ್​ನಲ್ಲಿ ಬರೆದು ಉತ್ತರಿಸುತ್ತಾರೆ. ಇಲ್ಲಿಗೆ ಭೇಟಿಯಾದ ಬಳಿಕ ನನಗೆ ಅಲ್ಪಮಟ್ಟಿಗೆ ಸಮಾಧಾನ ತಂದಿದೆ. ಎಲ್ಲ ಸಂಕಷ್ಟದಿಂದ ಹೊರಬರುವ ಇಂಗಿತವನ್ನ ಶಾಸಕ ಗಣೇಶ ವ್ಯಕ್ತಪಡಿಸಿದರು.

Intro:ದೇವರಕೊಳ್ಳ ಗುಡ್ಡದಲ್ಲಿ ತಂಗಿದ ರಾಜಭಾರತಿ ಸ್ವಾಮೀಜಿಯವ್ರನ್ನ ಭೇಟಿಯಾದ ಕಂಪ್ಲಿ ಶಾಸಕ ಗಣೇಶ ಕುಟುಂಬ!
ಬಳ್ಳಾರಿ: ಜಿಲ್ಲೆಯ‌ ಸಂಡೂರು ತಾಲೂಕಿನ ಜೋಗ ಗ್ರಾಮದ
ಬಳಿಯಿರುವ ದೇವರಕೊಳ್ಳ ಗುಡ್ಡದ ‌ಅನ್ನಪೂರ್ಣೇಶ್ವರಿ ಮಠದ ದಿಗಂಬರ ರಾಜಭಾರತಿ ಸ್ವಾಮೀಜಿ ಅವರನ್ನ ಕಂಪ್ಲಿ ಶಾಸಕ ಗಣೇಶ ಹಾಗೂ ಕುಟುಂಬ ಸದಸ್ಯರು ಭೇಟಿಯಾಗಿ ಆರ್ಶೀವಾದ ಪಡೆದರು.
ದೇವರಕೊಳ್ಳ ಗುಡ್ಡದ ಮೇಲಿರುವ ಅನ್ನಪೂರ್ಣೇಶ್ವರಿ ಮಠದ ಮೆಟ್ಟಿಲುಗಳನ್ನ ಶಾಸಕ‌ ಗಣೇಶ, ಪತ್ನಿ ಹಾಗೂ ಮಕ್ಕಳು ಏರಿ ರಾಜಭಾರತಿ ಸ್ವಾಮೀಜಿಯವರನ್ನ ಭೇಟಿಯಾಗಿ ಅವರ ಕಾಲಿಗೆ ಎರಗಿ ನಮಸ್ಕರಿಸಿದರು.
ಉದ್ದನೆಯ ಬಿಳಿಗಡ್ಡ, ಮುಖ ಮತ್ತು ಹಣೆಗೆ ಭಸ್ಮಧಾರಣೆ ಹಾಗೂ ಮಡಿಯ ವಸ್ತ್ರವನ್ನ ಧರಿಸಿದ ಈ ರಾಜಭಾರತಿ ಸ್ವಾಮೀಜಿಯವರು ಶಾಸಕ ಗಣೇಶ ಹಾಗೂ ಅಭಿಮಾನಿಗಳ ಭುಜತಟ್ಟಿ ಆರ್ಶೀವಾದ ಮಾಡಿದರು. ಕೆಲಕಾಲ ಶಾಸಕ ಗಣೇಶ ಮತ್ತು ಕುಟುಂಬ ಸದಸ್ಯರು ಸ್ವಾಮೀಜಿ ಎದುರು ಕುಳಿತಿದ್ದರು.
ಈ ಮೊದಲು ಸಂಸಾರಸ್ಥರಾಗಿದ್ದ ರಾಜಭಾರತಿ ಸ್ವಾಮೀಜಿಯವರು ಆ ಮೇಲೆ ಸನ್ಯಾಸಿಯಾದರು. ಹೊಸಪೇಟೆ, ಸಂಡೂರು ತಾಲೂಕಿ ನಲ್ಲಿ ಅನ್ನಪೂರ್ಣೇಶ್ವರಿ ಮಠವನ್ನ ಹೊಂದಿದ್ದಾರೆ. ನಾಗಸಾಧುವಿ ನಂತೆ ಕಾಣುವ ಅವರನ್ನ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವ ಕುಮಾರ, ಹಾಲಿ ಸಂಸದ ವಿ.ಎಸ್.ಉಗ್ರಪ್ಪ, ಬಿಜೆಪಿ ಅಭ್ಯರ್ಥಿ ವೈ.ದೇವೇಂದ್ರಪ್ಪ ಸೇರಿದಂತೆ ‌ಅನೇಕ ರಾಜಕಾರಣಿಗಳು, ಗಣ್ಯಮಾನ್ಯರು ಭೇಟಿಯಾಗಿ ದರುಶನ ಪಡೆದಿದ್ದಾರೆ.
Body:ಮೌನಾಚರಣೆ: ವರ್ಷದ ಆರು ತಿಂಗಳಕಾಲ ಮೌನ ವ್ರತಾಚರಣೆ ಮಾಡಲಿರುವ ಈ ರಾಜಭಾರತಿ ಸ್ವಾಮೀಜಿಯವರು ಮುಂದಿನ ಆರು ತಿಂಗಳಕಾಲ ಮಾತನಾಡಲಿದ್ದಾರೆ. ಮೌನವ್ರತಾಚರಣೆಯಲ್ಲಿ ಇರುವಾಗ ಸ್ಲೇಟ್ ನಲ್ಲಿ ಬರೆದೇ ಉತ್ತರಿಸಲಿದ್ದಾರೆ. ಈಗ ಮೌನ ವ್ರತಾಚರಣೆಯಲ್ಲಿರದ ರಾಜಭಾರತಿ ಸ್ವಾಮೀಜಿ ಎದುರು ಶಾಸಕ ಗಣೇಶ ತಮಗೆ ಎದುರಾದ ಸಂಕಷ್ಟಗಳೆಲ್ಲವನ್ನೂ ಹೇಳಿಕೊಂಡಾಗ, ಎಲ್ಲ ಒಳ್ಳೆಯದಾಗುತ್ತದೆ ಎಂದು ಸ್ವಾಮೀಜಿ ಉತ್ತರಿಸಿದ್ದಾರೆ. ಇಲ್ಲಿಗೆ ಭೇಟಿಯಾದ ಬಳಿಕ ನನಗೆ ಅಲ್ಪಮಟ್ಟಿಗೆ ಸಮಾಧಾನ ತಂದಿದೆ. ಎಲ್ಲ ಸಂಕಷ್ಟದಿಂದ ಹೊರಬರುವ ಇಂಗಿತವನ್ನ ಶಾಸಕ ಗಣೇಶ ವ್ಯಕ್ತಪಡಿಸಿದ್ದಾರೆ‌.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_02_28_MLA_GANESH_FAMILY_VISIT_MATH_7203310

KN_BLY_02c_28_MLA_GANESH_FAMILY_VISIT_MATH_7203310

KN_BLY_02d_28_MLA_GANESH_FAMILY_VISIT_MATH_7203310

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.