ETV Bharat / state

ಪತ್ರಕರ್ತರು ವಸ್ತುನಿಷ್ಠ ವರದಿಗಳನ್ನು ನೀಡಬೇಕು: ಡಿಸಿ ನಕುಲ್​​

ಕಾನೂನಾತ್ಮಕವಾಗಿ ಯಾವ ಯಾವ ಸುದ್ದಿ ನೀಡಬೇಕೆಂಬ ಕನಿಷ್ಠ ಮಾಹಿತಿ ಪತ್ರಕರ್ತರಿಗೆ ಇರಬೇಕು. ನಾನು ಮಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ಸ್ವಾಮೀಜಿಯೊಬ್ಬರು ಸಾವನ್ನಪ್ಪಿದ್ದರು. ವೈದ್ಯಾಧಿಕಾರಿಗಳು ಆಂಗ್ಲ ಭಾಷೆಯಲ್ಲಿ ವಿಷಹಾರ ಸೇವನೆ ಎಂದು ಹೇಳಿದ್ದರು. ಆದರೆ, ಪತ್ರಕರ್ತರೊಬ್ಬರು ವಿಷಪ್ರಾಶನ ಸೇವನೆ ಶಂಕೆ ಎಂದು ಪ್ರಕರಣ ದಿಕ್ಕನ್ನೇ ಬದಲಾಯಿಸಿದ್ದರು ಎಂದು ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ಬಿ. ನಿಂಬರಗಿ ಹೇಳಿದರು.

ವಿಶ್ವ ಪತ್ರಿಕಾ ದಿನಾಚರಣೆ
author img

By

Published : Jul 1, 2019, 5:16 PM IST

ಬಳ್ಳಾರಿ : ಪತ್ರಕರ್ತರು ವಿಭಿನ್ನ ಮತ್ತು ವಸ್ತುನಿಷ್ಠತೆಯಿಂದ ಕೂಡಿದ ವರದಿಗಳನ್ನು ನೀಡಬೇಕೆಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅಭಿಪ್ರಾಯಪಟ್ಟಿದ್ದಾರೆ.

ನಗರದ ಡಿಸಿ ಕಚೇರಿಯ ಆವರಣದಲ್ಲಿ ವಿಶ್ವ ಪತ್ರಿಕಾ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪತ್ರಕರ್ತರ ಆಲೋಚನೆಗಳು ವಿಭಿನ್ನವಾದ್ರೂ ವಸ್ತುನಿಷ್ಠ ವರದಿಯನ್ನು ಮಾಡಲು ತಾವೆಲ್ಲಾ ಮುಂದಾಗಬೇಕು. ವೃತ್ತಿ ಧರ್ಮದಲ್ಲಿ ಒಗ್ಗಟ್ಟು ಒಡೆಯಬಾರದು, ಜಿಲ್ಲೆಯಲ್ಲಿ ವಿಭಿನ್ನ, ಉತ್ತಮ ಬರಹಗಾರ ಪತ್ರಕರ್ತರೂ ಇದ್ದಾರೆ. ಉತ್ತಮ ಆಲೋಚನೆಗಳ ಅತ್ಯುತ್ತಮ ವರದಿ ಮೂಡಿ ಬರಲಿ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಕೆ.ನಿತೀಶಕುಮಾರ ಮಾತನಾಡಿ, ವಸ್ತುನಿಷ್ಠ ವರದಿ ಮಾಡುವಾಗ ಸಂಬಂಧಪಟ್ಟವರ ಹೇಳಿಕೆಯನ್ನು ಉಲ್ಲೇಖಿಸಬೇಕು. ಸಮಾಜದ ಅಂಕು-ಡೊಂಕುಗಳನ್ನು ತಿದ್ದಿ ತೀಡುವ ಪತ್ರಕರ್ತರು ಉತ್ತಮ ಮಾರ್ಗದಲ್ಲಿ ನಡೆಯಬೇಕೆಂದರು.

ವಿಶ್ವ ಪತ್ರಿಕಾ ದಿನಾಚರಣೆ

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ಬಿ. ನಿಂಬರಗಿ ಮಾತನಾಡಿ, ಪತ್ರಕರ್ತರಿಗೆ ಕಾನೂನಿನ ಅರಿವು ಅಗತ್ಯವಿದೆ. ಕಾನೂನಾತ್ಮಕವಾಗಿ ಯಾವ ಯಾವ ಸುದ್ದಿ ನೀಡಬೇಕೆಂಬ ಕನಿಷ್ಠ ಮಾಹಿತಿ ಪತ್ರಕರ್ತರಿಗೆ ಇರಬೇಕು. ನಾನು ಮಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ಸ್ವಾಮೀಜಿಯೊಬ್ಬರು ಸಾವನ್ನಪ್ಪಿದ್ದರು. ವೈದ್ಯಾಧಿಕಾರಿಗಳು ಆಂಗ್ಲ ಭಾಷೆಯಲ್ಲಿ ವಿಷಹಾರ ಸೇವನೆ ಎಂದು ಹೇಳಿದ್ದರು. ಆದರೆ, ಪತ್ರಕರ್ತರೊಬ್ಬರು ವಿಷಪ್ರಾಶನ ಸೇವನೆ ಶಂಕೆ ಎಂದು ಪ್ರಕರಣ ದಿಕ್ಕನ್ನೇ ಬದಲಾಯಿಸಿದ್ದರು. ಈ ನಿಟ್ಟಿನಲ್ಲಿ ಅಸತ್ಯ ಸುದ್ದಿ ಬಿತ್ತರಿಸುವ ವರದಿಗಾರರ ಮೇಲೆ ತನಿಖೆಯ ಅನಿವಾರ್ಯತೆ ಬಂತು. ಅದಕ್ಕಾಗಿ ತಿಳಿದುಕೊಂಡು ನಂತರ ವರದಿ ಮಾಡಿ ಎಂದು ಸಲಹೆ ನೀಡಿದರು.

Intro:ಬಳ್ಳಾರಿ ಪತ್ರಕರ್ತರ ಬಳಗದಿಂದ ಪತ್ರಿಕಾ ದಿನಾಚರಣೆ
ಪತ್ರಕರ್ತರ ಆಲೋಚನೆಗಳು ವಿಭಿನ್ನವಾಗಿರಲಿ: ಡಿಸಿ ನಕುಲ್
ಬಳ್ಳಾರಿ: ಪತ್ರಕರ್ತರ ಆಲೋಚನೆಗಳು ವಿಭಿನ್ನವಾಗಿರಲಿ.‌
ಆದ್ರೆ ವಸ್ತುನಿಷ್ಠ ವರದಿಯನ್ನು ಪತ್ರಕರ್ತರು ನೀಡಬೇಕೆಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅಭಿಪ್ರಾಯಪಟ್ಟಿದ್ದಾರೆ.
ಬಳ್ಳಾರಿಯ ಡಿಸಿ ಕಚೇರಿಯ ಆವರಣದಲ್ಲಿಂದು ಬಳ್ಳಾರಿ ಪತ್ರಕರ್ತರ ಬಳಗದಿಂದ ಆಯೋಜಿಸಿದ್ದ ವಿಶ್ವ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮುಖೇನ ಚಾಲನೆ ನೀಡಿ ಅವರು ಮಾತನಾಡಿದರು.
ಪತ್ರಕರ್ತರ ಆಲೋಚನೆಗಳು ವಿಭಿನ್ನವಾದ್ರೂ ವಸ್ತುನಿಷ್ಠ ವರದಿಯನ್ನು ಮಾಡಲು ತಾವೆಲ್ಲಾ ಮುಂದಾಗಬೇಕು. ಆ
ವಿಭಿನ್ನ ಆಲೋಚನೆಗಳು. ಆಲೋಚನೆಯೇ ಆಗಬೇಕು. ಆದರೆ, ವಿಭಿನ್ನ ರೀತಿಯ ಆಲೋಚನೆಗಳಿಂದ ವೃತ್ತಿ ಧರ್ಮ
ದಲ್ಲಿ ಒಗ್ಗಟ್ಟು ಒಡೆಯಬಾರದೆಂದರು.
ಗಣಿನಾಡಿನಲ್ಲಿ ವಿಭಿನ್ನ ರೀತಿಯ ಆಲೋಚನೆಗಳಿವೆ. ಅತ್ಯಂತ ಉತ್ತಮ ಬರಹಗಾರ ಪತ್ರಕರ್ತರೂ ಇದ್ದಾರೆ. ಆದರೆ, ವಿಭಿನ್ನ ರೀತಿಯ ಆಲೋಚನೆಗಳಲ್ಲಿ ಅತ್ಯುತ್ತಮ ವರದಿಗಳು ಮೂಡಿ ಬರಲಿರುವ ಈ ಸಂದರ್ಭದಲ್ಲಿ ವರದಿಗಾರರು ಒಗ್ಗಟ್ಟು ಪ್ರದ ರ್ಶಿಸಬೇಕು ಎಂದರು.
ಈ ನಿಟ್ಟಿನಲ್ಲಿ ಬಳ್ಳಾರಿ ಪತ್ರಕರ್ತರು ಮುನ್ನಡೆಯಬೇಕು.
ಆ ನಿರೀಕ್ಷೆಯಲ್ಲಿ ನಾನಿರುವೆ. ಮುಂದಿನ ದಿನಗಳಲ್ಲಿ ಎಲ್ಲ ಪತ್ರಕರ್ತರು ಒಗ್ಗಟ್ಟು ಪ್ರದರ್ಶಿಸಬೇಕು ಎಂದರು.

Body:ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಕೆ.ನಿತೀಶಕುಮಾರ ಅವರು ಮಾತನಾಡಿ, ವಸ್ತುನಿಷ್ಠ
ವರದಿ ಮಾಡುವಾಗ ಸಂಬಂಧಪಟ್ಟವರ ಹೇಳಿಕೆಯನ್ನು ಉಲ್ಲೇಖಿಸಬೇಕು. ಸಮಾಜದ ಅಂಕು- ಡೊಂಕುಗಳನ್ನು
ತಿದ್ದಿ ತೀಡುವ ಪತ್ರಕರ್ತರು ಉತ್ತಮ ಮಾರ್ಗದಲ್ಲೇ ನಡೆ ಯಬೇಕೆಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ಬಿ.ನಿಂಬರಗಿ
ಅವರು ಮಾತನಾಡಿ, ಪತ್ರಕರ್ತರಿಗೆ ಕಾನೂನಿನ ಅರಿವು ಅಗತ್ಯವಿದೆ. ಕಾನೂನಾತ್ಮಕವಾಗಿ ಯಾವಯಾವ ಸುದ್ದಿ ನೀಡಬೇಕೆಂಬ ಕನಿಷ್ಠ ಮಾಹಿತಿಯನ್ನು ಪತ್ರಕರ್ತರಿಗೆ ಇರ
ಬೇಕೆಂದರು.
ಮಂಗಳೂರಿನ ಎಸ್ಪಿಯಾಗಿದ್ದ ವೇಳೆ ಸ್ವಾಮೀಜಿಯೊಬ್ಬರು ಮಠದಲ್ಲಿ ಸಾವನ್ನಪ್ಪುತ್ತಿದ್ದಾರೆ. ಆ ಸ್ವಾಮೀಜಿಯ ಮೃತದೇಹ ತಪಾಸಣೆ ನಡೆಸಿದ ವೈದ್ಯಾಧಿಕಾರಿಯು ವಿಷಹಾರ ಸೇವನೆ ಆಗಿರುವ ಶಂಕೆಯಿದೆ ಎಂದು ಆಂಗ್ಲಭಾಷೆಯಲ್ಲೇ ಹೇಳುತ್ತಾರೆ. ಆದರೆ, ಪತ್ರಕರ್ತರೊಬ್ಬರು ವಿಷಪ್ರಾಶನ ಸೇವೆನೆ ಶಂಕೆಯಿದೆ ಎನ್ನುತ್ತಾರೆ‌. ವಿಷಹಾರ ಸೇವೆನೆ ಹೋಗಿ ವಿಷಪ್ರಾಶನ ಸೇವನೆ ಪದವು ಇಡೀ ರಾಜ್ಯವನ್ನೇ ದಿಕ್ಕುತಪ್ಪಿಸಿತ್ತು.‌ ವಿಷಹಾರ,
ವಿಷ ಪ್ರಾಶನ ಸೇವನೆ ಎಂಬ ಪದವು ಬಹಳಷ್ಟು ಗೊಂದಲ ಮೂಡಿಸಿತ್ತು.‌ ಅದರ ಜಾಲವನ್ನು ಹಿಡಿದುಕೊಂಡು ಒಬ್ಬೊಬ್ಬ ವರದಿಗಾರ ಒಂದೊಂದು ರೀತಿಯಲ್ಲಿ ವರದಿ ಮಾಡಲು ಶುರು ಮಾಡಿದರು. ಒಬ್ಬ ವರದಿಗಾರ ಬುರ್ಕಾ ಹಾಕಿಕೊಂಡ ಮಹಿಳೆ ತೊರ್ಸಿ ಭೂಗತ ಪಾತಕಿಗಳ ನಂಟಿದೆ ಎಂಬ ವರದಿಯು ಬಿತ್ತರ ವಾಯಿತು. ಮತ್ತೊಬ್ಬ ವರದಿಗಾರ ಬಾದಾಮಿ ಪಾನೀಯ ಖಾಲಿ ಬಾಟಲ್ ಅನ್ನು ಮಠದ ಮುಂದೆ ಇರಿಸಿ ವಿಷಪ್ರಾಶನ ಆಗಿರುವ ಶಂಕೆ ಇರುವ ಕುರಿತ ವರದಿಯನ್ನು ಮಾಡುತ್ತಾರೆ. ಹೀಗೆ ಒಬ್ಬೊಬ್ಬ ವರದಿಗಾರರು ವಿಭಿನ್ನ ರೀತಿಯ ವರದಿ ಮಾಡಿದಾಗ, ತನಿಖೆ ಮುಕ್ತಾಯದ ಹಂತವೇ ತಲುಪುದಿಲ್ಲ. ಈ ನಿಟ್ಟಿನಲ್ಲಿ ಅಸತ್ಯವಾದ ಸುದ್ದಿಯನ್ನು ಬಿತ್ತರಿಸುವ ವರದಿಗಾರರ ಮೇಲೆ ತನಿಖೆ ಮಾಡುವ ಅನಿವಾರ್ಯತೆ ಬಂದೊದಗುತ್ತದೆ. ಇಂತಹ ತನಿಖಾ ವರದಿಯನ್ನು ಯಾರೂ ಮಾಡಬೇಡಿ. ಆ ವರದಿಯನ್ನು ಯಾವ ರೀತಿಯಾಗಿ ವರದಿ ಮಾಡಬೇಕೆಂಬುದು ತಿಳಿದುಕೊಳ್ಳ ಬೇಕೆಂದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಕೆ.ರಾಮಲಿಂಗಪ್ಪ, ಹಿರಿಯ ಪತ್ರಕರ್ತ ಸಮೀವುಲ್ಲಾ ವಿಶೇಷ ಉಪನ್ಯಾಸ ನೀಡಿದರು.
ಪತ್ರಕರ್ತರಾದ ಕೆ.ಎಂ.ಮಂಜುನಾಥ, ಶಶಿಧರ‌ ಮೇಟಿ, ಎನ್.ವೀರಭದ್ರಗೌಡ, ಸುಭಾಷ್ ಚಂದ್ರ, ಸುರೇಶ ಚೌವ್ಹಾಣ, ವೆಂಕೋಬಿ ಸಂಗನಕಲ್ಲು, ಕಿನ್ನೂರೇಶ್ವರ, ನಾಗರಾಜ ಕೋಟೆ, ಶ್ರೀನಿವಾಸ ಶೆಟ್ಟಿ, ಲೋಕನಾಥ, ಹುಲುಗಣ್ಣ, ಜಯಪ್ಪ ರಾಥೋಡ, ಮುರಳಿ, ಜಂಬುನಾಥ, ಶ್ರೀಧರ ಕವಾಲಿ, ಶ್ರೀಕಾಂತ ಅಕ್ಕಿ, ವೆಂಕಟೇಶ ದೇಸಾಯಿ, ನರಸೇಗೌಡ, ಮಂಜುನಾಥ, ಪಂಪನಗೌಡ, ನಾಗರಾಜ, ಬಸವರಾಜ, ಗಿರೀಶಕುಮಾರಗೌಡ ಸೇರಿದಂತೆ ಇತರೆ ಸಂಘ, ಸಂಸ್ಥೆಗಳ ಮುಖಂಡರು ಇದ್ದರು.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_01_PRESS_REPORTS_DAY_VISUALS_7203310

KN_BLY_01a_PRESS_REPORTS_DAY_VISUALS_7203310

KN_BLY_01b_PRESS_REPORTS_DAY_VISUALS_7203310

KN_BLY_01c_PRESS_REPORTS_DAY_VISUALS_7203310

KN_BLY_01d_PRESS_REPORTS_DAY_VISUALS_7203310

KN_BLY_01e_PRESS_REPORTS_DAY_VISUALS_7203310
ETV Bharat Logo

Copyright © 2024 Ushodaya Enterprises Pvt. Ltd., All Rights Reserved.