ETV Bharat / state

ಐಟಿ ದಾಳಿ ರಾಜಕೀಯ ಪ್ರೇರಿತ ಅನ್ನುವ ಕೈ ಮುಖಂಡರು: ಈ ಕಾಂಗ್ರೆಸ್​ ಶಾಸಕ​ ಹೇಳೋದೇ ಬೇರೆ!

ನಾನು ಓರ್ವ ಉದ್ಯಮಿಯಾಗಿದ್ದು, ಜಿ.ಪರಮೇಶ್ವರ್ ಅವರ ಮೇಲಿನ ಐಟಿ ದಾಳಿ ರಾಜಕೀಯ ಪ್ರೇರಿತವಲ್ಲವೆಂದು ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್​ ಶಾಸಕ ಬಿ.ನಾಗೇಂದ್ರ ಹೇಳಿದ್ದಾರೆ.

ಶಾಸಕ ನಾಗೇಂದ್ರ
author img

By

Published : Oct 10, 2019, 3:17 PM IST

ಬಳ್ಳಾರಿ: ಜಿ. ಪರಮೇಶ್ವರ್​ ಮಾಲೀಕತ್ವದ ಸಿದ್ಧಾರ್ಥ ವಿದ್ಯಾಸಂಸ್ಥೆಯಗಳ ಮೇಲೆ ನಡೆದಿರುವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ ರಾಜಕೀಯ ಪ್ರೇರಿತವಲ್ಲವೆಂದು ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕ ಬಿ.ನಾಗೇಂದ್ರ ಹೇಳುವ ಮೂಲಕ ಕಾಂಗ್ರೆಸ್​ ನಾಯಕರಿಗೆ ಮುಜುಗರವನ್ನುಂಟು ಮಾಡಿದ್ದಾರೆ.

ಶಾಸಕ ನಾಗೇಂದ್ರ

ಹರಗಿನಡೋಣಿ ಗ್ರಾಮದ ಕುಡಿಯುವ ನೀರಿನ ಕೆರೆ ನಿರ್ಮಾಣದ ಸ್ಥಳ ಪರಿಶೀಲನೆ‌ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐಟಿ ಅಧಿಕಾರಿಗಳ ದಾಳಿಯನ್ನು ನಾನು ರಾಜಕೀಯಕ್ಕೆ ಬಳಸಿಕೊಳ್ಳಲ್ಲ. ಕಾಂಗ್ರೆಸ್ಸಿನ ಹಿರಿಯ ನಾಯಕ ಜಿ. ಪರಮೇಶ್ವರ್ ಅವರು ಸಮರ್ಥರಿದ್ದಾರೆ. ಅದನ್ನು ನಿಭಾಯಿಸುವ ಶಕ್ತಿ ಅವರಲ್ಲಿದೆ ಎಂದರು.

ನಾನು ಬಿಜೆಪಿ ಸೇರುವ ವಿಚಾರ ಊಹೆಯಾಗಿರಲಿ:

ಕಳೆದ ಕೆಲ ತಿಂಗಳಿಂದಲೂ ಅನಾರೋಗ್ಯದಿಂದ ಬಳಲುತ್ತಿದ್ದೆ. ಹಾಗಾಗಿ, ಕ್ಷೇತ್ರದಲ್ಲಿ ಇರಲಿಲ್ಲ. ನಾನು ಬಿಜೆಪಿ ಸೇರುತ್ತೇನೆ ಎಂಬ ಊಹಾಪೋಹ ಸುದ್ದಿಯನ್ನು ಯಾರೋ ಹಬ್ಬಿಸಿದ್ದಾರೆ. ಅದು ಊಹೆಯಾಗಿರಲಿ ಎಂದು ಶಾಸಕ ನಾಗೇಂದ್ರ ಇದೇ ಸಂದರ್ಭದಲ್ಲಿ ಹೇಳಿದರು.

ನಾನು ಕ್ಷೇತ್ರದಲ್ಲಿ ಇಂದಿನಿಂದ ಪ್ರವಾಸ ಆರಂಭಿಸಿದ್ದೇನೆ. ಇಲ್ಲಿಯೇ ಇದ್ದು ಮತದಾರರ ಸಮಸ್ಯೆಗಳನ್ನು ಆಲಿಸುವೆ ಎಂದರು.

Intro:ಆದಾಯ ತೆರಿಗೆ ಇಲಾಖೆ ದಾಳಿ ರಾಜಕೀಯ ಪ್ರೇರಿತವಲ್ಲ: ಶಾಸಕ ನಾಗೇಂದ್ರ ಅಭಿಪ್ರಾಯ!
ಬಳ್ಳಾರಿ: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ರಾಜಕೀಯ ಪ್ರೇರಿತವಲ್ಲ ಎಂದು ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕ ಬಿ.ನಾಗೇಂದ್ರ ಅಭಿಪ್ರಾಯಪಟ್ಟಿದ್ದಾರೆ.
ಬಳ್ಳಾರಿಯ ಗ್ರಾಮಾಂತರ ವಿಧಾನಸಭಾ‌ ಕ್ಷೇತ್ರ ವ್ಯಾಪ್ತಿಯ ಹರಗಿನಡೋಣಿ ಗ್ರಾಮದ ಕುಡಿಯುವ ನೀರಿನ ಕೆರೆ ನಿರ್ಮಾಣಕಾರ್ಯದ ಸ್ಥಳಪರಿಶೀಲನೆ‌ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಜಿ.ಪರಮೇಶ್ವರ ಮಾಲೀಕತ್ವದ ಸಿದ್ಧಾರ್ಥ ವಿದ್ಯಾಸಂಸ್ಥೆಯ‌ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿರೋದು ರಾಜಕೀಯ ಪ್ರೇರಿತವಾದುದಲ್ಲ. ಯಾಕಂದ್ರೆ ನಾನೂ ಕೂಡ ವ್ಯವಹಾರಸ್ಥನಾಗಿದ್ದು. ಐಟಿ ಅಧಿಕಾರಿಗಳ ದಾಳಿಯನ್ನು ನಾನೂ ರಾಜಕೀಯಕ್ಕೆ ಬಳಸಿಕೊಳ್ಳಲ್ಲ ಎಂದರು.
ಕಾಂಗ್ರೆಸ್ಸಿನ ಹಿರಿಯ ನಾಯಕ ಜಿ.ಪರಮೇಶ್ವರ ಅವ್ರು ಸಮರ್ಥರಿದ್ದಾರೆ. ಅದನ್ನು ನಿಭಾಯಿಸುವ ಶಕ್ತಿ ಅವರಲ್ಲಿದೆ ಎಂದರು.

Body:ನಾನು ಬಿಜೆಪಿ ಸೇರುವ ವಿಚಾರ ಊಹೆಯಾಗಿರಲಿ: ಕಳೆದ
ಕೆಲ ತಿಂಗಳಿಂದಲೂ ಅನಾರೋಗ್ಯದಿಂದ ಬಳಲುತ್ತಿದ್ದೆ. ಆಗಾಗಿ, ನಾನು ಕ್ಷೇತ್ರದಲ್ಲಿ ಇರಲಿಲ್ಲ. ನಾನು ಬಿಜೆಪಿ ಸೇರುತ್ತಾರೆಂಬುದು ಊಹಾಪೋಹ ಸುದ್ದಿಯನ್ನು ಯಾರೋ ಹಬ್ಬಿಸಿದ್ದಾರೆ. ಅದು ಊಹೆಯಾಗಿರಲೇ ಇರಲಿ ಎಂದು ಹಾರೈಸಿದ್ದಾರೆ ಶಾಸಕ ನಾಗೇಂದ್ರ.
ನಾನು ಕ್ಷೇತ್ರದಲ್ಲಿ ಇಂದಿನ ಪ್ರವಾಸ ಶುರು ಮಾಡಿರುವೆ. ಇಲ್ಲಿಯೇ ಇದ್ದು ಮತದಾರರ ಸಮಸ್ಯೆಗಳನ್ನು ಆಲಿಸುವೆ ಎಂದರು ಶಾಸಕ ನಾಗೇಂದ್ರ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_3_RURAL_MLA_NAGENDRA_BYTE_7203310
ETV Bharat Logo

Copyright © 2024 Ushodaya Enterprises Pvt. Ltd., All Rights Reserved.