ಬಳ್ಳಾರಿ: ಜೀವನದಲ್ಲಿ ಆರೋಗ್ಯ ಬಹಳ ಮುಖ್ಯ, ಆರೋಗ್ಯವಾಗಿರಬೇಕಾದ್ರೆ ಕ್ರೀಡೆಗಳಲ್ಲಿ ಭಾಗವಹಿಸಬೇಕೆಂದು ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ್ ರೆಡ್ಡಿ ತಿಳಿಸಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಕ್ರೀಡಾಕೂಟ ಇಂದಿನಿಂದ ಎರಡು ದಿನಗಳವರೆಗೆ ನಡೆಯಲಿದೆ ಎಂದು ಯುವಜನ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಹರಿಸಿಂಗ್ ರಾಥೋಡ್ ತಿಳಿಸಿದರು.
ನಗರದ ಶಾಸಕ ಜಿ.ಸೋಮಶೇಖರ್ ರೆಡ್ಡಿ ಅವರು ಸಸಿಗೆ ನೀರು ಹಾಕುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ಮನುಷ್ಯನಿಗೆ ಜೀವನದಲ್ಲಿ ಹಣಕ್ಕಿಂತ ಆರೋಗ್ಯ ಬಹಳ ಮುಖ್ಯ, ಆರೋಗ್ಯವಾಗಿ ಇರಬೇಕಾದ್ರೇ ವ್ಯಾಯಾಮ, ಯೋಗ ಮತ್ತು ಇನ್ಜಿತರ ಕ್ರೀಡೆಗಳಲ್ಲಿ ಪ್ರತಿ ನಿತ್ಯ ಅಭ್ಯಾಸ ಮಾಡುವುದರಿಂದ ಉತ್ತಮವಾಗಿರಬಹುದು ಎಂದು ತಿಳಿಸಿದರು.
ನಂತರ ಕ್ರೀಡಾಂಗಣದಲ್ಲಿ ಓಟ, ಕಬ್ಬಡ್ಡಿ, ವಾಲಿಬಾಲ್, ಫುಟ್ಬಾಲ್, ಈಜು, ಕ್ರಿಕೆಟ್, ಎತ್ತರ ಜಿಗಿತ, ಉದ್ದ ಜಿಗಿತ, ಗುಂಡು ಎಸೆತ, ಚೆಸ್, ಕುಸ್ತಿ ಇನ್ನಿತರ ಕ್ರೀಡೆಗಳು ನಡೆದವು. ಈ ಕಾರ್ಯಕ್ರಮದಲ್ಲಿ ಯುವಸಬಲೀಕರಣ ಸಹಾಯಕ ನಿರ್ದೇಶಕ ಹರಿಸಿಂಗ್ ರಾಥೋಡ್, ಜಿಲ್ಲಾಧ್ಯಕ್ಷ ಶಿವಾಜಿರಾವ್, ಗೌರವಧ್ಯಕ್ಷ ಡಾ.ಎಂ.ಟಿ ಮಲ್ಲೇಶ್, ಜಿಕೆ. ರಾಮಕೃಷ್ಣ, ಎಸ್.ಎಂ ಭದ್ರಯ್ಯ, ಡಿ.ಗುರುರಾಜು, ಪಿ.ನಾಗರಾಜು, ದೈಹಿಕ ಶಿಕ್ಷ ಎರಿಸ್ವಾಮಿ ಮತ್ತು ನೂರಾರು ಸರ್ಕಾರಿ ಇಲಾಖೆಯ ಶಿಕ್ಷಕರು ಭಾಗವಹಿಸಿದ್ದರು.
ಕ್ರೀಡಾಕೂಟಕ್ಕೆ ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ್ ರೆಡ್ಡಿ ಅವರು ಎರಡು ಗಂಟೆ ತಡವಾಗಿ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ್ದರಿಂದ ಜಿಲ್ಲೆಯ ವಿವಿಧ ತಾಲೂಕಿನ ಕ್ರೀಡಾಪಟುಗಳು ಮೈದಾನದಲ್ಲಿಯೇ ಕಾಲಕಳೆಯುವ ಪರಿಸ್ಥಿತಿ ನಿರ್ಮಾಣವಾಗಿತ್ತು.