ETV Bharat / state

ಹೊಸಪೇಟೆಯಲ್ಲಿ ವಿನಾಯಕ ಚತುರ್ಥಿ ಸಂಭ್ರಮ

ಮನೆಯಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಿ‌ ಜನರು ಕುಟುಂಬ ಸಮೇತ ಪೂಜೆ ಮಾಡಿದರು. ಗಣೇಶನಿಗೆ ಕಡಬು ಸೇರಿದಂತೆ ನಾನಾ ಸಿಹಿ ಖಾದ್ಯ ಹಾಗೂ ವಿವಿಧ ಬಗೆಯ ಹಣ್ಣುಗಳನ್ನು ನೈವೇದ್ಯ ಮಾಡಲಾಗಿತ್ತು.

ganesh-chaturthi-celebration-in-hosapete
ಹೊಸಪೇಟೆಯಲ್ಲಿ ವಿನಾಯಕ ಚತುರ್ಥಿ ಸಂಭ್ರಮ
author img

By

Published : Aug 22, 2020, 4:40 PM IST

Updated : Aug 22, 2020, 5:51 PM IST

ಹೊಸಪೇಟೆ : ತಾಲೂಕಿನಲ್ಲಿ ಗಣೇಶ ಚತುರ್ಥಿಯನ್ನು ಜನರು ಸಡಗರ ಸಂಭ್ರಮದಿಂದ ಆಚರಿಸಿದರು. ದೇವಸ್ಥಾನ ಹಾಗೂ ಮನೆಗಳಲ್ಲಿ ವಿನಾಯಕ ಮೂರ್ತಿಯನ್ನು ಪ್ರತಿಷ್ಠಾಪಿಸಿ ಭಕ್ತಿ, ಶ್ರದ್ಧೆಯಿಂದ ಪೂಜೆಗೈದರು.

ಹೊಸಪೇಟೆಯಲ್ಲಿ ವಿನಾಯಕ ಚತುರ್ಥಿ ಸಂಭ್ರಮ

ಪಟೇಲ ನಗರ, ಚಿತ್ರಕೇರಿ, ಚಪ್ಪರದಹಳ್ಳಿ, ಚಿತ್ತವಾಡ್ಗಿ, ಬಸವೇಶ್ವರ ಬಡಾವಣೆ, ಮೃತ್ಯುಂಜಯ ನಗರ, ಎಂ.ಪಿ.ಪ್ರಕಾಶ ನಗರ ಸೇರಿದಂತೆ ಎಲ್ಲೆಡೆ ಗಣೇಶ ಹಬ್ಬವನ್ನು ಭಕ್ತಿ, ಭಾವದಿಂದ ಆಚರಿಸಲಾಯಿತು. ಮೃತ್ಯುಂಜಯ ನಗರದ ಪ್ರಾರ್ಥನಾ ಮಂದಿರಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು.

ವಿನಾಯಕ ಚತುರ್ಥಿ ಸಂಭ್ರಮ
ಗಣಪನನ್ನು ಹೊತ್ತು ತರುತ್ತಿರುವ ಚಿಣ್ಣರು

ಮನೆಯಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಿ‌ ಜನರು ಕುಟುಂಬ ಸಮೇತ ಪೂಜೆ ಮಾಡಿದರು. ಗಣೇಶನಿಗೆ ಕಡಬು ಸೇರಿದಂತೆ ನಾನಾ ಸಿಹಿ ಖಾದ್ಯ ಹಾಗೂ ವಿವಿಧ ಬಗೆಯ ಹಣ್ಣುಗಳನ್ನು ನೈವೇದ್ಯ ಮಾಡಲಾಗಿತ್ತು. ಅಲ್ಲದೇ, ಗಣೇಶ ಮೂರ್ತಿಗೆ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು. ಗಣೇಶ ಭಕ್ತಿಗೀತೆಗಳನ್ನು ಹಾಡಿ ಸಂಭ್ರಮಿಸಿದರು.

Last Updated : Aug 22, 2020, 5:51 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.