ಹೊಸಪೇಟೆ : ನಗರದ ಕನಕದಾಸರ ವೃತ್ತದ ಬಳಿ ಸುಮಾರು 1.50 ಕೋಟಿ ರೂ. ವೆಚ್ಚದಲ್ಲಿ ಅಮೃತ ಯೋಜನೆಯಡಿ ಸ್ವಾತಂತ್ರ್ಯ ಉದ್ಯಾನವನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ.
ಕೆಂಪು ಕೋಟೆಯ ಮಾದರಿ ಉದ್ಯಾನವನ್ನು ನಿರ್ಮಿಸಲಾಗುತ್ತಿದೆ. ಶಾಸಕರ ಹಾಗೂ ಬೇರೆ ಬೇರೆ ಅನುದಾನವನ್ನು ಅಭಿವೃದ್ಧಿ ಕಾರ್ಯಕ್ಕೆ ಬಳಸಿಕೊಳ್ಳಲಾಗುತ್ತಿದೆ. 1.5. ಎಕೆರೆಯಲ್ಲಿ ಉದ್ಯಾನವನ್ನು ನಿರ್ಮಾಣ ಮಾಡಲಾಗುತ್ತಿದೆ. ಒಂದು ವರ್ಷದ ಹಿಂದೆ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ.
ಈಗಾಗಲೇ ಉದ್ಯಾನ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಇನ್ನು, ಆರು ತಿಂಗಳಿನಲ್ಲಿ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಸ್ವಾತಂತ್ರ್ಯಕ್ಕಾಗಿ ನಡೆದ ಚಳವಳಿ ನೆನಪಿಸುವ ಕಾರ್ಯ ಇದಾಗಿದೆ. ಕೇವಲ ಪ್ರತಿಭಟನೆಗೆ ಈ ಉದ್ಯಾನವನ ಸೀಮಿತವಲ್ಲ. ಬೆಂಗಳೂರಿನ ಪ್ರೀಡಂ ಪಾರ್ಕ್ ಬೇರೆ. ಹೊಸಪೇಟೆಯಲ್ಲಿನ ಬೇರೆ ಎಂಬುದು ನಗರಸಭೆಯ ಅಧಿಕಾರಿಗಳ ಮಾತು.

ತುಂಗಭದ್ರಾ ಜಲಾಶಯಶದ ಕಾಲುವೆಗೆ(ಎಲ್ಎಲ್ಸಿ) ಹೊಂದಿಕೊಂಡಂತಹ ಸ್ಥಳದಲ್ಲಿ ಸ್ವತಂತ್ರ್ಯ ಉದ್ಯಾನ ನಿರ್ಮಿಸಲಾಗುತ್ತಿದೆ. ಈಗಾಗಲೇ ಕೆಂಪು ಕಲ್ಲುಗಳ ಕೆತ್ತನೆ ಕಾರ್ಯ ನಡೆದಿದೆ. ಅಲ್ಲದೇ, ಸ್ಥಳದ ಸುತ್ತಲು ಕಬ್ಬಿನ ಸಲಾಕೆಗಳನ್ನು ಜೋಡಿಸಲಾಗಿದೆ. ಸ್ಥಳದ ಒಂದು ಭಾಗದಲ್ಲಿ ಮಂಟಪಗಳನ್ನು ನಿರ್ಮಿಸಲಾಗಿದೆ.
ಬೆಂಗಳೂರು ರೀತಿ ಸ್ವಾತಂತ್ರ್ಯ ಉದ್ಯಾನವನ್ನು ಪ್ರತಿಭಟನೆಗೆ ಸಿಮೀತಗೊಳಿಸಬಾರದು ಎಂಬ ಕೂಗು ಕೇಳಿ ಬರುತ್ತಿದೆ. ಅನ್ಯಾಯವಾದಾಗ ಆಯಾ ಕಚೇರಿಯ ಮುಂದೆ ಹೋರಾಟ ಮಾಡುವಂತ ಅವಕಾಶವಿರಬೇಕು. ಹೋರಾಟಗಾರರ ಹಕ್ಕನ್ನು ಕಸಿದುಕೊಳ್ಳಬಾರದು ಎಂದು ಪ್ರತಿಭಟನಾಕಾರರ ಒತ್ತಾಸೆಯಾಗಿದೆ.
ಇದನ್ನೂ ಓದಿ:ಮಂಗಳನಲ್ಲಿ ರೋವರ್ ಲ್ಯಾಂಡಿಂಗ್ನಲ್ಲಿ ಭಾರತೀಯ ಮೂಲದ ವಿಜ್ಞಾನಿಯ ಮಹತ್ವದ ಪಾತ್ರ