ಹೊಸಪೇಟೆ: ನಗರದಲ್ಲಿ ಮತ್ತು ಕಂಪ್ಲಿ ತಾಲೂಕಿನ ಸುತ್ತ ಮುತ್ತಲಿನ ರೈತರು ಸುಮಾರು 6 ರಿಂದ 8 ಸಾವಿರ ಎಕರೆ ಪ್ರದೇಶದಲ್ಲಿ ಬಾಳೆ ಬೆಳೆದಿದ್ದು. ಬೆಲೆ ಇಲ್ಲದೆ ಕಂಗಾಲಾಗಿದ್ದಾರೆ.
ಬಾಳೆ ಹಣ್ಣನ್ನು ಮಾರಾಟ ಮಾಡಲು ಹೋದರೆ ಎಪಿಎಂಸಿ ಮಾರುಕಟ್ಟೆಯಲ್ಲಿ ಬಾಳೆಹಣ್ಣಿನ ವರ್ತಕರು ಹಣ್ಣನ್ನು ಖರೀದಿ ಮಾಡುತ್ತಿಲ್ಲ. ವರ್ತಕರು ಖರೀದಿ ಮಾಡಿರುವ ಹಣ್ಣುಗಳನ್ನು ಯಾರೂ ಕೊಂಡುಕೊಳ್ಳುಲು ಮುಂದಾಗುತ್ತಿಲ್ಲ. ಜನರು ಖರೀದಿಸಲು ಹಿಂದೆ ಮುಂದೆ ಯೋಚಿಸುತ್ತಿದ್ದಾರೆ. ಬಲವಂತವಾಗಿ ಮಾರಾಟ ಮಾಡಲು ಹೋದರೆ ದಲ್ಲಾಳಿಗಳು 1ಕೆ.ಜಿ.ಏಲಕ್ಕಿ ಬಾಳೆಹಣ್ಣಿಗೆ 3 ರೂಪಾಯಿ ಸುಗಂಧಿ ಬಾಳೆ ಹಣ್ಣಿಗೆ 2 ರೂಪಾಯಿಗೆ ಕೊಟ್ಟರೆ ತೆಗೆದುಕೊಳ್ಳುತ್ತೇವೆ ಎನ್ನುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಲಾಕ್ ಡೌನ್ನಿಂದಾಗಿ ಬಾಳೆಗೊನೆ ಸದ್ಯದ ಸ್ಥಿತಿಯಲ್ಲಿ ಬೆಲೆಯಿಲ್ಲದೆ ಮರದಲ್ಲಿ ಒಣಗಿ ಹೋಗುತ್ತಿವೆ. ರೈತರು ಬೆಳೆದ ಬಾಳೆಯ ಗೊನೆಯನ್ನು ಸರ್ಕಾರವು ಕೂಡಲೆ ಖರೀದಿಸಬೇಕು. ಬೆಳೆಗೆ ಪ್ರೋತ್ಸಾಹ ಧನವನ್ನು ನೀಡಬೇಕು. ತೆಲಂಗಾಣ ರಾಜ್ಯ ಸರ್ಕಾರ ರೈತರಿಗೆ 33ಸಾವಿರ ಕೋಟಿ ವಿಶೇಷ ಪ್ಯಾಕೇಜ್ ಪೋಷಣೆ ಮಾಡಿದೆ. ಅದರಂತೆ ಇಲ್ಲಿನ ರೈತರಿಗೆ ಕರ್ನಾಟಕ ಸರ್ಕಾರ ವಿಶೇಷ ಪ್ಯಾಕೇಜನ್ನು ಘೋಷಣೆ ಮಾಡಬೇಕು ಎಂದರು.