ಬಳ್ಳಾರಿ : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೂರಾರು ಆರೋಗ್ಯ ಸಹಾಯಕರ (ಗುತ್ತಿಗೆ- ಹೊರಗುತ್ತಿಗೆ) ಸೇವೆಯನ್ನ ಖಾಯಂಗೊಳಿಸಬೇಕು. ಸೇವಾ ಭದ್ರತೆ ಒದಗಿಸಬೇಕೆಂದು ಆಗ್ರಹಿಸಿ ಇಂದು ಪ್ರತಿಭಟನೆ ನಡೆಸಲಾಯಿತು.
ಇಲ್ಲಿನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಡಿಹೆಚ್‌ಒ) ಕಚೇರಿಯ ಆವರಣದಲ್ಲಿಂದು ನೂರಾರು ಆರೋಗ್ಯ ಸಹಾಯಕರು ಜಮಾಯಿಸಿ ಗುತ್ತಿಗೆ-ಹೊರಗುತ್ತಿಗೆ ಕೊರೊನಾ ವಾರಿಯರ್ಸ್ಗಳಿಗೆ ಚಪ್ಪಾಳೆ ಬೇಡ. ಸರ್ಕಾರಿ ಸೌಲಭ್ಯ ಕೊಡಿ ಎಂಬ ಘೋಷವಾಕ್ಯದ ನಾಮಫಲಕಗಳನ್ನ ಪ್ರದರ್ಶಿಸುವ ಮೂಲಕ ಬೃಹತ್ ಪ್ರತಿಭಟನೆ ನಡೆಸಿದ್ರು.
ಭಾರತೀಯ ಮಜ್ದೂರ್ ಸಂಘದಿಂದ ಆಯೋಜಿಸಿದ್ದ ಈ ಪ್ರತಿಭಟನೆಯಲ್ಲಿ ನೂರಾರು ಆರೋಗ್ಯ ಸಹಾಯಕರೆಲ್ಲರೂ ಕೂಡ ಒಗ್ಗಟ್ಟಿನ ಮಂತ್ರ ಜಪಿಸಿದ್ರು. ನಾವೆಲ್ಲರೂ ಒಗ್ಗೂಡಿದ್ರೆ ಏನೆಲ್ಲಾ ಸಾಧಿಸಬಹುದು. ಹೀಗಾಗಿ, ಯಾರೊಬ್ಬರೂ ಕೂಡ ಗಾಳಿ ಸುದ್ದಿಗೆ ಕಿವಿಗೊಡಬಾರದು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದಡಿ ಕರ್ತವ್ಯ ನಿರ್ವಹಿಸುತ್ತಿರುವ ರಾಜ್ಯದ 30,000 ಆರೋಗ್ಯ ಸಹಾಯಕರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಅಗತ್ಯ ಸೇವಾ ಭದ್ರತೆಯನ್ನ ಒದಗಿಸಬೇಕೆಂದು ಹೊರಗುತ್ತಿಗೆ ಆರೋಗ್ಯ ಸಹಾಯಕರಾದ ಜಾನ್ ಹಾಗೂ ಶರತ್ ಒತ್ತಾಯಿಸಿದ್ದಾರೆ.