ETV Bharat / state

ಉಪ್ಪು ನೀರು- ಅರಿಶಿಣ ನೀರಿಂದ ಗಾರ್ಗಲ್​​ ಮಾಡಿದ್ರೆ ಸೋಂಕು ಮಾಯ : ಆರೋಗ್ಯ ಸಚಿವರ ಹೆಲ್ತ್ ಟಿಪ್ಸ್..! - ಕೊರೊನಾ ವೈರಸ್ ಪಾಸಿಟಿವ್ ಪ್ರಕರಣ

ಎಲ್ಲರೂ ಕೂಡ ಮನೆಯಲಿ ಗಂಟಲು ಗಾರ್ಗಲ್​​ ಮಾಡಿ, ತಣ್ಣನೆಯ ನೀರು ಬದಲಿಗೆ ಬಿಸಿ ನೀರನ್ನ ಸೇವನೆ ಮಾಡಿ. ಅದರಿಂದ ಸ್ವಲ್ಪನಾದ್ರೂ ರಿಲ್ಯಾಕ್ಸ್ ಸಿಗಲಿದೆ ನಿಮಗೆ. ನಾನಂತೂ ಎಂಬಿಬಿಎಸ್ ಡಾಕ್ಟರ್ ಅಲ್ಲ. ಎಲ್ಲೋ ಒಂದುಕಡೆ ಈ ಆರ್ಟಿಕಲ್ ಓದುವಾಗ ಇಂತಹ ಅಂಶಗಳನ್ನ ಸೂಕ್ಷ್ಮವಾಗಿ ಗಮನಿಸಿದ್ದೆ. ಹೀಗಾಗಿ, ನಿಮಗೆ ಈ ಸಲಹೆ ನೀಡಿರುವೆ ಎಂದು ಸಚಿವ ಶ್ರೀರಾಮುಲು ತಿಳಿಸಿದ್ರು.

Health Minister Sriramulu
ಆರೋಗ್ಯ ಸಚಿವರ ಹೆಲ್ತ್ ಟಿಪ್ಸ್
author img

By

Published : Apr 18, 2020, 5:59 PM IST

ಬಳ್ಳಾರಿ: ಕೊರೊನಾ ವೈರಸ್ ತಡೆಗೆ ಸದ್ಯಕ್ಕಂತೂ ಯಾವುದೇ ಔಷಧ ಇಲ್ಲ. ಸಾರ್ವಜನಿಕರು ದಿನಕ್ಕೆ ಮೂರು ಬಾರಿಯಾದ್ರೂ ಉಪ್ಪು ನೀರು ಅಥವಾ ಅರಿಶಿಣ ನೀರಿಂದ ಗಂಟಲು ಗಾರ್ಗಲ್​​ ಮಾಡಿ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಹೆಲ್ತ್ ಟಿಪ್ಸ್ ನೀಡಿದ್ದಾರೆ.

ಬಳ್ಳಾರಿಯ ಮಿಲ್ಲರ್ ಪೇಟೆಯ ರೂಪನಗುಡಿ ರಸ್ತೆಯಲ್ಲಿಂದು ಬಡ ಮತ್ತು ಕೂಲಿ ಕಾರ್ಮಿಕರಿಗೆ ರೇಷನ್ ಕಿಟ್​ಗಳನ್ನ ವಿತರಿಸಿ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಕೊರೊನಾ ವೈರಸ್ ತಡೆಗಾಗಿ ಸದ್ಯಕ್ಕಂತೂ ಯಾವುದೇ ಔಷಧ ರೆಡಿಯಾಗಿಲ್ಲ. ಹೀಗಾಗಿ, ದಿನಾಲೂ ಮೂರು ಬಾರಿಯಾದ್ರೂ‌‌ ಉಪ್ಪು ನೀರು ಅಥವಾ ಅರಿಶಿಣ ಮಿಶ್ರಿತ ನೀರಿಂದ ಗಂಟಲು ಗಾರ್ಗಲ್​ ಮಾಡಿಕೊಳ್ಳಬೇಕು. ಯಾಕಂದ್ರೆ ನಾನೊಂದು ಆರ್ಟಿಕಲ್ ಓದುತ್ತಿರುವಾಗ ಈ ಅಂಶವನ್ನ ಉಲ್ಲೇಖ ಮಾಡಲಾಗಿತ್ತು. ಚೈನಾ ದೇಶದಲ್ಲೂ‌ ಕೂಡ ಬಹಳಷ್ಟು‌ ಮಂದಿ‌ ಉಪ್ಪು ಹಾಕಿ ಕೊಂಡು‌ ಈ ಥರನಾದ ಗಾರ್ಗಲ್​​​ ಮಾಡಿಕೊಂಡು ಈ ಮಹಾಮಾರಿ ಕೊರೊನಾ ವೈರಸ್​ನಿಂದ ಗುಣಮುಖರಾಗಿದ್ದಾರೆ.

ಹೀಗಾಗಿ, ಎಲ್ಲರೂ ಕೂಡ ಮನೆಯಲಿ ಗಂಟಲು ಗಾರ್ಗಲ್​​ ಮಾಡಿ. ತಣ್ಣನೆಯ ನೀರು ಬದಲಿಗೆ ಬಿಸಿ ನೀರನ್ನ ಸೇವನೆ ಮಾಡಿ. ಅದರಿಂದ ಸ್ವಲ್ಪನಾದ್ರೂ ರಿಲ್ಯಾಕ್ಸ್ ಸಿಗಲಿದೆ ನಿಮಗೆ. ನಾನಂತೂ ಎಂಬಿಬಿಎಸ್ ಡಾಕ್ಟರ್ ಅಲ್ಲ. ಎಲ್ಲೋ ಒಂದುಕಡೆ ಈ ಆರ್ಟಿಕಲ್ ಓದುವಾಗ ಇಂತಹ ಅಂಶಗಳನ್ನ ಸೂಕ್ಷ್ಮವಾಗಿ ಗಮನಿಸಿದ್ದೆ. ಹೀಗಾಗಿ, ನಿಮಗೆ ಈ ಸಲಹೆ ನೀಡಿರುವೆ ಎಂದು ಸಚಿವ ಶ್ರೀರಾಮುಲು ಸ್ಪಷ್ಟನೆಯನ್ನೂ ಕೊಟ್ಟರು.

ಮೊದಲನೆಯ ಹಂತದ ಹಾಗೂ ಎರಡನೆಯ ಹಂತದ ಲಾಕ್​ಡೌನ್ ಮುಕ್ತಾಯಗೊಂಡಿತು. ಇನ್ನೂ ಮೂರನೆಯ ಹಂತದ ಲಾಕ್​ಡೌನ್​ಗೆ ಸಾರ್ವಜನಿಕರ ಸಹಕಾರ ಬಹುಮುಖ್ಯ. ಹೀಗಾಗಿ, ಎಲ್ಲೆಲ್ಲಿ ಕೊರೊನಾ ವೈರಸ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿಲ್ಲ, ಆ ಕಡೆಗಳಲ್ಲಿ ಹಂತ ಹಂತವಾಗಿ ಲಾಕ್​​ಡೌನ್​ ಸಡಿಲಿಕೆಗೊಳಿಸುವ ಬಗ್ಗೆ ಶಾಸಕಾಂಗ ಪಕ್ಷದಲ್ಲಿ ಪ್ರಸ್ತಾಪಿ ಅಭಿಪ್ರಾಯ ಪಡೆಯಲಾಗುವುದು ಎಂದು ಇದೇ ವೇಳೆ ರಾಮುಲು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.