ETV Bharat / state

ಹಂಪಿ‌ ಉತ್ಸವಕ್ಕೆ ನಾಳೆ ಸಿಎಂ ಚಾಲನೆ, ಸಮಾರಂಭಕ್ಕೆ ಯಶ್‌ ಆಕರ್ಷಣೆ - Hampi Utsav 2020

ಐತಿಹಾಸಿಕ ವಿಶ್ವ ಪಾರಂಪರಿಕ ತಾಣ ಹಂಪಿಯ, ಹಂಪಿ ಉತ್ಸವಕ್ಕೆ ನಾಳೆ ಚಾಲನೆ ದೊರೆಯಲಿದೆ. ಜನವರಿ 10 ಮತ್ತು 11ರಂದು ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಲಿದೆ. ಈ ಕುರಿತ ಸಮಗ್ರ ಮಾಹಿತಿ ಇಲ್ಲಿದೆ ನೋಡಿ.

Historic Hampi Utsav, ಹಂಪಿ ಉತ್ಸವ
ಹಂಪಿ ಉತ್ಸವ
author img

By

Published : Jan 9, 2020, 5:07 PM IST

Updated : Jan 9, 2020, 8:57 PM IST

ಬಳ್ಳಾರಿ: ಈ ಬಾರಿ ಇಡೀ ರಾಜ್ಯವನ್ನೇ ನಡುಗಿಸಿದ ನೆರೆಯ ನೆಪವೊಡ್ಡಿ ಮುಂದೂಡಲಾಗಿದ್ದ ಹಂಪಿ ಉತ್ಸವವನ್ನು ಜನವರಿ 10 ಮತ್ತು 11ರಂದು ವಿಜೃಂಭಣೆಯಿಂದ ಆಚರಿಸಲು ಜಿಲ್ಲಾಡಳಿತ ಸಕಲ ತಯಾರಿ ನಡೆಸಿಕೊಂಡಿದೆ. ಶುಕ್ರವಾರ ಸಂಜೆ 7.30 ಗಂಟೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉತ್ಸವಕ್ಕೆ ವಿದ್ಯುಕ್ತ ಚಾಲನೆ ನೀಡಲಿದ್ದು, ನಟ​​ ಯಶ್ ಕೂಡ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.

ಹಂಪಿ‌ ಉತ್ಸವಕ್ಕೆ ನಾಳೆ ಸಿಎಂ ಚಾಲನೆ, ಸಮಾರಂಭಕ್ಕೆ ಯಶ್‌ ಆಕರ್ಷಣೆ

ಜಿಲ್ಲೆಯ‌ ಹೊಸಪೇಟೆ ತಾಲೂಕಿನ‌ ಹಂಪಿಯಲ್ಲಿ ಜಿಲ್ಲಾಡಳಿತದಿಂದ ನಾಲ್ಕು ವೇದಿಕೆಗಳನ್ನು‌ ನಿರ್ಮಿಸಲಾಗಿದೆ. ಶ್ರೀಕೃಷ್ಣದೇವರಾಯ (ಗಾಯತ್ರಿ ಪೀಠ) ವೇದಿಕೆ, ಬಸವಣ್ಣ ವೇದಿಕೆ, ಶ್ರೀ ವಿರುಪಾಕ್ಷೇಶ್ವರ ದೇವಸ್ಥಾನ ವೇದಿಕೆ, ಕಡಲೆಕಾಳು ಗಣಪ ವೇದಿಕೆಯ ತಯಾರಿಕಾರ್ಯ ಭರದಿಂದ ಸಾಗಿದೆ. ಮುಖ್ಯವೇದಿಕೆಯಲ್ಲಿ ಹಂಪಿ ಉತ್ಸವಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡುವ ಹಿನ್ನೆಲೆಯಲ್ಲಿ ವಿಶೇಷ ಅತಿಥಿಗಳೂ ಸೇರಿದಂತೆ ಸಾರ್ವಜನಿಕರ ಗ್ಯಾಲರಿಗಳನ್ನು ಅತ್ಯಂತ ವ್ಯವಸ್ಥಿತವಾಗಿ ಮಾಡಲಾಗುತ್ತಿದೆ.

Historic Hampi Utsav, ಹಂಪಿ ಉತ್ಸವ
ಹಂಪಿ‌ ಉತ್ಸವಕ್ಕೆ ಸಿದ್ದತೆ

ಜ. 8ರಿಂದ 12ರವರೆಗೆ ಕಮಲಾಪುರ ಹೋಟೆಲ್ ಮಯೂರ ಭುವನೇಶ್ವರಿ ಆವರಣದಲ್ಲಿ ಬೆಳಗ್ಗೆ 10ರಿಂದ ಸಂಜೆ 6ರವರೆಗೆ ಹಂಪಿ ಬೈಸ್ಕೈ (ಆಗಸದಲ್ಲಿ ಹಂಪಿ) ಏರ್ಪಡಿಸಲಾಗಿದೆ.

ಜ.10ರಿಂದ 11ರವರೆಗೆ ಬೆಳಗ್ಗೆ 9.30ರಿಂದ ಸಾಸುವೆಕಾಳು ಗಣಪ ಮುಂಭಾಗದಲ್ಲಿ ಸಾಹಸ ಕ್ರೀಡೆಗಳು ನಡೆಯಲಿವೆ. ಜ.11ರಂದು ಕಮಲಾಪುರ ಕೆರೆಯಲ್ಲಿ ಸಂಜೆ 4ಕ್ಕೆ ಪಾರಂಪರಿಕ ಸ್ಪರ್ಧೆ ಮತ್ತು ಮಾತಂಗ ಪರ್ವತ ಮೈದಾನದ ಆವರಣದಲ್ಲಿ ಮತ್ಸ್ಯಮೇಳ ಆಯೋಜಿಸಲಾಗಿದೆ. ಈ ಎರಡು ದಿನಗಳ ಕಾಲ ಹಂಪಿ ವಿರೂಪಾಕ್ಷ ದೇವಸ್ಥಾನದ ಮುಂಭಾಗದಲ್ಲಿ ರಂಗೋಲಿ, ಮೆಹಂದಿ ಪ್ರದರ್ಶನ ನಡೆಯಲಿದೆ.

ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ, ಆರೋಗ್ಯ ಮತ್ತು ಸಚಿವರಾದ ಬಿ. ಶ್ರೀರಾಮುಲು ಹಾಗೂ ಸಚಿವ ಸಿ.ಟಿ. ರವಿ ಸೇರಿದಂತೆ ಇತರ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ವಿಜಯನಗರ ವಿಧಾನಸಭಾ ಕ್ಷೇತ್ರ ಶಾಸಕ ಅನಂದ್ ಸಿಂಗ್ ಉತ್ಸವದ ಅಧ್ಯಕ್ಷತೆ ವಹಿಸಲಿದ್ದಾರೆ.

ಶ್ರೀಕೃಷ್ಣದೇವರಾಯ ವೇದಿಕೆ (ಗಾಯತ್ರಿ ಪೀಠ):

ಜ.10ರಂದು ರಾತ್ರಿ 10.30 ಗಂಟೆಗೆ ಬೆಂಗಳೂರಿನ ಮನೋಮೂರ್ತಿ ಮತ್ತು ತಂಡದಿಂದ ರಸಮಂಜರಿ, ಗಂಗಾವತಿ ಪ್ರಾಣೇಶ ಮತ್ತು ತಂಡದಿಂದ ಹಾಸ್ಯಸಂಜೆ, 11ರಂದು ರಾತ್ರಿ 10.30 ಗಂಟೆಗೆ ಮುಂಬೈನ ನೀತಿ ಮೋಹನ್ ತಂಡದವರಿಂದ 10.30ಕ್ಕೆ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.

ಕಡಲೆಕಾಳು ಗಣಪ ವೇದಿಕೆ:

11ರಂದು ಬೆಳಿಗ್ಗೆ 10.30 ಗಂಟೆಗೆ ರಾಜ್ಯ ವಿಜ್ಞಾನ ಪರಿಷತ್ತಿನ ಉಪಾಧ್ಯಕ್ಷ ಡಾ.ಹುಲಿಕಲ್ ನಟರಾಜ ಪವಾಡ ಅನಾವರಣ ಮಾಡಲಿದ್ದಾರೆ. ಚಿತ್ರ ನಿರ್ಮಾಪಕ ಎಂ.ಡಿ. ಕೌಶಿಕ್ ಅವರು ಜೀವನದಲ್ಲಿ ಕಗ್ಗ ಮ್ಯಾಜಿಕ್ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

ಹಂಪಿ ಉತ್ಸವದ ಸಮಾರೋಪ:

ಉತ್ಸವದ ಸಮಾರೋಪ ಸಮಾರಂಭವು ಜ.11ರಂದು ಸಂಜೆ 6ಕ್ಕೆ ಶ್ರೀಕೃಷ್ಣ ದೇವರಾಯ ವೇದಿಕೆ (ಗಾಯತ್ರಿ ಪೀಠ) ಯಲ್ಲಿ ನಡೆಯಲಿದ್ದು, ಕೇಂದ್ರ ಸಚಿವ ಪ್ರಹ್ಲಾದ್​ ಸಿಂಗ್ ಪಟೇಲ್ ಸಮಾರೋಪ ಭಾಷಣ ಮಾಡಲಿದ್ದಾರೆ.

Intro:ಐತಿಹಾಸಿಕ ಪ್ರಸಿದ್ಧ ಹಂಪಿ‌ ಉತ್ಸವಕ್ಕೆ ನಾಳೆ ವಿದ್ಯುಕ್ತ ಚಾಲನೆ
ಸಿಎಂ ಬಿಎಸ್ ವೈ ಅವರಿಂದ ಉದ್ಘಾಟನೆ; ಕನ್ನಡ ಚಲನಚಿತ್ರದ ರಾಕಿಂಗ್ ಸ್ಟಾರ್ ಯಶ್ ತಾರಾ ಮೆರಗು
ಬಳ್ಳಾರಿ: ನೆರೆಯ ನೆಪವೊಡ್ಡಿ ಮುಂದೂಡಲಾಗಿದ್ದ ಜಿಲ್ಲೆಯ ಐತಿಹಾಸಿಕ ಪ್ರಸಿದ್ಧ ಹಂಪಿ ಉತ್ಸವವನ್ನು ಜನವರಿ 10 ಮತ್ತು 11ರಂದು ಅತ್ಯಂತ ವಿಜೃಂಭಣೆಯಿಂದ ಆಚರಿಸಲು ಜಿಲ್ಲಾಡಳಿತ ಸಕಲ ತಯಾರಿಯನ್ನು ನಡೆಸಿಕೊಂಡಿದ್ದು, ಶುಕ್ರವಾರ ಸಂಜೆ 7.30 ಗಂಟೆಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವ್ರು ವಿದ್ಯುಕ್ತ ವಾಗಿ ಚಾಲನೆ ನೀಡಲಿದ್ದು, ಕನ್ನಡ ಚಲನಚಿತ್ರದ ನಟ ರಾಕಿಂಗ್ ಯಶ್ ತಾರಾ ಮೆರಗು‌ ನೀಡಲಿದ್ದಾರೆ.
ಜಿಲ್ಲೆಯ‌ ಹೊಸಪೇಟೆ ತಾಲೂಕಿನ‌ ಹಂಪಿಯಲ್ಲಿ ಜಿಲ್ಲಾಡಳಿತ ನಾಲ್ಕು ವೇದಿಕೆಗಳನ್ನು‌ ನಿರ್ಮಿಸಲಾಗಿದೆ. ಶ್ರೀಕೃಷ್ಣದೇವರಾಯ (ಗಾಯತ್ರಿ ಪೀಠ) ವೇದಿಕೆ, ಎದುರು ಬಸವಣ್ಣ ವೇದಿಕೆ, ಶ್ರೀವಿರು ಪಾಕ್ಷೇಶ್ವರ ದೇವಸ್ಥಾನ ವೇದಿಕೆ, ಕಡಲೆಕಾಳು ಗಣಪ ವೇದಿಕೆಯ ತಯಾರಿ ಕಾರ್ಯವು ಭರದಿಂದ ಸಾಗಿದೆ. ಮುಖ್ಯವೇದಿಕೆಯಲ್ಲಿ ಹಂಪಿ ಉತ್ಸವಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡುವ ಹಿನ್ನಲೆಯಲ್ಲಿ ವಿಶೇಷ ಅತಿಥಿಗಳು ಸೇರಿದಂತೆ ಸಾರ್ವಜನಿಕರ ಗ್ಯಾಲರಿಗಳನ್ನು ಅತ್ಯಂತ ವ್ಯವಸ್ಥಿತವಾಗಿ ಮಾಡಲಾಗುತ್ತಿದೆ.
ಜ.8 ರಿಂದ 12ರವರೆಗೆ ಕಮಲಾಪುರ ಹೋಟೆಲ್ ಮಯೂರ ಭುವನೇಶ್ವರಿ ಆವರಣದಲ್ಲಿ ಬೆಳಿಗ್ಗೆ 10ರಿಂದ ಸಂಜೆ 6ರ ವರೆಗೆ ಹಂಪಿ ಬೈ ಸ್ಕೈ (ಆಗಸದಲ್ಲಿ ಹಂಪಿ) ಏರ್ಪಡಿಸಲಾಗಿದೆ.
ಜ.10ರಿಂದ 11ರವರೆಗೆ ಬೆಳಗ್ಗೆ 9.30ರಿಂದ ಸಾಸುವೆಕಾಳು
ಗಣಪ ಮುಂಭಾಗದಲ್ಲಿ ಸಾಹಸ ಕ್ರೀಡೆಗಳು ನಡೆಯಲಿವೆ.
ಜ.11ರಂದು ಕಮಲಾಪುರ ಕೆರೆಯಲ್ಲಿ ಸಂಜೆ 4ಕ್ಕೆ ಪಾರಂಪರಿಕ ಸ್ಪರ್ಧೆ ಮತ್ತು ಮಾತಂಗ ಪರ್ವತ ಮೈದಾನದ ಆವರಣದಲ್ಲಿ ಮತ್ಸ್ಯಮೇಳ ಆಯೋಜಿಸಲಾಗಿದೆ.
ಈ ಎರಡು ದಿನಗಳಕಾಲ ಹಂಪಿ ವಿರೂಪಾಕ್ಷ ದೇವಸ್ಥಾನದ ಮುಂಭಾಗದಲ್ಲಿ ರಂಗೋಲಿ, ಮೆಹಂದಿ ಪ್ರದರ್ಶನ ನಡೆಯಲಿದೆ.
ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸಂಗಪ್ಪ ಸವದಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಬಿ. ಶ್ರೀರಾಮುಲು, ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಸೇರಿದಂತೆ ಇತರೆ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ವಿಜಯನಗರ ವಿಧಾನಸಭಾ ಕ್ಷೇತ್ರ ಶಾಸಕ ಅನಂದಸಿಂಗ್ ಉತ್ಸವದ ಅಧ್ಯಕ್ಷತೆ ವಹಿಸಲಿದ್ದಾರೆ. 
Body:ಹಂಪಿ ಉತ್ಸವದ ಸಮಾರೋಪ: ಹಂಪಿ ಉತ್ಸವದ ಸಮಾರೋಪ ಸಮಾರಂಭವು ಜ.11ರಂದು ಸಂಜೆ 6ಕ್ಕೆ ಶ್ರೀಕೃಷ್ಣ ದೇವರಾಯ ವೇದಿಕೆ (ಗಾಯತ್ರಿ ಪೀಠ) ಯಲ್ಲಿ ನಡೆಯಲಿದೆ.
ಕೇಂದ್ರ ಸಚಿವ ಪ್ರಹ್ಲಾದಸಿಂಗ್ ಪಟೇಲ್ ಸಮಾರೋಪ ಸಮಾರಂಭದ ಭಾಷಣ ಮಾಡಲಿದ್ದಾರೆ.
ಶ್ರೀಕೃಷ್ಣದೇವರಾಯ ವೇದಿಕೆ(ಗಾಯತ್ರಿ ಪೀಠ): 10ರಂದು ರಾತ್ರಿ 10.30 ಗಂಟೆಗೆ ಬೆಂಗಳೂರಿನ ಮನೋಮೂರ್ತಿ ಮತ್ತು ತಂಡ ದಿಂದ ರಸಮಂಜರಿ. ಗಂಗಾವತಿ ಪ್ರಾಣೇಶ ಮತ್ತು ತಂಡದಿಂದ ಹಾಸ್ಯಸಂಜೆ. 11ರಂದು ರಾತ್ರಿ 10.30 ಗಂಟೆಗೆ ಮುಂಬೈನ ನೀತಿ ಮೋಹನ್ ತಂಡದವರಿಂದ 10.30ಕ್ಕೆ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.
ಕಡಲೆಕಾಳು ಗಣಪ ವೇದಿಕೆ: 11ರಂದು ಬೆಳಿಗ್ಗೆ 10.30 ಗಂಟೆಗೆ ರಾಜ್ಯ ವಿಜ್ಞಾನ ಪರಿಷತ್ತಿನ ಉಪಾಧ್ಯಕ್ಷ ಡಾ.ಹುಲಿಕಲ್ ನಟರಾಜ ಪವಾಡ ಅನಾವರಣ ಮಾಡಲಿದ್ದಾರೆ. ಚಿತ್ರ‌ ನಿರ್ಮಾಪಕ ಎಂ.ಡಿ. ಕೌಶಿಕ್ ಅವರಿಂದ ಜೀವನದಲ್ಲಿ ಕಗ್ಗ ಮ್ಯಾಜಿಕ್ ಕಾರ್ಯಕ್ರಮ ವನ್ನು ನಡೆಸಿಕೊಡಲಿದ್ದಾರೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_2_HAMPI_USTAVA_CURTAN_RAISER_VSL_7203310

KN_BLY_2a_HAMPI_USTAVA_CURTAN_RAISER_VSL_7203310

KN_BLY_2b_HAMPI_USTAVA_CURTAN_RAISER_VSL_7203310

KN_BLY_2c_HAMPI_USTAVA_CURTAN_RAISER_VSL_7203310

KN_BLY_2d_HAMPI_USTAVA_CURTAN_RAISER_VSL_7203310

KN_BLY_2e_HAMPI_USTAVA_CURTAN_RAISER_VSL_7203310

KN_BLY_2f_HAMPI_USTAVA_CURTAN_RAISER_VSL_7203310

KN_BLY_2g_HAMPI_USTAVA_CURTAN_RAISER_VSL_7203310

KN_BLY_2h_HAMPI_USTAVA_CURTAN_RAISER_VSL_7203310

KN_BLY_2i_HAMPI_USTAVA_CURTAN_RAISER_VSL_7203310
Last Updated : Jan 9, 2020, 8:57 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.