ETV Bharat / state

ಜಿಂದಾಲ್​ ಸಮೀಪ ಹಾಲು ಮಾರಿದ ವ್ಯಕ್ತಿಯಿಂದ ಜಾಸ್ತಿ ಸೋಂಕು ಹರಡೋಕೆ ಸಾಧ್ಯವಿಲ್ಲ: ಜಿಲ್ಲಾಧಿಕಾರಿ

author img

By

Published : Jun 14, 2020, 12:08 PM IST

ಬಳ್ಳಾರಿ ಜಿಲ್ಲೆಯ ಜಿಂದಾಲ್ ಸಮೂಹ‌ ಸಂಸ್ಥೆಯ ಉಕ್ಕು ಕಾರ್ಖಾನೆಯ ವಿದ್ಯಾನಗರ ಪ್ರದೇಶ ವ್ಯಾಪ್ತಿಯಲ್ಲಿ ಹಾಲು‌ ಮಾರಿದ ವ್ಯಕ್ತಿಯಿಂದ ಸೋಂಕು ಹರಡುವ ಸಾಧ್ಯತೆ ಕಡಿಮೆ ಎಂದು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಸ್ಪಷ್ಟಪಡಿಸಿದ್ದಾರೆ.

District Collector S.S.Nakul
ಜಿಲ್ಲಾಧಿಕಾರಿ ಎಸ್.ಎಸ್.ನಕುಲ್

ಬಳ್ಳಾರಿ: ಜಿಲ್ಲೆಯ ಜಿಂದಾಲ್ ಉಕ್ಕು ಕಾರ್ಖಾನೆಯ ವಿದ್ಯಾನಗರ ಪ್ರದೇಶ ವ್ಯಾಪ್ತಿಯಲ್ಲಿ ಹಾಲು‌ ಮಾರಿದ ವ್ಯಕ್ತಿಯಿಂದ ಸೋಂಕು ಹರಡುವ ಸಾಧ್ಯತೆ ಕಡಿಮೆ ಎಂದು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಸ್ಪಷ್ಟಪಡಿಸಿದ್ದಾರೆ.

ಜಿಂದಾಲ್ ಉಕ್ಕು ಕಾರ್ಖಾನೆಯಲ್ಲಿನ ವಿದ್ಯಾನಗರ ಏರಿಯಾದಲ್ಲಿ ಹಾಲು ಮಾರಾಟ ಮಾಡುತ್ತಿದ್ದ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಅನ್ನೋದು ಗೊತ್ತಾದ ಬಳಿಕ ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿದರು. ಅತ್ಯಂತ ಕಡಿಮೆ ಸಮಯದಲ್ಲಿ ವಿದ್ಯಾನಗರ ಪ್ರದೇಶದ ಪ್ರತಿಯೊಂದು ಮನೆ ಮನೆಗೆ ತೆರಳಿ ಹಾಲು ಮಾರಾಟ ಮಾಡಿ ಆ ವ್ಯಕ್ತಿ ವಾಪಸ್ ಆಗಿದ್ದರಿಂದ ಬೇರೆಯವರಿಗೆ ಸೋಂಕು ಹರಡೋಕೆ ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.‌

ಜಿಲ್ಲಾಧಿಕಾರಿ ಎಸ್.ಎಸ್. ನಕುಲ್

ಈಗಾಗಲೇ ಆ ಸೋಂಕಿತನೊಂದಿಗೆ ಮೊದಲ ಸಂಪರ್ಕ ಹೊಂದಿದ್ದವರನ್ನು ಸಾಂಸ್ಥಿಕ ಕ್ವಾರಂಟೈನ್ ‌ಮಾಡಲಾಗಿದೆ. ಅಲ್ಲದೇ, ಜಿಂದಾಲ್ ಸಮೂಹ ಸಂಸ್ಥೆಯ ಉಕ್ಕು ಕಾರ್ಖಾನೆಯಲ್ಲಿ ಕೆಲಸ ಮಾಡುವ ಅಂದಾಜು 430 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಎ ಕೆಗಟರಿಯ ಸೋಂಕು ಆ ಹಾಲು‌ ಮಾರಾಟ ವ್ಯಕ್ತಿಗೆ‌ ಇರುವುದರಿಂದ ಅಷ್ಟೊಂದು ಪ್ರಮಾಣದ ಸೋಂಕು ಹರಡುವಿಕೆ ಇರುವುದಿಲ್ಲ ಎಂದು ಡಿ ಸಿ ನಕುಲ್ ತಿಳಿಸಿದ್ದಾರೆ.

ಜಿಂದಾಲ್ ಉಕ್ಕು‌ ಕಾರ್ಖಾನೆಯ ಪ್ರಥಮ‌ ಹಾಗೂ ಎರಡನೇ ಸಂಪರ್ಕ ಹೊಂದಿರುವ ಸುಮಾರು 360 ಮಂದಿಯನ್ನು ಹೋಟೆಲ್​​​ ಕ್ವಾರಂಟೈನ್ ಮಾಡಲಾಗಿದೆ. ಕೇಂದ್ರ ಸರ್ಕಾರದ ಗೈಡ್​​ಲೈನ್ಸ್ ಪ್ರಕಾರ ಐದು ದಿನಗಳ‌ ನಂತರ ಸ್ವ್ಯಾಬ್ ಸಂಗ್ರಹಿಸಲಾಗುತ್ತದೆ. ಆ ವರದಿಯ ಆಧಾರದ ಮೇಲೆ ಮುಂದಿನ‌ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.

ಜಿಂದಾಲ್​ ಉಕ್ಕು‌ ಕಾರ್ಖಾನೆಗೆ ಹೋಗದಂತೆ ಜಿಲ್ಲೆಯ ಸಂಡೂರು, ಬಳ್ಳಾರಿ ಹಾಗೂ‌ ಹೊಸಪೇಟೆ ತಾಲೂಕಿನ‌ ನಾನಾ ಗ್ರಾಮಗಳಲ್ಲಿ ಡಂಗೂರ ಸಾರಿಸುವುದು ಜನರಿಗೆ ಕೊರೊನಾ ಸೋಂಕಿನ ಬಗ್ಗೆ ಜಾಗೃತಿ‌ ಮೂಡಿಸಲು. ಅದರ ಹೊರತು ಜನರಲ್ಲಿ ಭಯ ಹುಟ್ಟಿಸುವಂತಹ ಕಾರ್ಯಕ್ಕೆ ಯಾರೊಬ್ಬರೂ ಕೂಡ ಮುಂದಾಗಬಾರದು ಜಿಲ್ಲಾಧಿಕಾರಿ ಸೂಚಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.