ಹೊಸಪೇಟೆ : ವಿಜಯನಗರ ಜಿಲ್ಲೆ ಘೋಷಣೆಯಾಗಿರುವುದು ಖುಷಿಯ ಸಂಗತಿ. ಹಾಗಾಗಿ, ವಿಜಯನಗರ ನೆಲಕ್ಕೆ ತಲೆಕೊಟ್ಟು ನಮಸ್ಕಾರ ಮಾಡಿದ್ದೇನೆ ಎಂದು ಹಜ್ ಮತ್ತು ವಕ್ಫ್ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.
ನಗರದ ತಾಲೂಕು ಕ್ರೀಡಾಂಗಣದಲ್ಲಿ ಅವರು ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಸಿಎಂ ಯಡಿಯೂರಪ್ಪ, ಕಂದಾಯ ಸಚಿವ ಆರ್. ಅಶೋಕ್ ಸೇರಿದಂತೆ ಎಲ್ಲರಿಗೂ ಧನ್ಯವಾದಗಳು. ಪಶ್ಚಿಮ ತಾಲೂಕುಗಳ ಜನರ ಬೇಡಿಕೆ ಈಡೇರಿದೆ ಎಂದರು.
ಓದಿ:ವಿಜಯನಗರದ ಮಣ್ಣಿಗೆ ಮುತ್ತಿಟ್ಟ ಸಚಿವ ಆನಂದ್ ಸಿಂಗ್ : ಭರ್ಜರಿ ವಿಜಯೋತ್ಸವ
ಜಿಲ್ಲೆ ಅಭಿವೃದ್ಧಿ ಆಗಲಿದೆ. ಜಿಲ್ಲೆ ವಿಭಜನೆಯಿಂದ ತೊಂದರೆಯಾಗುವುದಿಲ್ಲ. ವಿರೋಧ ಮಾಡಿದವರು ನಮ್ಮ ಅಣ್ಣ-ತಮ್ಮಂದಿರು. ಗಡಿ ವಿಚಾರಕ್ಕೆ ಬಂದ್ರೆ ನಾವೆಲ್ಲಾ ಒಂದೇ.. ಬಳ್ಳಾರಿಗೆ ಬಂದು ಬೇರೆಯವರು ಈ ಜಿಲ್ಲೆ ಕೊಡಿ ಅಂದ್ರೆ ಬಿಡ್ತೀವಾ ಎಂದರು.